ಮೊದಲ ಬಾರಿ T20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ

1 Min Read

Australia Won T20 World Cup Title : ಆಸ್ಟ್ರೇಲಿಯಾ ತಂಡವು T20 ವಿಶ್ವಕಪ್ 2021ಅನ್ನು  ಗೆದ್ದಿದೆ. ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಕೇವಲ 2 ವಿಕೆಟ್ ಕಳೆದುಕೊಂಡು 173 ರನ್ ಗುರಿಯನ್ನು ತಲುಪಿ ಇದೇ ಮೊದಲ ಬಾರಿ T20 ವಿಶ್ವಕಪ್ ಗೆದ್ದಿದೆ.

ಮಿಚೆಲ್ ಮಾರ್ಷ್ (46 ಎಸೆತಗಳಲ್ಲಿ 78, 5 ಬೌಂಡರಿ, 4 ಸಿಕ್ಸರ್). ಅವರಿಗೆ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (38 ಎಸೆತಗಳಲ್ಲಿ 53, 4 ಬೌಂಡರಿ, 3 ಸಿಕ್ಸರ್) ಜೊತೆಯಾಟದೊಂದಿಗೆ ಮತ್ತೊಮ್ಮೆ ಆಸೀಸ್ ಗೆ ಸುಲಭ ಜಯ ತಂದುಕೊಟ್ಟರು.

ನ್ಯೂಜಿಲೆಂಡ್ ಬೌಲರ್ ಟ್ರೆಂಟ್ ಬೌಲ್ಟ್ 4 ಓವರ್ ಗಳಲ್ಲಿ 18 ರನ್ ನೀಡಿ ಎರಡು ವಿಕೆಟ್ ಪಡೆದರು. ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. 2010ರಲ್ಲಿ ಆಸ್ಟ್ರೇಲಿಯ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತ್ತು. ಟಿ20 ವಿಶ್ವಕಪ್ ಗೆಲ್ಲುವ ನ್ಯೂಜಿಲೆಂಡ್ ಆಸೆ ಕನಸಾಗಿಯೇ ಉಳಿದಿದೆ.

Twenty20 World Cup Champions

2007_India

2009_Pakistan

2010_England

2012_West Indies

2014_Sri Lanka

2016_West Indies

2021_Australia

 

Share This Article
Leave a Comment

Leave a Reply

Your email address will not be published. Required fields are marked *