ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟು ಜಟಿಲಗೊಂಡಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟೀನ್ ಉಕ್ರೇನ್ ಮೇಲೆ ಯುದ್ಧವನ್ನ ಘೋಷಿಸಿದ್ದಾರೆ. ಈ ಯುದ್ಧದ ಬಗ್ಗೆ ಹಲವು ದೇಶಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಯುದ್ಧದಿಂದ ರಷ್ಯಾದ ಮೇಲೆಯೇ ಪರಿಣಾಮ ಉಂಟಾಗೋದು ಎನ್ನಲಾಗ್ತಿದೆ.
ಈ ಸಂಬಂಧ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮಾತನಾಡಿ, ಉಕ್ರೇನ್ ವಿರುದ್ಧದ ದಾಳಿಗೆ ಜಗತ್ತು ರಷ್ಯಾವನ್ನ ಹೊಣೆಗಾರನನ್ನಾಗಿ ಮಾಡುತ್ತೆ. ಇದು ವಿಪತ್ಕಾರಕ ಜೀವ ಹಾನಿಗೆ ಕಾರಣವಾಗಬಹುದು. ಇದು ಪ್ರಚೋದಿತ ಮತ್ತು ನ್ಯಾಯ ಸಮ್ಮತವಲ್ಲ ಎಂದು ತಮ್ಮ ಬೇಸರ ಹೊರ ಹಾಕಿದ್ದಾರೆ.
ಇನ್ಮು ಉಕ್ರೇನ್‍ನ ಡಿಎನ್‍ಆರ್ ಮತ್ತು ಎನ್‍ಎನ್‍ಆರ್ ಎಂದು ಕರೆಯಲ್ಪಡುವ ಡೊನಸ್ಕ್ ಮತ್ತು ಲಂಗಸ್ಕ್ ಪ್ರದೇಶದಲ್ಲಿ ಅಮೆರಿಕದ ಪ್ರಜೆಗಳು ಯಾವುದೇ ಹೊಸ ಹೂಡಿಕೆ, ವ್ಯಾಪಾರ ಮತ್ತು ಹಣಕಾಸು ನೆರವು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಶ್ವೇತಭವನದಲ್ಲಿ ಹೇಳಿದರು.