ಹಿರಿಯೂರು, (ನ.25) : ಆಯುರ್ವೇದ ದಿನಚರಿ ಉತ್ತಮ ಆರೋಗ್ಯಕ್ಕೆ ಭದ್ರಬುನಾದಿ ಎಂದು ಸಮಾಜಸೇವಕಿ ಶ್ರೀಮತಿ ಶಶಿಕಲಾ ರವಿಶಂಕರ್ ಹೇಳಿದರು.

ನಗರದ ಇರೋ ಕಿಡ್ಸ್ ಶಾಲೆಯಲ್ಲಿ ಚಳ್ಳಕೆರೆಯ ಬಾಪೂಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಬಿಟಿ ಇರೋ ಕಿಡ್ಸ್ ಮತ್ತು ಬಿಟಿ ಹೀರೋ ಇಂಟರ್ನ್ಯಾಷನಲ್ ಸ್ಕೂಲ್ ಹಿರಿಯೂರು ಇವರ ಸಹಯೋಗದಲ್ಲಿ ನಡೆದ ಸ್ವರ್ಣ ಬಿಂದು ಪ್ರಾಶನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದ ಮಾತನಾಡಿದರು.ಸ್ವರ್ಣ ಬಿಂದು ಪ್ರಾಶನ ಹುಟ್ಟಿದ ಮಗುವಿನಿಂದ 16 ವರ್ಷದವರೆಗಿನ ಮಕ್ಕಳ ಸದೃಢ ಆರೋಗ್ಯಕ್ಕೆ ಸಹಕಾರಿ ಎಂದು ಅಭಿಪ್ರಾಯಪಟ್ಟರು ಸ್ವಾಸ್ಥ್ಯ ಸಮಾಜಕ್ಕೆ ಆರೋಗ್ಯವಂತ ಸಮುದಾಯವೇ ಆಧಾರ ಎಂದು ಅವರು ಹೇಳಿದರು.

ಆಯುರ್ವೇದ ವೈದ್ಯ ಪದ್ಧತಿಯ ಬಗ್ಗೆ ಬಾಪೂಜಿ ಆಯುರ್ವೇದ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಡಾ. ಸುನಿಲ್ ಕುಮಾರ್ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಘನಶಂಕರ್ ರವರು, ಮಾತನಾಡಿ,
ಆಯುರ್ವೇದ ಮನೆಮನೆಗೆ ಮುಟ್ಟಬೇಕು.ಹಾಗೂ ಎಳವೆಯಿಂದಲೇ ಮಕ್ಕಳಿಗೆ ಈ ಅಡ್ಡಪರಿಣಾಮವಿಲ್ಲದ ವೈದ್ಯಕೀಯ ಪದ್ಧತಿ ಅಭ್ಯಾಸವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರನೇಕರು ಪ್ರಯೋಜನ ಪಡೆದುಕೊಂಡರು.

