ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 26 : ಬಿಜೆಪಿ. ಮುಖಂಡ ಹಾಗೂ ಮಧುಗಿರಿ ಜಿಲ್ಲೆ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಸಿ.ಹನುಮಂತೆಗೌಡ ತಮ್ಮ 35 ನೇ ಜನ್ಮದಿನವನ್ನು ಕಬೀರಾನಂದಾಶ್ರಮದಲ್ಲಿನ ವೃದ್ದರಿಗೆ ಬಟ್ಟೆ ಮತ್ತು ಹೊದಿಕೆಗಳನ್ನು ವಿತರಿಸುವ ಮೂಲಕ ಸರಳವಾಗಿ ಆಚರಿಸಿಕೊಂಡರು.
ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಬಿ.ಸಿ.ಹನುಮಂತೆಗೌಡ ವೃದ್ದಾಶ್ರಮದಲ್ಲಿನ ವೃದ್ದರಿಗೆ ಪಂಚೆ, ವೃದ್ದೆಯರಿಗೆ ಸೀರೆ ಮತ್ತು ಹೊದಿಕೆಗಳನ್ನು ವಿತರಿಸಿದರು.
ಸಹಜವಾಗಿ ಹುಟ್ಟುಹಬ್ಬವನ್ನು ಎಲ್ಲರೂ ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಾರೆ. ವೃದ್ದಾಶ್ರಮದಲ್ಲಿರುವವರಿಗೆ ಹೊದಿಕೆ, ವಸ್ತ್ರಗಳನ್ನು ವಿತರಿಸಿ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿರುವುದು ನನಗೆ ತೃಪ್ತಿಯಾಗಿದೆ ಎಂದು ಹೇಳಿದರು.
ಜಿಲ್ಲಾಸ್ಪತ್ರೆಯಲ್ಲಿನ ರೋಗಿಗಳಿಗೂ ಹಣ್ಣುಗಳನ್ನು ವಿತರಿಸಿ ಶೀಘ್ರವೇ ಗುಣಮುಖರಾಗುವಂತೆ ಹಾರೈಸಿದರು.
ಬಿಜೆಪಿ.ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ವಕ್ತಾರ ನಾಗರಾಜ್‍ಬೇದ್ರೆ, ಗರುಢ ಕೇಸರಿಕುಮಾರ್, ವಸಂತಾಚಾರ್, ಕಿರಣ್, ತಿಪ್ಪೇಸ್ವಾಮಿ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.



