ಬಿ.ಎಸ್.ಯಡಿಯೂರಪ್ಪ ಹುಟ್ಟು ಹಬ್ಬ : ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಫೆ. 27 : ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಹುಟ್ಟು ಹೋರಾಟಗಾರರು ಅಭಿವೃಧ್ದಿ ಹರಿಕಾರರಾದ ಬಿ.ಎಸ್.ಯಡೆಯೂರಪ್ಪರವರ 82ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಚಿತ್ರದುರ್ಗ ಜಿಲ್ಲಾ ಬಿಜೆಪಿ ಘಟಕದವತಿಯಿಂದ ನಗರದ ಅನೆಬಾಗಿಲ ಬಳಿಯಲ್ಲಿನ ಶ್ರೀ ಪ್ರಸನ್ನ ಸೇವಾ ಗಣಪತಿ ದೇವಸ್ಥಾನದಲ್ಲಿ ವಿನಾಯಕನಿಗೆ ಪೂಜೆಯನ್ನು ಸಲ್ಲಿಸುವುದರ ಮೂಲಕ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಯಡೆಯೂರಪ್ಪರವರು ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟುವುದರಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಇದರಿಂದ ರಾಜ್ಯದಲ್ಲಿ ಬಿಜೆಪಿ ಇಷ್ಟರ ಮಟ್ಟಿಗೆ ಬೆಳೆಯಲು ಸಾಧ್ಯವಾಗಿದೆ. ಬಿಜೆಪಿಯನ್ನು ಗ್ರಾಮ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಅದು ನೆಲೆ ನಿಲ್ಲುವಂತೆ ಮಾಡಿದ್ದಾರೆ. ರೈತರ ಪರವಾದ ಹೋರಾಟವನ್ನು ಮಾಡುವುದರ ಮೂಲಕ ರೈತ ನಾಯಕನಾಗಿದ್ದಾರೆ. ನಾಡಿನ ಜನತೆಗೆ ಅಭಿವೃದ್ದಿಯ ಮಹಾ ಪೂರವನ್ನು ಹರಿಸಿದ್ದಾರೆ. ಭಗವಂತ ಅವರಿಗೆ ಆರೋಗ್ಯ ಹಾಗೂ ಆಯಸ್ಸನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು.

ಯಡೆಯೂರಪ್ಪರವರು ಸುಮಾರು 45 ವರ್ಷಗಳ ಕಾಲ ಸಕ್ರಿಯವಾಗಿ ರಾಜಕಾರಣದಲ್ಲಿ ಇದ್ದರು. ಬಿಜೆಪಿಯನ್ನು ಮಧ್ಯ ಕರ್ನಾಟಕದಲ್ಲಿ ಕಟ್ಟಿ ಬೆಳಸಿ ಸರ್ಕಾರ ಬರುವ ರೀತಿಯಲ್ಲಿ ಹೋರಾಟವನ್ನು ಮಾಡಿದರು. ದೀನ ದಲಿತ ಹಿಂದುಳಿದ ವರ್ಗ ಸರ್ವ ಜನಾಂಗಕ್ಕೂ ಸಹಾ ಅಭೀವೃದ್ದಿಯನ್ನು ತೋರಿಸಿದವರು ಪ್ರತಿ ಸಮುದಾಯಕ್ಕೂ ಸಹಾ ಪ್ರಾತಿನಿತ್ಯವನ್ನು ನೀಡುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವಂತ ಕಾರ್ಯವನ್ನು ಮಾಡಿದರು.

ತಮ್ಮ ಅಧಿಕಾರದ ಅವಧಿಯಲ್ಲಿ ಜನತೆಗೆ ವಿವಿಧ ರೀತಿಯ ಯೋಜನೆಗಳನ್ನು ಜಾರಿ ಮಾಡುವುದರ ಮೂಲಕ ಜನನಾಯಕರಾಗಿದ್ದಾರೆ. ಹೆಣ್ಣು ಮಕ್ಕಳು ಜನಿಸಿದರೆ ಆವರು ಬೇರೆಯವರಿಗೆ ಹೊರೆಯಾಗಬಾರದೆಂದು ಭಾಗ್ಯಲಕ್ಷ್ಮಿ ಯೋಜನೆ ಜಾರಿ ಮಾಡಿದರು. ಇದೇ ರೀತಿ ಮಕ್ಕಳು ಅರ್ಧದಲ್ಲಿ ಶಿಕ್ಷಣವನ್ನು ಬಿಡಬಾರದೆಂದು ಅವರಿಗೆ ಉಚಿತವಾಗಿ ಸೈಕಲ್ ವಿತರಣೆ ಮಾಡುವುದರ ಮೂಲಕ ಅವರ ವಿದ್ಯಾಭ್ಯಾಸವನ್ನು ಮುಂದುವರೆಸಲು ಅವಕಾಶ ಕಲ್ಪಿಸಿದರು. ರೈತ ಸಂಕಷ್ಠ ಕಾಲದಲ್ಲಿ ಇದ್ದಾರೆ ಎಂದು ತಿಳಿದು ಅವರ ಸಮಸ್ಯೆಗೆ ಸ್ಪಂದಿಸಬೇಕೆಂದು ಕಿಸಾನ್ ಸಮ್ಮಾನ್ ನಿಧಿಯನ್ನು ಜಾರಿ ಮಾಡಿದರು. ರೈತ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿ ವೇತನವನ್ನು ನೀಡಿ ಅವರನ್ನು ಅಕ್ಷರವಂತರನ್ನಾಗಿ ಮಾಡಿದರು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಖಂಜಾಚಿ ಮಾಧುರೀ ಗೀರೀಶ್, ಮಾಧ್ಯಮ ವಕ್ತಾರರಾದ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ಶಂಭು, ಕವನ ಅರುಣಕುಮಾರಿ, ಯಶವಂತ, ವಿರೇಶ್ ಜಾಲಿಕಟ್ಟೆ, ರವಿ, ಶಿವಣ್ಣಚಾರ್, ಉಪಾಧ್ಯಕ್ಷರಾದ ರಾಜಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

 

 

 

 

Share This Article
Leave a Comment

Leave a Reply

Your email address will not be published. Required fields are marked *