ಸುದ್ದಿಒನ್, ಚಿತ್ರದುರ್ಗ, ಜ. 26: ಆಟೋ ಚಾಲಕರು ಸಂಚಾರಿ ನಿಯಮಗಳನ್ನ ಪಾಲನೆ ಮಾಡುವುದು ಅತ್ಯಂತ ಅವಶ್ಯಕ, ಯಾರು ಕೂಡ ನಿಯಮಗಳ ವಿರುದ್ಧವಾಗಿ ಸಂಚರಿಸದೆ ಇನ್ನೊಬ್ಬರಿಗೆ ತೊಂದರೆ ಉಂಟು ಮಾಡದೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿ ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಆಟೋ ಚಾಲಕರಿಗೆ ಮನವಿ ಮಾಡಿದರು.
ನಗರದ ಮೇದೆಹಳ್ಳಿ ರಸ್ತೆಯ ಎಪಿಎಂಸಿ ಮಾರ್ಕೆಟ್ ಬಳಿ ನೂತನವಾಗಿ ಜೈ ಭಾರತ್ ವಾಣಿಜ್ಯ ಆಟೋ ಸ್ಟಾಂಡ್ ನಿಲ್ದಾಣದ ಶಂಕು ಸ್ಥಾಪನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆಟೋ ಚಾಲಕರು ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡದೆ ವಾಹನವನ್ನು ಚಲಾಯಿಸಿದರೆ ನಗರದಲ್ಲಿ ಶೇಕಡ 90ರಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗುವುದಿಲ್ಲ ಹಾಗಾಗಿ ನಿಯಮವನ್ನು ಪಾಲನೆ ಮಾಡಿದ್ದಲ್ಲಿ ಜನರಿಗೆ ಸುಗಮ ಸಂಚಾರಕ್ಕೆ ಅವಕಾಶ ಕೊಟ್ಟಂತಾಗುತ್ತದೆ ಹಾಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ ಸೋಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ ಎಂದು ಆಟೋ ಚಾಲಕರಲ್ಲಿ ಮನವಿ ಮಾಡಿದರು.
ಆಟೋ ಚಾಲಕರ ಎಂದರೆ ಎಲ್ಲರೂ ಒಗ್ಗಟ್ಟಾಗಿರಬೇಕು, ಚಿತ್ರದುರ್ಗ ನಗರದ ವಿವಿಧ ಕಡೆ ಆಟೋ ಸ್ಟಾಂಡ್ ಗಳು ಇರುವುದು ಸಹಜ ಆದರೆ ಆಟೋ ಚಾಲಕರಲ್ಲರೂ ನಾವೆಲ್ಲರೂ ಒಂದೇ ಎನ್ನುವ ಭ್ರಾತೃತ್ವ ಚಾಲಕರಲ್ಲಿ ಮೂಡಬೇಕು ನೀವೆಲ್ಲರೂ ಒಗ್ಗಟ್ಟಾಗಿರಿ ಎಂದರು.
ಕಳೆದ ಕೆಲವು ತಿಂಗಳ ಹಿಂದಷ್ಟೇ ಚಿತ್ರದುರ್ಗ ನಗರದ ಮಧ್ಯಭಾಗದಲ್ಲಿ ಆಟ ಚಾಲಕರೊಬ್ಬರು ಪೆಟ್ರೋಲ್ ಸುರಿದುಕೊಂಡು ತಮ್ಮ ಪ್ರಾಣವನ್ನು ಕಳೆದುಕೊಂಡರು ಇದು ಅತ್ಯಂತ ವಿಷಾದನೀಯ ಅವರ ಕುಟುಂಬವನ್ನು ಸಹ ನಾನು ಭೇಟಿ ಮಾಡಿ ಸಾಂತ್ವನ ಹೇಳುವ ಪ್ರಯತ್ನವನ್ನು ಮಾಡುತ್ತೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಮಾತನಾಡಿ ಚರಂಡಿಯ ಮೇಲೆ ಸ್ಲಾಬ್ ಅಳವಡಿಕೆ ಮಾಡಿ ಯಾರಿಗೂ ತೊಂದರೆ ಆಗದಂತೆ ಆಟೋ ನಿಲ್ದಾಣವನ್ನ ಅತೀ ಶೀಘ್ರದಲ್ಲೇ ಮಾಡಿಕೊಡಲಾಗುವುದು, ಶೀಘ್ರವೇ ಈ ಒಂದು ಕಾರ್ಯರೂಪಕ್ಕೆ ಬರುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆಗೆ ಮಾತನಾಡಿ ಆಟೋ ಚಾಲಕರಿಗೆ ಆಟೋ ಸ್ಟಾಂಡ್ ವ್ಯವಸ್ಥೆಯನ್ನ ಮಾಡಿಕೊಡಲಾಗುವುದು ಎಂದು ಆಟೋ ಚಾಲಕರಿಗೆ ಸಚಿವರು ಭರವಸೆ ನೀಡಿದರು.
ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್ ಪೀರ್, ಮುಖಂಡರಾದ ಮಂಜುನಾಥ್ ರೆಡ್ಡಿ, ಶಿವಲಿಂಗಪ್ಪ, ಅನೀಸ್ ಹಾಗೂ ಜೈ ಭಾರತ ವಾಣಿಜ್ಯ ಆಟೋ ಸ್ಟಾಂಡ್ ಅಧ್ಯಕ್ಷರಾದ ಲಕ್ಷ್ಮಣ್ ನಾಯಕ್, ಉಪಾಧ್ಯಕ್ಷ ಸೈಯದ್, ಪದಾಧಿಕಾರಿಗಳಾದ ನಾಗರಾಜ್ ಶಿವಕುಮಾರ್ ದೇವರಾಜ್ ನವೀನ್ ಇಬ್ರಾಹಿಂ ಶಶಿಕುಮಾರ್ ಹರೀಶ್ ರಾಜಣ್ಣ ಮಂಜುನಾಥ್ ಲೋಕೇಶ್ ಪ್ರಸನ್ನ ಮಂಜಣ್ಣ ಜಗದೀಶ್ ಕೃಷ್ಣ ರಿಯಾಜ್ ಬಾಷಾ ಹಾಗೂ ಇತರರು ಇದ್ದರು.






