ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಸುದ್ದಿಒನ್,ಚಳ್ಳಕೆರೆ : ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಗೆದ್ದು ಹಾಸನದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡೆಗೆ ಚಳ್ಳಕೆರೆಯಿಂದ ವಿವಿಧ ಕಾಲೇಜುಗಳ ಕ್ರೀಡಾ ಪಟುಗಳು ಕೆ. ಎಸ್. ಆರ್. ಟಿ. ಸಿ. ಬಸ್ ಮೂಲಕ ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡೆಗೆ ತೆರಳಿದರು.
ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ತೆರಳಿದ ಕ್ರೀಡಾಪಟುಗಳಿಗೆ ಚಳ್ಳಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ. ರಮೇಶ್ ವಿವಿಧ ಶಾಲೆಯ ಕಾಲೇಜುಗಳ ಪ್ರಾಂಶುಪಾಲರು ಶುಭ ಹಾರೈಸಿದರು.
ತಾಲ್ಲೂಕು ಕ್ರೀಡಾ ವ್ಯವಸ್ಥಾಪಕ ಅಬ್ದುಲ್ ವಾಯಿದ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ತೆರಳಿದರು.
ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ವಾಲಿಬಾಲ್ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಕ್ರೀಡಾ ವ್ಯವಸ್ಥಾಪಕ ಅಬ್ದುಲ್ ವಾಯಿದ್ ಹೇಳಿದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವಾಲಿಬಾಲ್ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೊರಟ ಸಮಯದಲ್ಲಿ ಮಾತನಾಡಿ. ಆಟ ಪಾಠದ ಜೊತೆಗೆ ಕ್ರೀಡೆ ಗೆ ಹೆಚ್ಚಿನ ಆದ್ಯತೆ ನೀಡಿದಾಗ ಪ್ರತಿಯೊಬ್ಬ ವಿದ್ಯಾರ್ಥಿಗಳು ಗುರಿ ಮುಟ್ಟಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಕ್ರೀಡಾಪಟು ಐಶ್ವರ್ಯ ಮಾತನಾಡಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರಿಂದ ನಾವು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದೇವೆ. ಪ್ರತಿಯೊಬ್ಬ ಪೋಷಕರು ಸಹ ಇಂತಹ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಂದು ಕ್ರೀಡೆಯಲ್ಲಿ ಸಾಕಷ್ಟು ಕ್ರೀಡಾಪಟುಗಳು ರಾಜ್ಯ ಅಂತರ್ ರಾಜ್ಯ ಮಟ್ಟ ಹೆಸರು ಮಾಡಿದ್ದಾರೆ. ಹಾಗೆಯೇ ಕ್ರೀಡೆಯಿಂದ ದೇಹಕ್ಕೂ ಮನಸಿಗೂ ಉಲ್ಲಾಸ ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ಕ್ರೀಡಾಪಟುಗಳಾದ ಐಶ್ವರ್ಯ, ತನುಶ್ರೀ ಯಶಸ್ವಿನಿ ಸಂಜನ್ಯ ಭವ್ಯ, ಮೇಘನ ಕಾವ್ಯ ಪ್ರಿಯದರ್ಶಿನಿ ಕ್ರೀಡಾಪಟುಗಳು ಇದ್ದರು.