ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್,16 : ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಚಿತ್ರದುರ್ಗ, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 20 ಮತ್ತು 21ರಂದು ಸಂಜೆ 5.30ಕ್ಕೆ ಚಿತ್ರದುರ್ಗ ನಗರ ತರಾಸು ರಂಗಮಂದಿರದಲ್ಲಿ ಬಾದರದಿನ್ನಿ ರಂಗೋತ್ಸವ-ಗೀತ ಗಾಯನ, ನಾಟಕಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 20ರಂದು ಸಂಜೆ 5.30ಕ್ಕೆ ನಗರ ತರಾಸು ರಂಗಮಂದಿರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸುವರು. ನೀನಾಸಂ ಪದವೀಧರೆ ಹಾಗೂ ಕಿರುತರೆ ಮತ್ತು ಚಿತ್ರನಟಿ ಸಿತಾರ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ.ಲೋಕೇಶ ಅಗಸನಕಟ್ಟೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ರಂಗಕರ್ಮಿ ಹಾಗೂ ಚಲನಚಿತ್ರ ನಿರ್ದೇಶಕ ಉಮೇಶ್ ಬಾದರದಿನ್ನಿ ಭಾಗವಹಿಸುವರು.
ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಅಧ್ಯಕ್ಷೆ ಅನಸೂಯ ಬಾದರದಿನ್ನಿ ಉಪಸ್ಥಿತಿವಹಿಸುವರು. ಉದ್ಘಾಟನಾ ಸಮಾರಂಭದ ನಂತರ ಉಮೇಶ್ ಬಾದರದಿನ್ನಿ ರಚನೆಯ, ಯುವರಾಜ ನಾಯ್ಕ್ ನಿರ್ದೇಶನ, ಸುಜೀತ್ ಕುಲಕರ್ಣಿ ಅವರ ಸಂಗೀತ, ಗಂಗಾಧರ್ ಅವರ ಗಾಯನ ಹಾಗೂ ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಕಲಾವಿದರು ಅಭಿನಯದ “ಒಂದು ಸಾವಿನ ಸುತ್ತ” ನಾಟಕ ಪ್ರದರ್ಶನ ನಡೆಯಲಿದೆ.
ಅಕ್ಟೋಬರ್ 21ರಂದು ಸಂಜೆ 5.30ಕ್ಕೆ ನಗರ ತರಾಸು ರಂಗಮಂದಿರದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಗಳಾಗಿ ಎನ್‍ಎಸ್‍ಡಿ ಪದವೀಧರ ಹಾಗೂ ರಂಗಕರ್ಮಿ ಸಾಂಬಶಿವ ದಳವಾಯಿ, ರಂಗನಿರ್ದೇಶಕರು ಹಾಗೂ ನೀನಾಸಂ ಪದವೀಧರ ಕೆ.ಪಿ.ಎಂ.ಗಣೇಶಯ್ಯ, ಹಿರಿಯ ಕಲಾವಿದ ಹಾಗೂ ಸಮಾಜ ಸೇವಕ ಆರ್.ಶೇಷಣ್ಣ ಕುಮಾರ್, ರಂಗಕರ್ಮಿ ಸಿ.ಪಿ.ಜ್ಞಾನದೇವ, ಗಾಯಕ ಡಿ.ಓ.ಮುರಾರ್ಜಿ ಭಾಗವಹಿಸುವರು. ಚನ್ನಬಸಣ್ಣ ಮತ್ತು ತಂಡದವರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.
ಸಮಾರಂಭದ ನಂತರ ಏಕವ್ಯಕ್ತಿ ರಂಗ ಪ್ರಯೋಗ “ತಾಯಿಯಾಗುವುದೆಂದರೆ” ನಾಟಕ ಪ್ರದರ್ಶನ ನಡೆಯಲಿದೆ. ಕೃಷ್ಣಮೂರ್ತಿ ಕವಾತ್ತರ್ ಅವರ ನಿರ್ದೇಶನ, ರಂಗರೂಪ, ಸಂಗೀತವಿದೆ. ಪೂಜಾ ರಘುನಂದನ್ ಅಭಿನಯಿಸುವರು. ಹಾಸನದ ರಂಗಹೃದಯ ತಂಡದವರು ನಾಟಕ ಪ್ರಸ್ತುತ ಪಡಿಸುವರು ಎಂದು ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ ತಿಳಿಸಿದ್ದಾರೆ.