ಸುದ್ದಿಒನ್, ಚಿತ್ರದುರ್ಗ ಜ. 21: ನಾಳೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ಹಿನ್ನಲೆಯಲ್ಲಿ ನಗರದ ಹಲವು ದೇವಾಲಯಗಳಲ್ಲಿ ಸ್ವಚ್ಚತಾ ಕಾರ್ಯ ನಡೆದವು. ನಾಳೆ ವಿಶೇಷ ಪೂಜೆ, ಭಜನೆ, ದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಯೋಧ್ಯೆಯಲ್ಲಿ ನಾಳೆ (ಜನವರಿ.22) ಸೋಮವಾರದಂದು ನಡೆಯಲಿರುವ ಶ್ರೀ ಬಲರಾಮಚಂದ್ರ ಮೂರ್ತಿಯ ದೇವತಾ ಪ್ರಾಣ ಪ್ರತಿಷ್ಠಾಪನೆ ಹಾಗೂ ಭವ್ಯವಾದ ನೂತನ ದೇವಾಲಯ ಉದ್ಘಾಟನೆ ಅಂಗವಾಗಿ ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿಯ ದೇವಾಲಯದಲ್ಲಿ ಬೆಳಿಗ್ಗೆ 7-00 ಗಂಟೆಗೆ ಶ್ರೀ ಆಂಜನೇಯ ಸ್ವಾಮಿ ಶ್ರೀ ಮಹಾ ವಿಷ್ಣು ದೇವತೆಗಳಿಗೆ ಫಲ ಪಂಚಾಮೃತ ಅಭಿಷೇಕ ವಿಶೇಷ ಅಲಂಕಾರ ಅರ್ಚನೆ ತಾರಕ ಹೋಮ ಹೂವಿನ ಅಲಂಕಾರ ಹಾಗೂ ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ಇರುತ್ತದೆ.
ಸಂಜೆ ಉತ್ತರಾಭಿಮುಖವಾಗಿ ಅಯ್ಯಪ್ಪ ಸ್ವಾಮಿ ಗರ್ಭಗುಡಿ ಹಾಗೂ ಶ್ರೀ ಆಂಜನೇಯ ಸ್ವಾಮಿ ಆವರಣದಲ್ಲಿ ಸಂಜೆ 6-30 ದೀಪಾರಾದನೆಯ ಉದ್ಘಾಟನೆಯನ್ನು ನೆರವೇರುವುದಲ್ಲದೆ ಈ ಸಂದರ್ಭದಲ್ಲಿ ಸಜ್ಜಿಗೆ ಹಾಗೂ ಪುಳಿಯೋಗರೆ ಪ್ರಸಾದ ವ್ಯವಸ್ಥೆ ಇರುತ್ತದೆ. ಶ್ರೀ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆಯನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಶರಣ್ ಕುಮಾರ್, ಕಾರ್ಯದರ್ಶಿಯಾದ ಎಂ ಪಿ ವೆಂಕಟೇಶ್ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ತುರುವನೂರು ರಸ್ತೆಯಲ್ಲಿರುವ ಶ್ರೀ ಪ್ರಸನ್ನ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿತ್ತು.
ವಿಧಾನ ಪರಿಷತ್ ಸದಸ್ಯರು, ಬಿಜೆಪಿ ರಾಜ್ಯ ವಕ್ತಾರರಾದ ಕೆ. ಎಸ್. ನವೀನ್ ಅವರು ಚಾಲನೆ ಕೊಟ್ಟರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಎ ಮುರುಳಿ, ಬಿಜೆಪಿ ಮುಖಂಡರಾದ ಜಿ.ಎಸ್. ಅನಿತ್‍ಕುಮಾರ್, ಸಂಪತ್ ಕುಮಾರ್, ಮಾಧುರಿ ಗಿರೀಶ್, ನವೀನ್ ಚಾಲುಕ್ಯ, ನಾಗರಾಜ್ ಬೇದ್ರೆ, ಮಲ್ಲಿಕಾರ್ಜುನ್, ವೆಂಕಟೇಶ್ ಯಾದವ್, ರತ್ನಮ್ಮ, ಶೈಲಜಾ ರೆಡ್ಡಿ, ಶೀಲಾ, ಯಶ್ವಂತ್, ಕಿರಣ್, ರಾಮು, ಪ್ರಶಾಂತ್, ಚಂದ್ರು ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.