Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಾದಕ ವ್ಯಸನ ಮತ್ತು ಕಾನೂನುಗಳ ಅರಿವು ಯುವಜನತೆಗೆ ಅಗತ್ಯ :  ಎಂ.ವಿಜಯ್

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.16 :ಯುವಕರೇ ದೇಶದ ಸಂಪತ್ತು. ಅವರಿಗೆ ಉಪಯೋಗವಾಗುವಂತಹ ಕಾನೂನು ಅರಿವು ಮತ್ತು ಮಾದಕ ವಸ್ತುಗಳ ನಿಷೇಧ ಇಂತಹ ಕಾರ್ಯಕ್ರಮಗಳು ಯುವ ಜನತೆಗೆ ಬೇಕು. ಅದರ ಲಾಭವನ್ನು ನೀವು ಪಡೆದು ಇತರರಿಗೂ ಇದರ ವಿಚಾರ ತಿಳಿಸಿ ಎಂದು

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ನ್ಯಾಯಾಧೀಶರು ಎಂ.ವಿಜಯ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಗರದ ಎಸ್.ಜೆ.ಎಂ. ಫಾರ್ಮಸಿ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘ ಇವರ ಸಂಯೋಗದೊಂದಿಗೆ ಮಾದಕ ವ್ಯಸನ ಮತ್ತು ಕಾನೂನುಗಳ ಅರಿವು ಎಂಬ ಶೀರ್ಷಿಕೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ
ವೈ. ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್,  ಕಾರ್ಯದರ್ಶಿ ಆರ್. ಗಂಗಾಧರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಡಾ ಮಂಜುನಾಥ್ ಮಾತನಾಡಿ ಡ್ರಗ್ ಅಬ್ಯುಸ್ ಹಾಗೂ ಅದರ ದುಷ್ಪರಿಣಾಮಗಳು ಕುರಿತು ಮಾತನಾಡಿದರು. ಮಾದಕ ವಸ್ತುಗಳು ಮಾರಾಟ ಮುಖ್ಯವಾಗಿ ಯುವ ಜನತೆ ಇರುವ ಸ್ಥಳಗಳು ಕಾಲೇಜುಗಳು ಅವುಗಳಿಂದ ದೂರವಿರಬೇಕು. ದೊಡ್ಡ ನಗರಗಳಲ್ಲಿ ಕಾಲೇಜು ಹತ್ತಿರ ಎಲ್ಲಾ ತರಹದ ಮಾದಕ ವಸ್ತುಗಳು ಜಾಲ ಇರುತ್ತದೆ. ಪೋಷಕರು  ರಣ ಹದ್ದಿನಂತೆ ಕಾದು ಕಾಲೇಜಿನ ದಿನಗಳಲ್ಲಿ  ಯುವಕರನ್ನು ಈ ದುಷ್ಟ ಚಟಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕು.

ಇಲ್ಲದಿದ್ದರೆ ಭವಿಷ್ಯದಲ್ಲಿ ಯುವ ಜನತೆ ದುಶ್ಚಟದ ದಾಸರಾಗಿ ಸಮಾಜದ ಕಣ್ಣಿಗೆ ದೇಶಕ್ಕೆ ಕುಟುಂಬಕ್ಕೆ ಹಾನಿ  ಯಾಗುವುದನ್ನು ತಪ್ಪಿಸಬೇಕು. ವರ್ಷಕ್ಕೆ ಒಂದು ಸಾರಿ, ಮೂರು ತಿಂಗಳಿಗೆ ಒಂದು ಸಾರಿ,  ಸಮಾರಂಭದಲ್ಲಿ ಒಂದು ಸಾರಿ ಮಾತ್ರ ಅಂತ ಸಣ್ಣ ಕಾರಣಗಳಿಂದ ಚಟವನ್ನು ಕಲಿಯುತ್ತಾ ನಂತರ ಯಾವುದೇ ಕಾರಣ ಹುಡುಕದೆ ಪ್ರತಿದಿನ ದುಶ್ಚಟ ತರಿಸುವ ಪದಾರ್ಥಗಳಿಗೆ ದಾಸರಾಗಿ ಬಿಡುತ್ತಾರೆ.

ಈ ಪದಾರ್ಥಗಳು ಮುಖ್ಯವಾಗಿ ಮೆದುಳಿನ ಕಾರ್ಯವನ್ನು ಅಸಮತೋಲನಗೊಳಿಸಿ ಮೊದಲಿಗೆ  ಡೋಪಮೈನ್ ಹಾರ್ಮೋನ್ ಹೆಚ್ಚಿಸುತ್ತಾ ಹೆಚ್ಚು ಮಾದಕವಾಗಿ ಇರಲು ಪ್ರೇರೇಪಿಸುತ್ತದೆ, ನಂತರ ಹೆಚ್ಚು ಹೆಚ್ಚಾಗಿ ಸೇವಿಸುವುದರಿಂದ ಸದಾಕಾಲ ಡೋಪಮೈನ್ ಹಾರ್ಮೋನ್ ಗಣನೀಯವಾಗಿ ಇರುವಂತೆ ಮಾಡಿಕೊಳ್ಳುತ್ತಾ ನಶೆ ಪದಾರ್ಥಗಳಿಗೆ ದಾಸರಾಗಿ ಬಿಡುತ್ತಾರೆ.

ನಂತರದ ಅವಸ್ಥೆಯಲ್ಲಿ ವ್ಯಸನಿ ಯಾವುದೇ ತರದ ದೈನಂದಿನ ಕಾರ್ಯಗಳನ್ನು ಮಾಡಿಕೊಳ್ಳಲು ಆಗದಂತಹ ದುರ್ಬಲ ಮನಸ್ಥಿತಿ ಅವರಿಗೆ ಉಂಟಾಗುತ್ತದೆ. ಅವುಗಳಿಂದ ಹೊರಗೆ ಬರಲು ಅವರಿಗೆ ಆಗುವುದಿಲ್ಲ ಇದರಿಂದ  ಸಮಾಜದಲ್ಲಿ ಏನು ಬೇಕಾದರೂ ಮಾಡಲು ವ್ಯಸನಿ ಹಿಂಜರಿಯುವುದಿಲ್ಲ.

ಹಲವು ರೀತಿಯ ಚಿಕಿತ್ಸೆಗಳು ಹಾಗೂ ಔಷಧಗಳು ಲಭ್ಯವಿದೆ. ವ್ಯಸನಿ ನಿರ್ಮೂಲನ ಕೇಂದ್ರಗಳನ್ನು ಭೇಟಿಯಾದರೆ ಸೂಕ್ತ ಸಲಹೆಗಳಿಂದ ಸಮಾಜದ ಸ್ವಸ್ಥವನ್ನು ಕಾಪಾಡಬಹುದು. ಈ ನಶೆ ಪದಾರ್ಥಗಳ ಬಳಕೆ ಹಾಗೂ ಮಾರಾಟ ಹೆಚ್ಚಾಗಿ  ಪಕ್ಕದ ದೇಶಗಳ  ಪರಿಸ್ಥಿತಿ ಹಾಗೂ ಆದೇಶದ ಯುವ ಜನಾಂಗದ ಪರಿಸ್ಥಿತಿ ಹೇಳಲಾರದಷ್ಟು ಗಂಭೀರವಾಗಿದೆ ಮತ್ತು ದೇಶದ ಆರ್ಥಿಕತೆಯ ಮೇಲೆ ತುಂಬಾ ಪ್ರಭಾವ ಬೀರಿದೆ. ಯುವ ಜನತೆ ಈ ವಸ್ತುಗಳಿಂದ ದೂರವಿರಬೇಕು ಸುಭದ್ರ ದೇಶ ಕಟ್ಟಲು ಎಂದು ಹೇಳಿದರು.

ಶೇಕ್ ಇಮ್ರಾನ್ ಮಾತನಾಡಿ ಯಾವುದೇ ರೀತಿಯ ಉತ್ಪಾದನೆ,ತಯಾರಿಕೆ,ಕೃಷಿ, ಸ್ವಾಧೀನ, ಮಾರಾಟ, ಖರೀದಿ, ಸಾಗಣೆ, ಸಂಗ್ರಹಣೆ ಮತ್ತು ಅಥವಾ ಯಾವುದೇ ಮಾದಕ ದ್ರವ್ಯ ಅಥವಾ ಮನೋದ್ರಿಕಕಾರಿ ವಸ್ತುವಿನ ಸೇವನೆಯನ್ನು ನಿಷೇಧಿಸುತ್ತದೆ. ಇಂತಹ ವಸ್ತುಗಳ ಬಳಕೆ ಮಾರಾಟ ತಿಳಿದುಬಂದಲ್ಲಿ ನಮಗೆ ತಿಳಿಸಿ. ಇದರಿಂದ ನೀವು ಸಮಾಜದ ದೇಶದ ಹಾಗೂ ಕುಟುಂಬದ ಸ್ವಸ್ಥ ಬೆಳವಣಿಗೆಗೆ ಸಹಕಾರಿಯಾಗುತ್ತೀರಾ ಎಂದು ಹೇಳಿದರು.

ಡಾ.ಮಾರುತಿ ಟಿ ಹೆಗ್ಬಟೆ ಪ್ರಾಧ್ಯಾಪಕರು ಎಸ್ ಜೆ ಎಂ ಫಾರ್ಮಸಿ ಕಾಲೇಜು ಚಿತ್ರದುರ್ಗ ಇವರು ಸ್ವಾಗತವನ್ನು ಕೋರಿದರು.
ರಂಜಿತಾ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು.ಕಾರ್ಯಕ್ರಮದ ವಂದನಾರ್ಪಣೆಯನ್ನು ವಿಕಾಸ್ ಆರ್ ಮಠದ್ ಉಪನ್ಯಾಸಕರು ನೆರವೇರಿಸಿದರು.

ಕಾರ್ಯಕ್ರಮದ ಪ್ರಾರ್ಥನೆಯನ್ನು ಚೈತ್ರ ಹಾಗೂ ಕಾರ್ಯಕ್ರಮದ ಉಪಯೋಗವನ್ನು ಔಷದ ವಿದ್ಯಾಲಯದ ಫಾರ್ಮಡಿ ಹಾಗೂ ಬಿ ಫಾರ್ಮ ವಿದ್ಯಾರ್ಥಿಗಳು ಭಾಗವಹಿಸಿ ಕಾನೂನಿನ ಅರಿವು ಮತ್ತು ಮಾದಕ ವ್ಯಸನ ವಿಷಯಗಳ ಜ್ಞಾನವನ್ನು ತಿಳಿದುಕೊಂಡರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿಗಳು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಾಳೆ ಬೆಲೆ ಭಾರೀ ಕುಸಿತ : ಬೆಳೆಗಾರ ಕಂಗಾಲು..!

    ರೈತ ಸಾಲ ಸೋಲ ಮಾಡಿ, ಕಷ್ಟಪಟ್ಟು ವ್ಯವಸಾಯ ಮಾಡುತ್ತಾನೆ. ಬೆಳೆದ ಬೆಲೆಗೆ ಬೆಂಬಲ ಸಿಕ್ಕರೆ ಖುಷಿಯಾಗುತ್ತಾನೆ. ಸಾಲ ತೀರಿಸಿ ಮತ್ತೆ ಭೂಮಿ ಹದ ಮಾಡುವತ್ತ ಗಮನ ಹರಿಸುತ್ತಾನೆ. ಆದರೆ ಬೆಳೆದ ಬೆಲೆಗೆ

ನವೋದಯ ವಿದ್ಯಾಲಯ: 9 ಮತ್ತು 11 ತರಗತಿ ತರಗತಿಯ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಚಿತ್ರದುರ್ಗ. ನ.25: ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ್ ನವೋದಯ ವಿದ್ಯಾಲಯದ 2025-26ನೇ ಸಾಲಿಗೆ 9 ಮತ್ತು 11 ತರಗತಿ ತರಗತಿಯ ಪ್ರವೇಶಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಆಡಳಿತಾತ್ಮಕ

ರೈತರಿಗೆ ಹಾಗೂ ಸಾರ್ವಜನಿಕರಿಗೆ ಬೆಸ್ಕಾಂ ಮಹತ್ವದ ಸೂಚನೆ : ಈ ಕೆಲಸಕ್ಕೆ ಹಣ ಕೇಳಿದರೆ ದೂರು ನೀಡಿ

  ಚಿತ್ರದುರ್ಗ. ನ.25: ವಿಫಲವಾದ  ಪರಿವರ್ತಕದ ಬದಲಾವಣೆಗೆ ಮಧ್ಯವರ್ತಿ, ಏಜೆನ್ಸಿ, ಅಧಿಕಾರಿ ಹಾಗೂ ನೌಕರರಿಗೆ ಹಣ ನೀಡಬಾರದು ಎಂದು ರೈತರಿಗೆ ಹಾಗೂ ಸಾರ್ವಜನಿಕರಿಗೆ ಬೆಸ್ಕಾಂ ಸೂಚನೆ ನೀಡಿದೆ. ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗ

error: Content is protected !!