ವೈಕುಂಠ ಏಕಾದಶಿ ಹಿನ್ನೆಲೆ : ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಪಡೆಯಲು ಬಂದು 7 ಜನ ಸಾವು : ಕಾಲ್ತುಳಿತಕ್ಕೆ ಕಾರಣವಾದರೂ ಏನು..?

suddionenews
1 Min Read

ನಾಳೆ (ಶು.10) ವೈಕುಂಠ ಏಕಾದಶಿ ಇದೆ. ಈ ಏಕಾದಶಿಯಂದು ಸತ್ತರೆ ನೇರ ಸ್ವರ್ಗ ಪ್ರಾಪ್ತಿಯಾಗುತ್ತೆ ಎಂಬ ಮಾತಿದೆ. ಅಲ್ಲದೆ ವೈಕುಂಠ ಏಕಾದಶಿಯಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವ ಭಕ್ತರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ತಿರುಪತಿಗೆ ಹೋಗುವವರು ಇದೇ ಸಮಯಕ್ಕೆ ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಈ ಹಿನ್ನೆಲೆ ತಿರುಪತಿಯಲ್ಲಿ ನೂಕು ನುಗ್ಗಲು ಉಂಟಾಗಿ, ಕಾಲ್ತುಳಿತದಿಂದ ಏಳು ಜನ ಅಸುನೀಗಿದ್ದಾರೆ.

ಶುಕ್ರವಾರ, ಜನವರಿ 10ರಂದು ವೈಕುಂಠ ಏಕಾದಶಿ ಇದೆ. ತಿರುಮಲ ಟ್ರಸ್ಟ್ ಜನವರಿ 12ರ ತನಕ ವೈಕುಂಠ ದ್ವಾರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 1 ಲಕ್ಷದ 20 ಸಾವಿರ ಟೋಕನ್ ಹಂಚಿಕೆಯಾಗುತ್ತಿದೆ. ಕೋಟ್ಯಾಂತರ ಭಕ್ತರು ತಿರುಪತಿಗೆ ಹೋಗಿ, ಬರುತ್ತಾ ಇರುತ್ತಾರೆ. ಆದರೆ ಕಡಿಮೆ ಸಂಖ್ಯೆಯಲ್ಲಿ ಟಿಕೆಟ್ ಇರುವ ಕಾರಣ ಭಕ್ತರು ಟಿಕೆಟ್ ಕೊಳ್ಳಲು ನುಗ್ಗಿ ಬಂದಿದ್ದಾರೆ.

ದೇವಸ್ಥಾನದ ಮಂಡಳಿ ದಿನಕ್ಕೆ 40 ಸಾವಿರದಂತೆ ಟಿಕೆಟ್ ಹಂಚಲು ನಿರ್ಧರಿಸಿದೆ. 9 ಕಡೆ 94 ಕೌಂಟರ್ ತೆರೆಯಲಾಗಿದೆ. ವೈಕುಂಠ ದ್ವಾರ ದರ್ಶನದ ಟಿಕೆಟ್ ಗಳನ್ನು ವಿತರಣೆ ಮಾಡಲಾಗುತ್ತಿದ್ದು, ಟಿಕೆಟ್ ಕೊಡುತ್ತಿದ್ದ ಸಿಬ್ಬಂದಿಯೊಬ್ಬ ಅಸ್ಚಸ್ಥಗೊಂಡಿದ್ದ. ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಗೇಟ್ ಓಪನ್ ಮಾಡುತ್ತಿದ್ದಂತೆ ಜನ ನುಗ್ಗಿ ಬಂದಿದ್ದಾರೆ. ಈ ವೇಳೆ ಕಾಲ್ತುಳಿತಕ್ಕೆ ಏಳು ಜನ ಸಾವನ್ನಪ್ಪಿದ್ದಾರೆ.

ತಿರುಪತಿ ತಿಮ್ಮಪ್ಪನ ಸನ್ನಿದಿಯಲ್ಲಿ ಈ ರೀತಿ ಆದದ್ದು ಇದೇ ಮೊದಲು. ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ವಿಚಾರ ಕೇಳಿ ಶಾಕ್ ಆಗಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಂದು ತಿರುಪತಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ. ಹಾಗೇ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *