ಭ್ರಷ್ಟಾಚಾರ ಪ್ರಕರಣ ತಡೆಗಟ್ಟಲು ಸಾರ್ವಜನಿಕರಲ್ಲಿ  ಜಾಗೃತಿ ಮೂಡಿಸುವುದು ಅಗತ್ಯ : ಬಸವರಾಜ್ ಆರ್.ಮಗದುಮ್

1 Min Read

ಚಿತ್ರದುರ್ಗ, ಮಾರ್ಚ್ 19: ಸೈಬರ್ ಮತ್ತು ಆರ್ಥಿಕ ಅಪರಾಧಗಳು, ಭ್ರಷ್ಟಾಚಾರ ಪ್ರಕರಣ ತಡೆಗಟ್ಟಲು ಎಸಿಬಿ ಇಲಾಖೆಯೊಂದಿಗೆ ಸಹಕರಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಮೂಲಕ ಸೂಕ್ತ ಕ್ರಮಕೈಗೊಳ್ಳಬೇಕೆಂದು ಬೆಂಗಳೂರು ನಗರದ ಎಸಿಬಿ ಪೊಲೀಸ್ ಠಾಣೆಯ ಡಿಎಸ್‍ಪಿ ಬಸವರಾಜ್ ಆರ್. ಮಗದುಮ್ ತಿಳಿಸಿದರು.

ಹಿರಿಯೂರು ತಾಲ್ಲೂಕಿನ ಐಮಂಗಲ ಪೊಲೀಸ್ ತರಬೇತಿ ಶಾಲೆಯಲ್ಲಿ ಶನಿವಾರ ಹೊಸದಾಗಿ ಪದನ್ನೋತಿಗೊಂಡ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 265 ಪೊಲೀಸ್ ಅಧಿಕಾರಿಗಳಿಗೆ ಪುನರ್‍ಮನನ ಕಾರ್ಯಾಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರ್ಥಿಕ ಅಪರಾಧಗಳ ವ್ಯಾಪ್ತಿ, ವಿಧಗಳು ಮತ್ತು ಪ್ರಕರಣಗಳ ತನಿಖೆ ಬಗ್ಗೆ ವಿಸ್ತøತವಾದ ಮಾಹಿತಿ ನೀಡಿ, ಸಿಬಿಐನಲ್ಲಿ ದಾಖಲಾಗುವ ಪ್ರಕರಣಗಳ ವಿಧ, ಅಲ್ಲಿ ನಡೆಸುವಂತಹ ತನಿಖೆಯ ವಿವಿಧ ಹಂತಗಳ ಬಗ್ಗೆ ಹೊಸದಾಗಿ ಪದನ್ನೋತಿಗೊಂಡ ಪೊಲೀಸರಿಗೆ ತಿಳಿಸಿದರು.

ಪೊಲೀಸ್ ಠಾಣೆಗಳಲ್ಲಿ ಎಸಿಬಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಎಸಿಬಿಯ ಉನ್ನತ ಮಟ್ಟದ ತನಿಖಾ ಹಂತಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಹಾಗೂ ಜಾರಿನಿರ್ದೇಶನಾಲಯ(ಇ.ಡಿ.) ಕೈಗೊಳ್ಳುವ ವಿಶೇಷ ಅಪರಾಧ ಪ್ರಕರಣಗಳಾದ ಫೆಮಾ, ಮನಿಲ್ಯಾಂಡ್ರಿಂಗ್‍ನಂತಹ ಪ್ರಕರಣಗಳ ತನಿಖೆ ಹಾಗೂ ಎಸಿಬಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಇ.ಡಿಗೆ ಯಾವ ರೀತಿ ಮಾಹಿತಿ ಒದಗಿಸಬೇಕು, ಎಸಿಬಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ಯಾವ ರೀತಿ ಇ.ಡಿಗೆ ಶಿಫಾರಸು ಮಾಡಬೇಕೆಂದು ತಿಳಿಸಿದರು.

ಕರ್ನಾಟಕ ಲೋಕಾಯುಕ್ತ, ಎಸಿಬಿಗೆ ಇರುವ ವ್ಯತ್ಯಾಸಗಳು ಹಾಗೂ ಅವುಗಳ ಅಧಿಕಾರದ ವ್ಯಾಪ್ತಿ ಬಗ್ಗೆ ತಿಳಿಸುತ್ತಾ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವೈಟ್ ಕಾಲರ್ ಅಪರಾಧಗಳಾಗಿರುವ ಸೈಬರ್ ಮತ್ತು ಆರ್ಥಿಕ ಅಪರಾಧಗಳ ಬಗ್ಗೆ, ತನಿಖೆಯ ತಿಳುವಳಿಕೆಯ ಬಗ್ಗೆ ತಿಳಿಸಿದರು.

ಪೊಲೀಸ್ ಅಧಿಕಾರಿಗಳು ಸೈಬರ್ ಚೀಟಿಂಗ್, ಆರ್ಥಿಕ ಅಪರಾಧಗಳು, ಪಿಸಿ ಕಾಯ್ದೆ ಅಡಿಯಲ್ಲಿ  ದಾಖಲಾಗುವ ಪ್ರಕರಣಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ತನಿಖಾ ಪ್ರಕ್ರಿಯೆಯ ಬಗ್ಗೆ ಹೊಸದಾಗಿ ಪದೋನ್ನತಿ ಹೊಂದಿದ ಪೊಲೀಸ್ ಅಧಿಕಾರಿಗಳಿಗೆ ಉತ್ತಮ ನಿರ್ವಹಣೆ ತೋರಲು ಸಲಹೆ, ಸೂಚನೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ತರಬೇತಿ ಶಾಲೆಯ ಎಸ್.ಪಿ ಪಾಪಣ್ಣ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *