ಡಿ. 24 ರಿಂದ 31ರವರೆಗೆ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಸಪ್ತಾಹ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿ. 23 : ಭಾರತರತ್ನ ಮಾಜಿ ಪ್ರಧಾನಮಂತ್ರಿ ಆಟಲ್ ಬಿಹಾರಿ ವಾಜಿಪೇಯಿರವರ ಜನ್ಮ ಶತಮಾನೋತ್ಸವ ಅಂಗವಾಗಿ ಚಿತ್ರದುರ್ಗದ ಎಲ್ಲಾ ವಿಧಾನಸಬಾ ಕ್ಷೇತ್ರಗಳಲ್ಲಿಯೂ ಸಹಾ ಡಿ. 24 ರಿಂದ 31ರವರೆಗೆ ಅಟಲ್ ಬಿಹಾರಿ ಜನ್ಮ ಸಪ್ತಾಹವನ್ನು ಹಮ್ಮಿಕೊಂಡಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ ತಿಳಿಸಿದರು.

ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ ಅವರು, ಆಟಲ್ ಬಿಹಾರಿ ವಾಜಿಪೇಯಿರವರು ದೇಶದ ಪ್ರಧಾನ ಮಂತ್ರಿಯಾಗಿದ್ದಾಗ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಉತ್ತಮವಾದ ರಸ್ತೆಗಳನ್ನು ನಿರ್ಮಾಣ ಮಾಡುವುದರ ಮೂಲಕ ನಗರಕ್ಕೆ ಸಂಪರ್ಕವನ್ನು ಕಲ್ಪಿಸಿದರು. ಇದ್ದಲ್ಲದೆ ವಾಜಿಪೇಯಿರವರ ಜೀವನದ ಸಾಧನೆ ದೇಶದ ಅಭೀವೃದ್ದಿಗೆ ಹೊಸ ಆಯಾಮ ನೀಡಿ ವಿವಿಧ ಯೋಜನೆಗಳ ಕುರಿತು ಹೊಸ ಪೀಳಿಗೆ ತಿಳಿಸುವ ಸಲುವಾಗಿ ಜನರಲ್ಲಿ ಜಾಗೃತಿಯನ್ನು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಡಿ.24ರ ಬುಧವಾರ ಸಂಜೆ 6.30ಕ್ಕೆ ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಲ್ಲಿ ಅಟಲಜೀಯವರಿಗೆ ದೀಪ ನಮನ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಮೆಣದ ಬತ್ತಿಯನ್ನು ಹಿಡಿಯುವುದರ ಮೂಲಕ ಅವರಿಗೆ ನಮನ ಸಲ್ಲಿಸಲಾಗುವುದು.
ಡಿ.25ರ ಗುರುವಾರ ನಗರದ ಎಸ್,ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ಬೆಳಿಗ್ಗೆ 11ಕ್ಕೆ ಅಟಲ್ ವಿರಾಸತ್ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಸಂಸದರಾದ ಗೋವಿಂದ ಕಾರಜೋಳ, ಶಾಸಕರಾದ ಡಾ.ಎಂ,ಚಂದ್ರಪ್ಪ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರುಗಳಾದ ಜಿ.ಎಚ್.ತಿಪ್ಪಾರೆಡ್ಡಿ ನೇರ್ಲಗುಂಟೆ ತಿಪ್ಪೇಸ್ವಾಮಿ ಎಸ್.ಕೆ.ಬಸವರಾಜನ್, ಮಂಡಲದ ಅಧ್ಯಕ್ಷರು, ಬಿಜೆಪಿ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಅಟಲ್ ವೃಕ್ಷ ಯೋಜನೆಯಡಿ ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ 10 ಸಸಿಗಳನ್ನು ನಡೆಲಾಗುವುದು ಇದರ ಉಸ್ತುವಾರಿಯನ್ನು ಶಾಲೆಯ 8ನೇ ತರಗತಿಯ ಮಕ್ಕಳಿಗೆ ವಹಿಸಲಾಗುವುದು ಅವರು 10ನೇ ತರಗತಿಗೆ ಬರುವವರೆಗೂ ಸಹಾ ಈ ಸಸಿಗಳನ್ನು ಪಾಲನೆ ಮಾಡಿ ಬೆಳಸುವ ಹೊಣೆಗಾರಿಕೆಯನ್ನು ಅವರಿಗೆ ನೀಡಲಾಗುವುದು.
ಅಟಲ್ ಸ್ಮøತಿ ಸಮ್ಮೇಳನವನ್ನು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಡಿ.25 ರಿಂದ 31ರ ತನಕ ಅಟಲ್‍ಜೀ ರವರ ಜೀವನ ಸಾಧನೆಗಳು ಕುರಿತ ಸಮ್ಮೇಳನದಲ್ಲಿ ಬೂತ್ ಮಟ್ಟದಲ್ಲಿ ತಿಳಿಸಲಾಗುವುದು. ಇದ್ದಲ್ಲದೆ ಅಟಲ್‍ಜಿ ರವರ ಜೀವನ ಕುರಿತ ಪ್ರದರ್ಶನವನ್ನು ಏರ್ಪಡಿಸಲಾಗುವುದೆಂದು ಕುಮಾರಸ್ವಾಮಿ ತಿಳಿಸಿದರು.

ಆಟಲ್ ವಾಜಿಪೇಯಿರವರ ಜನ್ಮ ಶತಮಾನೋತ್ಸವದ ಸಹ ಸಂಚಾಲಕರಾದ ಮಲ್ಲಿಕಾರ್ಜನ್ ಮಾತನಾಡಿ, ಮಾಜಿ ಪ್ರಧಾನ ಮಂತ್ರಿ ಆಟಲ್ ಬಿಹಾರಿ ವಾಜಿಪೇಯಿರವರು ಆಜಾರ ಶೃತ್ರುಗಳಾಗಿದ್ದರು ದೇಶದ ಅಭೀವೃದ್ದಿಯಲ್ಲಿ ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ. ಸರ್ವ ಶೀಕ್ಷಾ ಆಭಿಯಾನದಡಿ ಗ್ರಾಮಾಂತರ ಪ್ರದೇಶದಲ್ಲಿನ ಶಾಲೆಗಳು ಉತ್ತಮವಾಗುಲು ಸಹಾಯವಾಗಿದ್ದರು. ವಾಜಿಪೇಯಿರವರು ಇಂದಿನ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಒಂದು ಮತದಿಂದ ತಮ್ಮ ಅಧಿಕಾರವನ್ನು ಕಳೆದುಕೊಳ್ಳುವ ಸಮಯ ಬಂದಾಗಲೂ ಸಹಾ ಬೇರೆಯವರ ಬಳಿ ಕೈಚಾಚದೆ ತಮ್ಮ ಸಾನಕ್ಕೆ ರಾಜೀನಾಮೆಯನ್ನು ನೀಡಿದ ಮಹಾನ್ ವ್ಯಕ್ತಿ ವಾಜಿಪೇಯಿಯಾಗಿದ್ದಾರೆ ಎಂದರು.

ಗೋಷ್ಟಿಯಲ್ಲಿ ಆಟಲ್ ವಾಜಿಪೇಯಿರವರ ಜನ್ಮ ಶತಮಾನೋತ್ಸವ ಸಂಚಾಲಕರಾದ ಸಂಪತ್ ಕುಮಾರ್, ಯುವ ಮೋರ್ಚಾದ ಅಧ್ಯಕ್ಷ ಪಾಲಯ್ಯ, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ಭಾಗವಹಿಸಿದ್ದರು.

Share This Article
Enable Notifications OK No thanks