ಶಿವಮೊಗ್ಗ: ಮಾಜಿ ಸಚಿವ ಈಶ್ವರಪ್ಪ ಅವರಿಗೆ ಅಧಿಕಾರದ ಹಪಾಹಪಿ ಇದೆ. ಲಜ್ಜೆಗೆಟ್ಟು ಈಶ್ವರಪ್ಪ ಅವರು ತಮ್ಮ ಮಗನಿಗೆ ಟಿಕೆಟ್ ಕೇಳಿದ್ದಾರೆ ಅಂತ ಬಿಜೆಪಿ ಎಂಎಲ್ಸಿ ಆಯನೂರು ಮಂಜುನಾಥ್ ಹಿಗ್ಗಾಮುಗ್ಗಾ ಆಕ್ರೋಶ ಹೊರ ಹಾಕಿದ್ದಾರೆ.
ಆಯನೂರು ಮಂಜುನಾಥ್ ಇಂದು ಸುದ್ದಿಗೋಷ್ಟಿ ನಡೆಸಿ, ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದಾರೆ. ನಿಮ್ಮ ಮಗನನ್ನು ಗೆಲ್ಲಿಸಿ, ನಿಮ್ಮ ಸಾಮರ್ಥ್ಯ ತೋರಿಸಿ. ನಿಮ್ಮ ಮಗ ಆಗಲಿ, ಬೇರೆ ಯಾರೇ ಆಗಲಿ ಅವರ ವಿರುದ್ಧ ನಾನು ಸ್ಪರ್ಧಿಸುತ್ತೇನೆ. ಬಿಜೆಪಿಯಲ್ಲಿ ಜೊತೆಗೆ ಕೆಲಸ ಮಾಡಿದವರಿಗೆ ಈಶ್ವರಪ್ಪ ಟಿಕೆಟ್ ಕೇಳಲಿಲ್ಲ. ಆದರೆ ಲಜ್ಜೆಗೆಟ್ಟವರಂತೆ ಮಗನಿಗೆ ಟಿಕೆಟ್ ಕೇಳುತ್ತಿದ್ದಾರೆ.
ಯಡಿಯೂರಪ್ಪ ಜೈಲಿಗೆ ಹೋಗಿದ್ದಾಗ ಲೇವಡಿ ಮಾಡಿದ್ದೀರಿ. ನಾನಾಗಿದ್ದರೆ ನೇಣು ಹಾಕಿಕೊಳ್ಳುತ್ತೀನಿ ಎಂದವರು ನೀವೂ. ನಿಮ್ಮ ಮೇಲೆ ಆರೋಪ ಬಂದಾಗ ನೇಣು ಹಾಕಿಕೊಳ್ಳಲೇ ಇಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ, ಈಶ್ವರಪ್ಪ ಉಸ್ತುವಾರಿ ಸಚಿವರಾಗಿದ್ದಾಗ ಸ್ವಾಗತ ಮಾಡಲಿಲ್ಲ. ಮಂತ್ರಿಯಾಗಿದ್ದಾಗ ಸಂವಿಧಾನವನ್ನೇ ಅರ್ಥ ಮಾಡಿಕೊಳ್ಳಲಿಲ್ಲ. ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದೀರಿ, ಯಡಿಯೂರಪ್ಪ ವಿರುದ್ಧ ಹಗುರವಾಗಿ ಮಾತನಾಡಿದ್ದೀರಿ ಎಂದಿದ್ದಾರೆ.





GIPHY App Key not set. Please check settings