ಸುದ್ದಿಒನ್, ಚಿತ್ರದುರ್ಗ, (ಜೂ.22): ಕಾಂಗ್ರೆಸ್ ಸರ್ಕಾರ ಉಚಿತ ಭಾಗ್ಯಾ ಕೊಟ್ಟಾಗಿನಿಂದ ಅಲ್ಲಲ್ಲಿ ಸೀಟಿಗಾಗಿ ಕಿತ್ತಾಟ, ಮಹಿಳೆಯರ ಹೆಚ್ಚಿನ ಓಡಾಟದ ಸುದ್ದಿ ವೈರಲ್ ಆಗ್ತಾನೆ ಇದೆ. ಇದೆ ಬೆನ್ನಲ್ಲೇ ಕೆಎಸ್ಆರ್ಟಿಸಿ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಿದ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ.
ಚಳ್ಳಕೆರೆಯಲ್ಲಿ KSTRC ಬಸ್ ಡ್ರೈವರ್ ಮತ್ತು ಕಂಡಕ್ಟರ್ ಮೇಲೆ ಹಲ್ಲೆ : ನಾಲ್ವರ ಬಂಧನ pic.twitter.com/y7WTUrKAiC
— suddione-kannada News (@suddione) June 22, 2023
ಚಳ್ಳಕೆರೆಯಲ್ಲಿ KSRTC ಬಸ್ ಡ್ರೈವರ್ ಮತ್ತು ಕಂಡಕ್ಟರ್ ಮೇಲೆ ಹಲ್ಲೆ pic.twitter.com/0E5mIsfflh
— suddione-kannada News (@suddione) June 22, 2023
ಚಳ್ಳಕೆರೆ ಡಿಪೋಗೆ ಸೇರಿದ ಕೆಎಸ್ಆರ್ಟಿಸಿ ಬಸ್ ರಾಯದುರ್ಗ – ಬೆಂಗಳೂರು ಮಾರ್ಗದಲ್ಲಿ ಸಂಚಾರ ನಡೆಸಿತ್ತು. ಬೆಂಗಳೂರಿಗೆ ಹೋಗಲು ಮಹಿಳೆ ಬಸ್ ಹತ್ತಿದ್ದರು. ಆದರೆ ಈ ಬಸ್ ವೇಗದೂತ ಬಸ್ ಆಗಿತ್ತು. ಹೀಗಾಗಿ ಮಹಿಳೆ ಕೇಳಿದಾಗ ದಾಬಸ್ ಪೇಟೆಯಲ್ಲಿ ಬಸ್ ನಿಲ್ಲಿಸಲು ಸಾಧ್ಯವಾಗಲಿಲ್ಲ.
ಹೀಗಾಗಿ ಮೆಜೆಸ್ಟಿಕ್ ಗೆ ಬಂದಾಗ ಮಹಿಳೆ ಹಾಗೂ ಕಂಡಕ್ಟರ್ ನಡುವೆ ಮಾತುಕತೆ ನಡೆದಿದೆ. ಇದು ಇಷ್ಟಕ್ಕೆ ನಿಂತಿದೆ ಎಂದುಕೊಂಡರೆ ಮಹಿಳೆಯ ಸಂಬಂಧಿಕರಿಂದ ಬೆಂಗಳೂರಿನಿಂದ ರಾಯದುರ್ಗದ ಕಡೆ ಬಸ್ ವಾಪಾಸು ಬಂದಾಗ ಮಹಿಳೆಯ ಸಂಬಂಧಿಕರು ಚಳ್ಳಕೆರೆಯ ನೆಹರು ವೃತ್ತದಲ್ಲಿ ಬಸ್ಸನ್ನು ಅಡ್ಡಗಟ್ಟಿ ಗಲಾಟೆ ಮಾಡಿ, ಸಾರ್ವಜನಿಕವಾಗಿ ಥಳಿಸಿದ್ದಾರೆ. ಹಲ್ಲೆಗೊಳಗಾದ ಬಸ್ ಚಾಲಕ, ನಿರ್ವಾಹಕ ಚಂದ್ರೇಗೌಡ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಹಲ್ಲೆ ಮಾಡಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಚಂದ್ರಿಕಾ, ಮಲ್ಲಿಕಾರ್ಜುನ, ಶಿವರಾಜ, ನವೀನ್ ಬಂಧಿತ ಆರೋಪಿಗಳು.
ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.