ಬೆಂಗಳೂರು: ಮಸೀದಿಗಳಲ್ಲಿನ ಧ್ವನಿವರ್ಧಕ ವಿಚಾರವಾಗಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿದ್ದು, ಸಾಮಾನ್ಯವಾಗಿ ಧಾರ್ಮಿಕ ಕೇಂದ್ರಗಳ ಬಗ್ಗೆ ಶಬ್ದ ಮಾಲಿನ್ಯದ ಬಗ್ಗೆ ಚರ್ಚೆಯಾಗುತ್ತೆ. ಯಕ್ಷಗಾನ ಎನ್ನುವಂತದ್ದು ಒಂದೇ ಸಮಯಕ್ಕೆ ಒಂದೇ ಊರಿನಲ್ಲಿ ಆಗುವಂತದ್ದಲ್ಲ, ಒಂದು ಊರಿಂದ ಇನ್ನೊಂದು ಊರಿಗೆ ಅಲ್ಲಿರುವ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಮಾಡಿರುವಂತಹ ಒಂದು ಕಲೆ. ಅದಕ್ಕೂ ಇದಕ್ಕು ಅನ್ವಯಿಸುವುದಿಲ್ಲ. ಬಹುತೇಕ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಮತಂತರ ಕಾಯ್ದೆ ಬಗ್ಗೆ ಮಾತನಾಡಿದ್ದು, ಮತಾಂತರ ನಿಷೇಧ ಕಾಯ್ದೆ ಅರ್ಥಾತ್ ಧಾರ್ಮಿಕ ಸಂರಕ್ಷಣಾ ಕಾಯ್ದೆಯನ್ನು ಕೆಳಮನೆಯಲ್ಲಿ ಪಾಸ್ ಮೇಲ್ಮನೆಯಲ್ಲಿ ನಾವೂ ಅನುಮತಿ ಪಡೆಯಬೇಕಿತ್ತು. ನಮಗೆ ಸ್ಪಷ್ಟವಾದ ಬಹುಮತದ ಕೊರತೆ ಹಿನ್ನಲೆಯಲ್ಲಿ ಇಂದಷ್ಟು ವಿಳಂಬವಾಗಿದೆ. ಈಗ ನಾವೂ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆಯನ್ನು ಅನುಮೋದನೆ ಕೊಟ್ಟಿದ್ದೇವೆ. ಮುಂದಿನ ಅಧಿವೇಶನದಲ್ಲಿ ಸ್ಪಷ್ಟವಾದ ಬಹುಮತ ಬರುತ್ತೆ ಆಗ ಬಿಲ್ಲನ್ನು ಪಾಸ್ ಮಾಡಿಕೊಳ್ಳುತ್ತೇವೆ.
ಈ ಮತಾಂತರ ನಿಷೇಧ ಕಾಯ್ದೆ, ಧಾರ್ಮಿಕ ಸಂರಕ್ಷಣಾ ಕಾಯ್ದೆಯನ್ನು ಅಧಿಕೃತವಾಗಿ ಜಾರಿಗೆ ತಂದಿರುವುದು ನಮಗೆಲ್ಲರಿಗೂ ಸಂತೋಷವಾಗಿದೆ. ರಾಜ್ಯದ ಜನತೆ ಇದೆ ನಿರೀಕ್ಷೆಯನ್ನು ಹೊಂದಿದ್ದಾರೆ ಎಂದು ಭಾವಿಸುತ್ತೇನೆ ಎಂದು ಮತಾಂತರ ನಿಷೇಧ ಕಾಯ್ದೆ ಜಾರಿ ಬಗ್ಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಮ್ಮತ ವ್ಯಕ್ತಪಡಿಸಿದ್ದಾರೆ.