ಅಗ್ನಿ ದುರಂತದಂತ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇಂದು ಕೂಡ ಒಂದು ಅಗ್ನಿ ದುರಂತ ವರದಿಯಾಗಿದ್ದು, ಸುಮಾರು ಒಂಭತ್ತು ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಈ ಘಟನೆ ನಡೆದಿರುವುದು ಫ್ರಾನ್ಸ್ ನಲ್ಲಿ. ನೈಋತ್ಯ ಫ್ರಾನ್ಸ್ ನ ಸೆಂಟ್ ಲಾರೆಂಟ್ ಡೆ ಲಾ ಸಲಾಂಕ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಇದ್ದಕ್ಕಿದ್ದ ಹಾಗೇ ಭಾರಿ ಸ್ಪೋಟದ ಸದ್ದು ಕೇಳಿ ಬಂದಿದೆ. ಆದ್ರೆ ಇನ್ನು ಕೂಡ ಸ್ಪೋಟಕ್ಕೆ ಕಾರಣವೆನೆಂದು ತಿಳಿದು ಬಂದಿಲ್ಲ.

ಅಗ್ನಿ ದುರಂತದಿಂದಾಗಿ ಬೀದಿಯ ಎರಡು ಬದಿಗಳಲ್ಲಿದ್ದ ಕಟ್ಟಡಗಳು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಒಂಭತ್ತು ಜನ ಅಸುನೀಗಿದ್ದಾರೆ ಎನ್ನಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಫ್ರಾನ್ಸ್ ನ ಆಂತರಿಕ ಸಚಿವ ಗೆರಾಲ್ಡ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

