ಚಿತ್ರದುರ್ಗದಲ್ಲಿ ಆಟೋರಿಕ್ಷಾ ದರಪರಿಷ್ಕರಣೆ : ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹೇಳಿದ್ದೇನು ?

2 Min Read

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಜುಲೈ10) : 2023ರ ಜನವರಿ 23ರಂದು ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಆಟೋರಿಕ್ಷಾ ದರಪರಿಷ್ಕರಣೆ ನಿಗಧಿಪಡಿಸಿರುವ ಕುರಿತು ಆಟೋರಿಕ್ಷಾಗಳಿಗೆ ಮೀಟರ್‌ಗಳ ಮಾಪಾನಾಂಕ ನಿರ್ಣಯ ಮಾಡಿಸಿಕೊಂಡು 2023ರ ಸೆಪ್ಟೆಂಬರ್ 15ರ ಒಳಗಾಗಿ ವಾಹನಗಳಿಗೆ ಅಳವಡಿಸಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿ ಕಾರ್ಯದರ್ಶಿ ಪ್ರಮುತೇಶ್ ತಿಳಿಸಿದ್ದಾರೆ.

2023ರ ಜನವರಿ 23ರಂದು ಜರುಗಿದ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಟೋರಿಕ್ಷಾ ಪ್ರಯಾಣ ದರವನ್ನು ಮೊದಲ 1.5 ಕಿಮೀಗೆ ರೂ.30/- ನಿಗಧಿಪಡಿಸಿ ನಂತರದ ಪ್ರತಿ 1 ಕಿ.ಮೀ ಮತ್ತು ಭಾಗಶಃಕ್ಕೆ ರೂ.15/- ದರ ನಿಗಧಿಪಡಿಸಿ ಪರಿಷ್ಕರಿಸಲಾಗಿರುತ್ತದೆ. ಪರಿಷ್ಕøತ ದರಕ್ಕೆ ಅನುಗುಣವಾಗಿ ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ವ್ಯಾಪ್ತಿಯಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಅವರು 2023ರ ಜುಲೈ 15 ರಿಂದ ಸೆಪ್ಟೆಂಬರ್ 15 ರವರೆಗೆ ಚಾಲ್ತಿ ಆಟೋರಿಕ್ಷಾಗಳಿಗೆ ಮೀಟರ್ ಸತ್ಯಾಪನೆ ಮತ್ತು ಮುದ್ರೆ ಮಾಡಿಕೊಡುವ ಕಾರ್ಯವನ್ನು ಆಯಾಯಾ ತಾಲ್ಲೂಕು ಕೇಂದ್ರಗಳಲ್ಲಿ ನಿಗಧಿಪಡಿಸಿಕೊಳ್ಳುವ ದಿನಾಂಕಕ್ಕೆ ಅನುಗುಣವಾಗುವಂತೆ ಆಟೋರಿಕ್ಷಾ ಚಾಲಕರು ತಮ್ಮ ವಾಹನಗಳಿಗೆ ನೂತನ ದರಕ್ಕೆ ಅನುಗುಣವಾಗಿ ಕಡ್ಡಾಯವಾಗಿ ಆಟೋರಿಕ್ಷಾ ಮೀಟರ್‍ಗಳ ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳಬೇಕು. ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರು ನಿಗಧಿಪಡಿಸಿದ ಅವಧಿಯೊಳಗೆ ತಮ್ಮ ತಮ್ಮ ಆಟೋರಿಕ್ಷಾಗಳಿಗೆ ಮೀಟರ್‍ಗಳ  ಮಾಪಾನಾಂಕ ಮಾಡಿಕೊಳ್ಳಬೇಕು.

ನಿಗದಿಪಡಿಸಿದ ಆಟೋರಿಕ್ಷಾ ಪ್ರಯಾಣದರ: ಕನಿಷ್ಟ ಮೊದಲ 1.5 ಕಿ.ಮೀಗೆ ರೂ.30/- ನಂತರದ ಪ್ರತಿ ಒಂದು ಕಿಮೀಗೆ ಹಾಗೂ ಭಾಗಶಃ ರೂ.15/-, ಕಾಯುವ ದರ ಪ್ರಥಮ 15 ನಿಮಿಷ ಕಾಯುವಿಕೆಗೆ ಉಚಿತ. ನಂತರ 15 ನಿಮಿಷ ಅಥವಾ ಭಾಗಶಃ ರೂ.5/- ಪ್ರಯಾಣಿಕರ ಸರಕಿಗೆ ಮೊದಲ 20 ಕೆಜಿಗೆ ಉಚಿತ ನಂತರದ ಪ್ರತಿ 20 ಕೆಜಿ ಅಥವಾ ಭಾಗಶಃ ರೂ.5/-, ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಮೀಟರ್‍ನ ಒಂದೂವರೆ ಪಟ್ಟು ಆಟೋರಿಕ್ಷಾ ಪ್ರಯಾಣದರ ನಿಗಧಿಪಡಿಸಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿ ಕಾರ್ಯದರ್ಶಿ ಪ್ರಮುತೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *