ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜೂ.17 : ಚಿತ್ರದುರ್ಗ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ನಿರ್ದೇಶಕರಾಗಿ ಬಿ.ಪಿ ಪಾಪೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಂದು ರಿಟರ್ನಿಂಗ್ ಅಧಿಕಾರಿ ಎಸ್.ಸಂಜಯ್ ರಾಂ ತಿಳಿಸಿದ್ದಾರೆ.
ಚುನಾವಣಾ ದಿನಾಂಕದಿಂದ ಮುಂದಿನ ಐದು ವರ್ಷದ ಅವಧಿಗೆ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ಪಾಪೇಶ್ ಬಿಜೆಪಿ ಮುಖಂಡರಾಗಿದ್ದು, ಈ ಹಿಂದೆ ಮಾಜಿ ಸಚಿವ ಬಿ.ಶ್ರೀರಾಮುಲು ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದಾರೆ.
ಚಿತ್ರದುರ್ಗ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 12 ಜನ ನಿರ್ದೆಶಕರಾಗಿ ಆಯ್ಕೆಯಾಗ ಬಹುದಾಗಿದೆ ಇದರಲ್ಲಿ ಸಾಮಾನ್ಯ 5 ಸ್ಥಾನ, ಹಿಂದುಳಿದ ವರ್ಗ ಎ.1, ಹಿಂದುಳಿದ ವರ್ಗ ಬಿ.1, ಮಹಿಳಾ ಮೀಸಲು 02, ಪರಿಶಿಷ್ಟ ಜಾತಿ 01, ಪರಿಶಿಷ್ಟ ಪಂಗಡ 01, ಸಾಲಗಾರ ಇಲ್ಲದ ಕ್ಷೇತ್ರ 01 ಸ್ಥಾನ ಇದರಲ್ಲಿ ಮಹಿಳೆಯ ಎರಡು ಹಾಗೂ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ 1 ಸೇರಿದಂತೆ ಒಟ್ಟು 03 ಜನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆ ನಡೆದಿದೆ ಉಳಿದ 9 ಸ್ಥಾನಕ್ಕೆ ಜೂನ್ 22ರ ಭಾನುವಾರದಂದು ಚುನಾವಣೆ ನಡೆಯಲಿದೆ. ಸುಮಾರು 900 ಜನ ಮತದಾರಿದ್ದಾರೆ.
ಡಿಸಿಸಿ ಬ್ಯಾಂಕ್‍ನ ನಿರ್ದೇಶಕರಾದ ನಿಶಾನಿ ಜಯ್ಯಣ್ಣ, ಹಿರಿಯ ಸಹಕಾರಿ ಈಶ್ವರಪ್ಪ, ಹೂವಿನ ತಿಪ್ಪಣ್ಣ, ಚಿತ್ರದುರ್ಗ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ನಾರಾಯಣಸ್ವಾಮಿ, ನಾಯಕ ಸಮಾಜದ ಡಿ.ಓ.ತಿಪ್ಪೇಸ್ವಾಮಿ, ರಂಗಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.






