ಮನರಂಜನೆಗಾಗಿ ದೈವಗಳ ಬಳಕೆ ಮಾಡಿದರೆ ಅಟ್ರಾಸಿಟಿ ಕೇಸ್ ಎಚ್ಚರಿಕೆ..!

suddionenews
1 Min Read

ಮಂಗಳೂರು: ತುಳುನಾಡಿನ ದೈವಗಳ ಬಗ್ಗೆ ಈಗೀಗ ಎಲ್ಲರಿಗೂ ತಿಳಿಯುತ್ತಿದೆ. ಆದರೆ ಕೆಲವರು ಭಕ್ತಿಯಿಂದ ಕೈಮುಗಿಯುತ್ತಾರೆ. ಇನ್ನು ಕೆಲವು ಕಡೆ ಆ ದೈವಗಳ ವೇಷವನ್ನು ಧರಿಸುತ್ತಾರೆ. ಈ ಸಂಬಂಧ ದೈವ ಪಾತ್ರಿ ದಯಾನಂದ ಕತ್ತಲ್ಸಾರ ಅಟ್ರಾಸಿಟಿ ಕೇಸ್ ದಾಖಲಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ದಯಾನಂದ ಕತ್ತಲ್ಸಾರ, ಮನರಂಜನೆಗಾಗಿ ದೈವಗಳ ಬಳಕೆ ಮಾಡಲಾಗುತ್ತಿದೆ. ಇದರಿಂದ ದೈವಗಳಿಗೆ ಅವಮಾನವಾದಂತೆ ಆಗುತ್ತಿದೆ. ತುಳುನಾಡಿನ ದೈವಗಳಂತೆ ವೇಷತೊಟ್ಟು ಅವಮಾನ ಮಾಡಲಾಗುತ್ತಿದೆ. ಹಣ ಸಂಪಾದನೆಗಾಗಿ ತುಳುನಾಡಿನ ದೈವಗಳ ವೇಷ ತೊಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಹಲವು ಕಡೆ ಈ ರೀತಿಯಾದಂತೆ ಬೆಳವಣಿಗೆ ನಡೆಯುತ್ತಿದೆ. ಕಾರ್ಯಕ್ರಮಗಳಲ್ಲಿ ತುಳುನಾಡಿನ ದೈವಗಳ ವೇಷ ಧರಿಸಿ, ಅಶ್ಲೀಲವಾಗಿ ನೃತ್ಯ ಮಾಡುತ್ತಾರೆ. ಭೂತ ಬಿಡಿಸಲು ತುಳುನಾಡಿನ ದೈವಗಳ ವೇಷ ತೊಟ್ಟು ನರ್ತನ ಮಾಡಲಾಗುತ್ತದೆ. ಕೆಲವು ಕಿಡಿಗೇಡಿಗಳು ಹಣಕ್ಕಾಗಿ ದೈವಗಳ ವೇಷ ತೊಡುತ್ತಿದ್ದಾರೆ.

ಈ ರೀತಿ ಮಾಡುತ್ತಿರುವುದರಿಂದ ಕೆಲವು ಸಮುದಾಯಗಳಿಗೆ ಅಪಮಾನವಾಗುತ್ತಿದೆ. ಪಂಬದ, ಪರವ, ನಲಿಕೆ ಸಮುದಾಯಗಳಿಗೆ ಅಪಮಾನವಾಗುತ್ತಿದೆ. ದೈವಗಳ ಅಪಪ್ರಚಾರದ ವಿರುದ್ಧ ರಿಷಭ್ ಶೆಟ್ಟಿ ಅವರು ಧ್ವನಿ ಎತ್ತಬೇಕು. ಕಿಡಿಗೇಡಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ. ದೈವಗಳಿಗೆ ಅಪಮಾನ ಮಾಡಿದರೆ ಅಂಥವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಂತಾರಾ ಸಿನಿಮಾದಲ್ಲಿ ದೈವಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲಾಗಿತ್ತು. ಆದರೆ ಸಿನಿಮಾದಲ್ಲಿ ಓ ಎಂದು ಕೂಗುವ ಧ್ವನಿಯ ದೇವರ ಭಕ್ತಿಯ ಸಂಕೇತ. ಅದನ್ನ ಹೇಗಂದರೆ ಹಾಗೇ, ಎಲ್ಲೆಂದರಲ್ಲಿ ಕೂಗಬಾರದು ಎಂಬ ನಿಯಮವಿದೆ. ಆದರೆ ಸಿನಿಮಾ ನೋಡಿದ ಪ್ರತಿಯೊಬ್ಬರು ಥಿಯೇಟರ್ ನಲ್ಲಿಯೇ ಕೂಗುವುದಕ್ಕೆ ಶುರು ಮಾಡಿದ್ದರು. ಆಗ ರಿಷಬ್ ಶೆಟ್ಟಿ ಅವರು ಮನವಿಯನ್ನು ಮಾಡಿದ್ದರು‌.

Share This Article
Leave a Comment

Leave a Reply

Your email address will not be published. Required fields are marked *