Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಲೋಕಸಭಾ ಸಚಿವಾಲಯದ ತರಬೇತಿ ಕಾರ್ಯಕ್ರಮಕ್ಕೆ ಕಲ್ಲಿನ ಕೋಟೆಯ ಅಜೀಮ್ ಅಲಿ ಆಯ್ಕೆ

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಅಕ್ಟೋಬರ್29) :
ನವದೆಹಲಿಯಲ್ಲಿ ಇದೇ ಅಕ್ಟೋಬರ್ 31ರಂದು ನಡೆಯುವ ಲೋಕಸಭಾ ಸಚಿವಾಲಯದ ತರಬೇತಿ ಕಾರ್ಯಕ್ರಮಕ್ಕೆ ಕಲ್ಲಿನಕೋಟೆಯ ಅಜೀಮ್ ಅಲಿ ಭಾಗವಹಿಸಲಿದ್ದಾರೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಭಾರತ ಸರ್ಕಾರದ ಪ್ರಜಾಪ್ರಭುತ್ವಕ್ಕಾಗಿ ಸಂಸದೀಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಲೋಕಸಭಾ ಸಚಿವಾಲಯದ ವತಿಯಿಂದ “ಯುವಜನರಿಗೆ ಸಂಸತ್ತಿನ ಸದನದಲ್ಲಿ ನಮ್ಮ ರಾಷ್ಟ್ರೀಯ ನಾಯಕರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುವಲ್ಲಿ ನಮ್ಮ ದೇಶದ ಯುವಜನರ ಭಾಗವಹಿಸುವಿಕೆ” ಎಂಬ ವಿಷಯದ ಕುರಿತು ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿದೆ.

ಈ ತರಬೇತಿ ಕಾರ್ಯಗಾರಕ್ಕೆ ಚಿತ್ರದುರ್ಗ ಜಿಲ್ಲೆಯಿಂದ ನೆಹರು ಯುವ ಕೇಂದ್ರದ ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾಗಿರುವ ಅಜೀಮ್ ಅಲಿ ಅವರು ಭಾಗವಹಿಸುತ್ತಿದ್ದಾರೆ.

ಈ ತರಬೇತಿಯಲ್ಲಿ ಭಾಗವಹಿಸುವವರಿಗೆ ನಮ್ಮ ರಾಷ್ಟ್ರೀಯ ನಾಯಕರ ಕೊಡುಗೆಯ ಬಗ್ಗೆ ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಂಸತ್ತಿಗೆ ಭೇಟಿಯ ಸಮಯದಲ್ಲಿ, ಸಂಸತ್ ಭವನದ ಚೇಂಬರ್ಸ್, ಪಾರ್ಲಿಮೆಂಟ್ ಮ್ಯೂಸಿಯಂ, ಪ್ರಧಾನ ಮಂತ್ರಿ ಸಂಗ್ರಹಾಲಯ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಅಧ್ಯಯನ ಭೇಟಿಗಾಗಿ ಕರೆದುಕೊಂಡು ಹೋಗಲಾಗುತ್ತದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಜನ ಅಧಿಕಾರಿ ಎನ್.ಸುಹಾಸ್ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.72.74 ಮತದಾನ : ಕ್ಷೇತ್ರವಾರು ಮಾಹಿತಿ…!

  ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 :   ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ಜರುಗಿದ ಮತದಾನದಲ್ಲಿ ಶೇ.72.74 ದಾಖಲಾಗಿದೆ‌. ವಿಧಾನ ಸಭಾ ಕ್ಷೇತ್ರವಾರು ಮತಾದನ ವಿವರ ಚಳ್ಳಕೆರೆ – 72.19%, ಚಿತ್ರದುರ್ಗ-70.42%, ಹಿರಿಯೂರು-71.49% ,

ಕುಡಿಯುವ ನೀರಿನ ಸಮಸ್ಯೆ : ಮತದಾನ ಬಹಿಷ್ಕರಿಸಿದ್ದವರಿಂದ ಸಂಜೆ ವೇಳೆಗೆ ಮತದಾನ..!

ಚಿತ್ರದುರ್ಗ : ಇಂದು ಕರ್ನಾಟಕದಲ್ಲಿ ಮೊದಲ ಲೋಕಸಭಾ ಚುನಾವಣೆಗೆ ನಡೆದಿದೆ. ಎಷ್ಟೇ ಜಾಗೃತಿ ಮೂಡಿಸಿದರು ಸಾಕಷ್ಟು ಮಂದಿ ಮತದಾನ ಮಾಡಿಲ್ಲ. ಪರಿಪೂರ್ಣ ಮತದಾನ ನಡೆದಿಲ್ಲ. ಚುನಾವಣೆ ಬಂದಾಗೆಲ್ಲಾ ಜಾಗೃತಿ ಕಾರ್ಯ ನಡೆದರು ಮತದಾನ ಪೂರ್ಣವಾಗುವುದರಲ್ಲಿ

error: Content is protected !!