ಹಿಂದಿನ ಸರ್ಕಾರದಲ್ಲಿ ನೇಮಕಾತಿ ಪರೀಕ್ಷೆಯ ಅಕ್ರಮ ಪುನಾರವರ್ತನೆಯಾಗದಂತೆ ತಡೆಯಲು ಯತ್ನ : ಪ್ರಿಯಾಂಕ್ ಖರ್ಗೆ

2 Min Read

 

ಬೆಂಗಳೂರು : 28 ಅಕ್ಟೋಬರ್ ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುತ್ತಿದ್ದ ವಿವಿಧ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಅಕ್ರಮಕ್ಕೆ ಅವಕಾಶವಾಗದ ರೀತಿಯಲ್ಲಿ ಕಲಬುರ್ಗಿ ಜಿಲ್ಲೆಯ ಎಲ್ಲಾ 17 ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವ ಬಗ್ಗೆ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

– ಪರೀಕ್ಷಾ ಕೇಂದ್ರಗಳ ಸುತ್ತಾ ಜನರ ಓಡಾಟಕ್ಕೆ ನಿರ್ಬಂಧ

– ಜೊತೆಗೆ ಪರೀಕ್ಷಾ ಕೇಂದ್ರಗಳ ಹತ್ತಿರದಲ್ಲಿರುವ ಎಲ್ಲಾ ಲಾಡ್ಜ್ ಗಳ ಪೂರ್ವಭಾವಿ ತಪಾಸಣೆ

– ಪರೀಕ್ಷೆ ನಡೆಯುವ ವೇಳೆ ಕೇಂದ್ರಗಳ ಸುತ್ತಮುತ್ತಲೂ ಸಂಶಯಾಸ್ಪದ ವಾಹನ

– ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಲಿನ ಎಲ್ಲಾ ಝೆರಾಕ್ಸ್ ಹಾಗೂ ಇತರೆ ಅಂಗಡಿ ಬಂದ್

– ಪರೀಕ್ಷೆಗೆ ಹಾಜರಾಗುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಯರುಗಳಿಗೆ HHMD (ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್) ಮೂಲಕ ಪೊಲೀಸ್ ಸಿಬ್ಬಂದಿಗಳಿಂದ ತಪಾಸಣೆ ನಡೆಸಿದ ಕೇಂದ್ರದ ಒಳಗೆ ಹೋಗಲು ಅನುಮತಿ

ಈ ರೀತಿ ಹಲವಾರು ಮುಂಜಾಗೃತಾ ಕ್ರಮಗಳನ್ನು ವಹಿಸಿದ ಪರಿಣಾಮ ಅಫಜ್ಲಪುರ್ ಪಟ್ಟಣದಲ್ಲಿರುವ ಮಹಾಂತೇಶ್ವರ ವಿದ್ಯಾವರ್ಧಕ ಸಂಘ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನವೇ ಅಕ್ರಮ ಎಸಗಲು ತಯಾರಿ ನಡೆಸಿ ಬಂದಿದ್ದ 3 ಅಭ್ಯರ್ಥಿಗಳನ್ನು ಬಂಧಿಸಲಾಗಿದೆ.

ಜೊತೆಗೆ ಕಲಬುರ್ಗಿ ನಗರದಲ್ಲಿ ಶರಣಬಸವೇಶ್ವರ ಯುನಿವರ್ಸಿಟಿ ಹಾಗೂ ಕಲಬುರ್ಗಿ ಯುನಿವರ್ಸಿಟಿ ಕಾಮರ್ಸ್ ವಿಭಾಗ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳ ನಿರ್ದೇಶಕರ ದೂರಿನ ಮೇರೆಗೆ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಬಂಧಿಸಲಾಗಿದೆ.

ಇಷ್ಟೇ ಅಲ್ಲದೇ ಈ ಅಕ್ರಮಕ್ಕೆ ಕುಮ್ಮಕ್ಕು, ಸಹಾಯ ಹಾಗೂ ತಯಾರಿ ನೀಡಿದ್ದ ಆರೋಪಿಗಳ ವಿರುದ್ಧವೂ FIR ದಾಖಲಿಸಿ ಕಾನೂನು ಪ್ರಕಾರ ಕ್ರಮ ವಹಿಸಲಾಗಿದೆ.

ನಮ್ಮ ಸರ್ಕಾರ ತನ್ನ ಮುಂಜಾಗೃತಾ ಕ್ರಮ ವಹಿಸಿದ್ದರಿಂದಲೇ ಈ ಪ್ರಕರಣಗಳು ಬೆಳಕಿಗೆ ಬಂದಿದ್ದು, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲೂ ಪರೀಕ್ಷಾ ಅಕ್ರಮಕ್ಕೆ ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ನೇಮಕಾತಿ ಪರೀಕ್ಷೆಗಳ ಪವಿತ್ರತೆ ಕಾಪಾಡಲು ಹಾಗೂ ನಮ್ಮ ಯುವಕರ ಉಜ್ವಲ ಭವಿಷ್ಯಕ್ಕೆ ಯಾವುದೇ ತೊಂದರೆಯಾಗದಂತೆ ಸಕಲ ಕ್ರಮವಹಿಸಿ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಿದೆ.

ಹಿಂದಿನ ಸರ್ಕಾರದಲ್ಲಿ ಆದಂತಹ ನೇಮಕಾತಿ ಪರೀಕ್ಷೆಗಳ ಅಕ್ರಮಗಳು ಪುನರಾವರ್ತನೆ ಆಗದಂತೆ ತಡೆಯಲು ನಮ್ಮ ಸರ್ಕಾರ ಆದ್ಯತೆ ಮೇರೆಗೆ ಮುಂಜಾಗೃತಾ ಕ್ರಮಗಳನ್ನು ವಹಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *