ಗೃಹಸ್ಥ ಜೀವನದಲ್ಲಿ ಆಧ್ಯಾತ್ಮದ ಅರಿವು ಅಗತ್ಯ : ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್

2 Min Read

 

ವರದಿ ಮತ್ತು ಫೋಟೋ ಕೃಪೆ
ಶಿವಮೂರ್ತಿ.ಟಿ ಕೋಡಿಹಳ್ಳಿ, ಚಳ್ಳಕೆರೆ,
ಫೋ : 97427 56304

ಸುದ್ದಿಒನ್, ಚಳ್ಳಕೆರೆ, ನವೆಂಬರ್. 03 : ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಕೋಲ್ಕತಾದ ಶ್ರೀರಾಮಕೃಷ್ಣ ಮಠ ಮತ್ತು ಮಿಷನ್ ನ ಟ್ರಸ್ಟಿಗಳು ಹಾಗೂ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಅವರು ಗೃಹಸ್ಥ ಜೀವನದಲ್ಲಿ ಆಧ್ಯಾತ್ಮ ಎಂಬ ವಿಷಯದ ಕುರಿತಾಗಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು “ನಮ್ಮ ದಿನನಿತ್ಯದ ಗೃಹಸ್ಥ ಜೀವನ ಸುಖ ಶಾಂತಿಯಿಂದ ಕೂಡಿರಬೇಕಾದರೆ ಆಧ್ಯಾತ್ಮದ ಅರಿವು ಅಗತ್ಯವಿದ್ದು ಅದರ ನಿತ್ಯ ಅನುಸರಣೆಯಿಂದ ಬದುಕನ್ನು ಸಾರ್ಥಕಪಡಿಸಿಕೊಳ್ಳಬಹುದು ಎಂದರು.

ಅಲ್ಲದೆ ಆಧ್ಯಾತ್ಮಿಕ ಸಾಧನೆಗಳನ್ನು ಮಾಡುವ ಮೂಲಕ “ನಾನು ಆತ್ಮ ಸ್ವರೂಪ” ಎಂಬ ದೃಢ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು, ನಮ್ಮ ಭಾರತೀಯ ಸನಾತನ ಪರಂಪರೆಯಲ್ಲಿ ಸಂನ್ಯಾಸ ಜೀವನಕ್ಕಿರುವಷ್ಟೇ ಮಹತ್ವ ಗೃಹಸ್ಥ ಜೀವನಕ್ಕೂ ಇದೆ, ಆದ್ದರಿಂದ ಆದರ್ಶ ಗೃಹಸ್ಥರಾಗಿ ದೇವರನ್ನು ಪಡೆಯಲು ಸಾಧ್ಯ ಎಂದು ಗೃಹಸ್ಥ ಜೀವನದಲ್ಲಿ ಆಧ್ಯಾತ್ಮದ ಪ್ರಾಮುಖ್ಯತೆಯ ಬಗ್ಗೆ ಹಲವಾರು ಉದಾಹರಣೆಗಳು ಹಾಗೂ ಕಥೆಗಳ ಮೂಲಕ ವಿವರಿಸಿದರು.

ಈ ಸಂದರ್ಭದಲ್ಲಿ ಭಕ್ತರಿಂದ ಭಜನೆ ಮತ್ತು ಚಳ್ಳಕೆರೆಯ ಶ್ರೀಶಾರದಾಶ್ರಮದ ವತಿಯಿಂದ ನಡೆದ ಯುಗಾವತಾರ ಶ್ರೀರಾಮಕೃಷ್ಣ ಭಾಗ-೨ರ ಪರೀಕ್ಷೆಯಲ್ಲಿ ವಿಜೇತರಾದ ಶ್ರೀಮತಿ ಶಾರದಾ ಶ್ರೀನಿವಾಸ, ಯತೀಶ್ ಎಂ ಸಿದ್ದಾಪುರ,ಮಮತ ಕೃಷ್ಣ ಅವರು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದಿದ್ದು ಅವರಿಗೆ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಅವರು ಬಹುಮಾನಗಳನ್ನು ವಿತರಿಸಿದರು.

ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ, ಸದ್ಭಕ್ತರಾದ ನೇತಾಜಿ ಪ್ರಸನ್ನ, ಶ್ರೀಮತಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಶ್ರೀಮತಿ ವನಜಾಕ್ಷಿ, ಗೀತಾ ನಾಗರಾಜ್,ಸುಧಾಕರ್, ಗೀತಾ ವೆಂಕಟೇಶ್, ರಮೇಶ್, ರವಿಚಂದ್ರ, ವೆಂಕಟೇಶ್, ಗಂಗಾಂಬಿಕೆ,ಗಿರಿಜಾ, ವಿಶಾಲಾಕ್ಷಿ, ಗೌರಾಂಬಿಕ, ಅನರ್ಘ್ಯಮ್ಮ, ದೊಡ್ಡಜ್ಜಯ್ಯ, ಯಶೋಧಾ,ಕವಿತ, ಕೆ.ಎಸ್, ವೀಣಾ,ಚೆನ್ನಕೇಶವ ,ಕಾವೇರಿ,ಡಿ, ಮಂಜುಳಮ್ಮ ಸಂತೋಷ್,ಶಾರದಾಮ್ಮ, ನಾಗರತ್ನಮ್ಮ ,ಭಾರತಿ, ಡಾ.ಭೂಮಿಕ, ಅಮೂಲ್ಯ , ಚೇತನ್, ಅಪೇಕ್ಷ, ಪ್ರಕಾಶ್, ಸುದೀಪ್ , ಪ್ರೇಮಲೀಲಾ, ಕುಮಾರಸ್ವಾಮಿ, ಕಲ್ಪನ,ಲಕ್ಷ್ಮಣರಾವ್, ಪುಷ್ಪ, ಸುಕೃತಿ ಮುಂತಾದ ಶ್ರೀಶಾರದಾಶ್ರಮದ ಸದ್ಭಕ್ತರು ಪಾಲ್ಗೊಂಡಿದ್ದರು ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

Share This Article
Leave a Comment

Leave a Reply

Your email address will not be published. Required fields are marked *