ಭವಿಷ್ಯವಾಣಿಗಳಿಂದ ವಿಶ್ವದ ಗಮನ ಸೆಳೆದ ಬಾಬಾ ವಂಗಾ: ತಮ್ಮ ಸಾವಿನ ಬಗ್ಗೆಯೇ ಭವಿಷ್ಯ ನುಡಿದಿದ್ದರು

 

ಪ್ರತಿ ವರ್ಷ ಆರಂಭವಾಗುತ್ತಿದ್ದಂತೆ ಅತೀಂದ್ರಿಯ ಭವಿಷ್ಯಗಾರ್ತಿಯಾಗಿ ಖ್ಯಾತಿ ಪಡೆದ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಮತ್ತೆ ಚರ್ಚೆಗೆ ಬರುತ್ತವೆ. ಅಂತಾರಾಷ್ಟ್ರೀಯದಿಂದ ಸ್ಥಳೀಯ ಮಾಧ್ಯಮಗಳವರೆಗೆ ಅವರ ಕುರಿತು ವಿಶೇಷ ವರದಿಗಳು ಪ್ರಕಟವಾಗುತ್ತಿದ್ದು, ಅವರು ನುಡಿದ ಹಲವು ಭವಿಷ್ಯವಾಣಿಗಳು ನಿಜವಾಗಿವೆ ಎನ್ನುವ ಕಾರಣದಿಂದಲೇ ಜನರಲ್ಲಿ ಹೆಚ್ಚಿನ ಕುತೂಹಲ ಮೂಡಿಸುತ್ತಿವೆ.

ಜಗತ್ತಿನ ಭವಿಷ್ಯವಾಣಿ ವಿಚಾರದಲ್ಲಿ ಮೊದಲಿಗೆ ನೆನಪಾಗುವ ಹೆಸರೇ ಬಾಬಾ ವಂಗಾ ಎಂದು ಪರಿಗಣಿಸಲಾಗುತ್ತಿದೆ. ಅವರ ಭವಿಷ್ಯವಾಣಿಗಳಲ್ಲಿ ಸುಮಾರು 85 ಶೇಕಡಾ ಭಾಗ ನಿಜವಾಗಿವೆ ಎಂಬ ವರದಿಗಳು ಹರಿದಾಡುತ್ತಿದ್ದು, ಇದರಿಂದಲೇ ಅವರಿಗೆ ವಿಶ್ವದಾದ್ಯಂತ ವಿಶಿಷ್ಟ ಖ್ಯಾತಿ ಲಭಿಸಿದೆ.1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದ ಬಾಬಾ ವಂಗಾ ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ. ಬಾಲ್ಯದಲ್ಲೇ ಸಂಭವಿಸಿದ ಭೀಕರ ಚಂಡಮಾರುತದ ವೇಳೆ ಅವರು ದೃಷ್ಟಿ ಕಳೆದುಕೊಂಡರು ಎನ್ನಲಾಗುತ್ತದೆ. ಇದೇ ಘಟನೆ ನಂತರ ಅವರು ಅತೀಂದ್ರಿಯ ಶಕ್ತಿಯನ್ನು ಪಡೆದರು ಎಂಬ ನಂಬಿಕೆ ಇದೆ.

1996ರಲ್ಲಿ ನಿಧನರಾದ ಬಾಬಾ ವಂಗಾ ಅವರು 5079ನೇ ಇಸವಿಯವರೆಗೆ ಜಗತ್ತಿನಲ್ಲಿ ನಡೆಯಲಿರುವ ಘಟನೆಗಳನ್ನು ಮುಂಚಿತವಾಗಿ ಕಂಡಿದ್ದರು ಎಂದು ಹೇಳಲಾಗಿದೆ. ತಮ್ಮ ಸಾವಿನ ದಿನಾಂಕವನ್ನೂ ಮುಂಚಿತವಾಗಿ ತಿಳಿದುಕೊಂಡಿದ್ದ ಅವರು, 1996ರ ಆಗಸ್ಟ್ 11ರಂದು 85ನೇ ವಯಸ್ಸಿನಲ್ಲಿ ನಿಧನರಾಗುವುದಾಗಿ ಹೇಳಿದ್ದು, ಅದೇ ದಿನ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗುತ್ತದೆ. ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಸೋಫಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

Share This Article