ಬಾರಾಟಾಂಗ್ ದ್ವೀಪದ ಮಣ್ಣಿನ ಜ್ವಾಲಾಮುಖಿಯ ಹಿನ್ನಲೆ : ಜೆ. ಪರಶುರಾಮ ಅವರ ವಿಶೇಷ ಲೇಖನ…!

2 Min Read

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊಬೈಲ್ ಸಂಖ್ಯೆ : 94483 38821

ಅಂಡಮಾನ್ ಮತ್ತು ನಿಕೋಬರ್ ದ್ವೀಪ ಸಮೂಹದ ಬಾರಾಟಾಂಗ್ ದ್ವೀಪದಲ್ಲಿ 2025 ಅಕ್ಟೋಬರ್ 2 ರಂದು ಎರಡು ಬಾರಿ ಸ್ಪೋಟಿಸಿದೆ. ಇದು ಮಣ್ಣಿನ ಜ್ವಾಲಮುಖಿ. ಮತ್ತು ಬೆಂಕಿ ಉಗುಳುವ ಜ್ವಾಲಾಮುಖಿಗಿಂದ ಭಿನ್ನವಾಗಿದೆ. ಇದು ಭಾರತದ ಏಕೈಕ ಜ್ವಾಲಾಮುಖಿ. ಇದು 20 ವರ್ಷಗಳ ನಂತರ (2005) ಮತ್ತೆ ಸ್ಪೋಟಗೊಂಡಿದೆ. ಮತ್ತು 2 ರಿಂದ 3 ಮೀಟರ್ ಎತ್ತರದವರೆಗೆ ಜ್ವಾಲಮುಖಿಯಿಂದ ಹೊರಚಿಮ್ಮಿದ ಮಣ್ಣು ರಾಶಿಯಾಗಿ ರೂಪುಗೊಂಡಿದೆ. ಅಲ್ಲದೇ ಜ್ವಾಲಾಮುಖಿಯಿಂದ ಹೊರಬಂದ ಮಣ್ಣು ಮತ್ತು ಹೊಗೆ ನಿರಂತರವಾಗಿ ಬರುತ್ತಿದೆ. ಇದನ್ನು ಭೂವಿಜ್ಞಾನಿಗಳಿಂದ ಸ್ಥಳ ಪರಿಶೀಲನೆ ಮಾಡಲಾಗಿ, ಚರ್ಚೆಯಲ್ಲಿ ತೊಡಗಿದ್ದಾರೆ. ಇದು ಸುಮಾರು 1000 ಚದರ ಮೀಟರ್ ಪ್ರದೇಶವನ್ನು ಕೆಸರು ಮತ್ತು ಮಣ್ಣಿನಿಂದ ಆವರಿಸಿದೆ. ಇದರ ಅಪಾಯ ಪ್ರವಾಸಿಗರಿಗೆ ತಟ್ಟದಂತೆ ಅಲ್ಲಿನ ಪ್ರಾಧಿಕಾರವು ಕ್ರಮ ಕೈಗೊಳ್ಳಲಾಗಿದೆ. ಮತ್ತು ಅರಣ್ಯದ ಎಲ್ಲಾ ಮಾರ್ಗಗಳನ್ನು ಮುಚ್ಚಲಾಗಿದೆ. ಈ ವಿಶಿಷ್ಟ ನೈಸರ್ಗಿಕ ತಾಣಗಳು ವಿಜ್ಞಾನಾಸಕ್ತರು ಮತ್ತು ಪ್ರಕೃತಿ ಪ್ರಿಯರಿಗೆ ಪ್ರಮುಖ ಆಕರ್ಷಣೀಯ ಕೇಂದ್ರವಾಗಿದೆ.

ಅಂಡಮಾನ್‍ನಿಕೋಬರ್ ಮತ್ತು ಬಾರಾಟಾಂಗ್ ದ್ವೀಪದ ಮಣ್ಣಿನ ಜ್ವಾಲಾಮುಖಿಗಳಿಗೆ ಕಾರಣ ಸಂಶೋಧನೆಯಿಂದ ತಿಳಿದುಬಂದಿದೆ. ಈ ದ್ವೀಪಗಳು ಇಂಡಿಯನ್ ಪ್ಲೇಟ್ ಬರ್ಮೀಸ್ ಪ್ಲೇಟಿನ ಅಡಿಯಲ್ಲಿ ಜಾರುವ ಭೂಕಂಪನ ಸಕ್ರಿಯ ವಲಯದಲ್ಲಿದೆ. ಈ ತಟ್ಟೆಗಳು ಸಂಕೋಚನ ಮತ್ತು ಚಲನೆಯಿಂದಾಗಿ ಭೂಗರ್ಭದ ಹೆಚ್ಚಿನ ಒತ್ತಡ ಮತ್ತು ಉಷ್ಠತೆ ಉಂಟಾಗುತ್ತದೆ.

ಭೂಮಿಯ ಆಳದಲ್ಲಿರುವ ಸಾವಯವ ಪದಾರ್ಥಗಳು ವಿಭಜನೆ ಗೊಳ್ಳುವುದರಿಂದ ಮೀಥೆನ್ ಇಂಗಾಲದ ಡೈಆಕ್ಸೈಡ್ ಮತ್ತು ಸಾರಜನಕದಂತ ನೈಸರ್ಗಿಕ ಅನಿಲಗಳು ಉತ್ಪತ್ತಿಯಾಗುತ್ತವೆ. ಈ ಅನಿಲಗಳು ಮತ್ತು ಭೂಗರ್ಭದಲ್ಲಿರುವ ನೀರು, ಸುತ್ತ-ಮುತ್ತಲಿನ ಮಣ್ಣು ಮತ್ತು ಕೆಸರು ಮಿಶ್ರಣದ ಮೇಲೆ ಒತ್ತಡವನ್ನು ಹೆಚ್ಚಿಸುತ್ತವೆ. ಒತ್ತಡವು ನಿರ್ಧಿಷ್ಟ ಮಟ್ಟವನ್ನು ತಲುಪಿದಾಗ ಅನಿಲಮಿಶ್ರಿತದ ಕೆಸರು ಭೂಮಿಯ ಮೈಲೈಯಲ್ಲಿನ ಬಿರುಕುಗಳ ಮೂಲಕ ಹೊರಬರುತ್ತದೆ.

ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಾಣ ಸಂಸ್ಥೆ (ಜಿ.ಎಸ್.ಐ) ನಡೆಸಿದ ಅಧ್ಯಯನದ ಪ್ರಕಾರ ಬಾರಾಟಾಂಗ್ ಮಣ್ಣಿನ ಜ್ವಾಲಾಮುಖಿಯಿಂದ ಸಂಗ್ರಹಿಸಲಾದ ಮಾದರಿಗಳು ಒಲಿಗೋಸೀನ್ ((Oligocene)) ಯುಗಕ್ಕೆ ಸೇರಿದೆ. ಮತ್ತು ಸುಮಾರು 23 ಮಿಲಿಯನ್ ವರ್ಷಗಳಷ್ಟು ಹಳೆಯದಾದ ರಚನೆಯಾಗಿದೆ ಎಂದು ಭೂವೈಜ್ಞಾನಿಕವಾಗಿ ಅಂದಾಜು ಮಾಡಲಾಗಿದೆ. ಮತ್ತು ಇದು ಭಾರತದಲ್ಲಿ ಸಕ್ರಿಯ ಜ್ವಾಲಾಮುಖಿ ಎಂದು ಹೆಸರುಗಳಿಸಿದೆ.

ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)

 

Share This Article