ಅಟ್ರಾಸಿಟಿ ಕಾಯ್ದೆ ವಿಶೇಷ ನ್ಯಾಯಾಲಯ ಸ್ಥಾಪಿಸಿ : ರಾಜಣ್ಣ ಆಗ್ರಹ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜೂ. 23 : ಅಟ್ರಾಸಿಟಿ ಪ್ರಕರಣಗಳನ್ನು ಪೊಲೀಸ್ ಠಾಣೆಯಿಂದ ಬೇರ್ಪಡಿಸಿ, ಪ್ರಕರಣಗಳನ್ನು ದಾಖಲು ಮಾಡಲು ನಾಗರೀಕ ಹಕ್ಕು ಜಾರಿ ನಿರ್ದೇಶನಾಯಲಯಕ್ಕೆ ನೀಡಬೇಕು, ಪ್ರತಿ ಜಿಲ್ಲೆಗೆ ಅಟ್ರಾಸಿಟಿ ಕಾಯ್ದೆ ಪ್ರಕಾರ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಬೇಕು ಸೇರಿದಂತೆ ಇತರೆ ಬೇಡಿಕೆಯನ್ನು ಈಡೇರಿಸುಚವಂತೆ ರಾಜ್ಯ ಸರ್ಕಾರವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮೀಸಲಾತಿ) ಆಗ್ರಹಿಸಿದೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷರಾದ ರಾಜಣ್ಣ, ಸಚಿವ ಸಂಪುಟ ಪರಿಶಿಷ್ಟರ ನೆರವಿಗಾಗಿ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆಕಾಯ್ದೆ ಅನ್ವಯ ಹೊಸದಾಗಿ ಜಿಲ್ಲಾವಾರು 33 ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಸ್ಥಾಪನೆಗೆ ಅನುಮೋದನೆ ನೀಡಿರುವುದಕ್ಕೆ ನಮ್ಮ ಸಂಘಟನೆವತಿಯಿಂದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲ್ಲಿಸಿ, ಕರ್ನಾಟಕ ಸರ್ಕಾರವು ಗೃಹ ಸಚಿವರು ಮತ್ತು ಸಮಾಜ ಕಲ್ಯಾಣ ಸಚಿವರಿಗೆ ನಾಗರೀಕರ ಹಕ್ಕು ಜಾರಿ ನಿರ್ದೇಶನಾಲಯದ ನೀತಿ ನಿಯಮಗಳನ್ನು ಜಾರಿಗೊಳಿಸಲು ಜವಾಬ್ದಾರಿ ನೀಡಿದ್ದು, ಸರಿಯಷ್ಠೆ,ಎಸ್.ಸಿ. / ಎಸ್.ಟಿ ಕಾಯ್ದೆ ಅನ್ವಯ ಪ್ರತ್ಯೇಕ ಪೊಲೀಸ್ ಠಾಣೆ ತೆರೆದು ಪರಿಶಿಷ್ಟರಿಗೆ ನ್ಯಾಯ ಒದಗಿಸಲು ಕಾನೂನಿನಲ್ಲಿ ಅವಕಾಶ ಇದ್ದು, ಪೊಲೀಸ್ ಠಾಣೆ ಹೊರತಾಗಿ ಅಟ್ರಾಸಿಟಿ ಪ್ರಕರಣಗಳನ್ನು ಸಂಪೂರ್ಣವಾಗಿ ನಾಗರೀಕರ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ನೀಡಲು ಹಕ್ಕೊತ್ತಾಯ ಮಾಡುತ್ತೇವೆ. ಕಾರಣ ಪೊಲೀಸ್ ಠಾಣೆ ಸಿಬ್ಬಂದಿಗಳು ತಮ್ಮ ಕಾರ್ಯ ಒತ್ತಡವನ್ನು ಕಡಿಮೆ ಮಾಡಲು ಹಾಗೂ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲು ಪ್ರತ್ಯೇಕ ಮಹಿಳಾ ಠಾಣಾ ರೀತಿಯಲ್ಲಿ ಇನ್ನು ಮುಂದೆ ನಾಗರೀಕ ಹಕ್ಕು ಜಾರಿ ನಿರ್ದೆಶನಾಲಯಕ್ಕೆ ಸಂಪೂರ್ಣ ಸ್ವಯತ್ತತೆ ನೀಡಬೇಕೆಂದು ಮನವಿ ಮಾಡಿದರು.

ಅಟ್ರಾಸಿಟಿ ಸಂತ್ರಸ್ಥರಿಗೆ ಪುರ್ನವಸತಿ ಕಲ್ಪಿಸಲು ಆಕಸ್ಮಿಕ (ಕಂಟೆನ್ಜೆನ್ಸಿ) ಯೋಜನೆಯಡಿ ಪ್ರತ್ಯೇಕ ವಾರ್ಷಿಕ ಬಜೆಟ್ ಮಾಡುವುದು.ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಕಾನೂನಿನ ಪ್ರಕಾರ ಪಾರದರ್ಶಕವಾಗಿ ಸಂತ್ರಸ್ಥರಿಗೆ ಭೂಮಿ, ನಿವೇಶನ, ಉದ್ಯೋಗ, ಮತ್ತು ಸಾಲಸೌಲಭ್ಯ ಒದಗಿಸುವುದು.ಎಸ್.ಸಿ / ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಕಾನೂನಿನ ಪ್ರಕಾರ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡುವುದು.ಎಸ್.ಸಿ / ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಕಾನೂನಿನ ಪ್ರಕಾರ ಸಂತ್ರಸ್ಥರಿಗೆ ಸೂಕ್ತ ರಕ್ಷಣೆ ನೀಡುವುದು.ಎಸ್.ಸಿ / ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಕಾನೂನಿನ ಪ್ರಕಾರ ಸಂತ್ರಸ್ಥರಿಗೆ ಕಾಯ್ದೆಯ ಅರಿವು ಮೂಡಿಸಲು ಸರ್ಕಾರಿ ಸೌಲಭ್ಯದ ಬಗ್ಗೆ ಕಾರ್ಯಾಗಾರ ಏರ್ಪಡಿಸುವುದು.ಎಲ್ಲಾ ಅಂಶಗಳನ್ನು ಗೃಹ ಸಚಿವರು ಮತ್ತು ಸಮಾಜ ಕಲ್ಯಾಣ ಸಚಿವರು ಹೊಸ ಪೊಲೀಸ್ ಠಾಣೆ ನೀತಿ ನಿಯಮದಲ್ಲಿ ಅಳವಡಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ನ್ಯಾಯ ಕೊಡಿಸಬೇಕೆಂದು ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಿದ್ದಾರೆ.

ಮಾರ್ಗದರ್ಶಿ ಸಮಿತಿಯ ಹುಲ್ಲೂರು ಕುಮಾರ್‍ಸ್ವಾಮಿ, ರಾಜ್ಯ ಉಪಾಧ್ಯಕ್ಷ ಹೆಚ್.ಕೃಷ್ಣಮೂರ್ತಿ ಜಿಲ್ಲಾಧ್ಯಕ್ಷ ಜಗದೀಶ್.ಪಿ ಕವಾಡಿಗರಹಟ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಅಂಜಿನಪ್ಪ, ಜಿಲ್ಲಾ ಗೌರವಾಧ್ಯಕ್ಷ ಈಶ್ವರ್,  ಪದಾಧಿಕಾರಿಗಳಾದ ಕೋಟೇಶ,ಅಣ್ಣಪ್ಪ,ರಮೇಶ ಭೋವಿ,ಮಹಂತೇಶ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *