ವಾಷಿಂಗ್ಟನ್ : ಅಮೇರಿಕಾದಲ್ಲಿ ಸುಂಟರಗಾಳಿ ಬಾರಿ ಅನಾಹುತ ಸೃಷ್ಟಿಸುತ್ತಿದೆ. ಕೆಂಟುಕಿಯಲ್ಲಿ ಸುಂಟರಗಾಳಿತ ರಭಸಕ್ಕೆ ಅಂದಾಜು 50 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಗವರ್ನರ್ ಆಂಡಿ ಬೆಸ್ಚಿರ್ ಹೇಳಿದ್ದಾರೆ.

ಸುಂಟರಗಾಳಿಯು ರಾಜ್ಯದ 300 ಕಿಲೋಮೀಟರ್‌ಗಳಷ್ಟು ಉದ್ದದ ಹಲವಾರು ಕಡೆಗಳಲ್ಲಿ ಹಾನಿಯನ್ನುಂಟಾಗಿದೆ. ಘಟನೆಯಲ್ಲಿ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಇದು ಕೆಂಟುಕಿಯ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಸುಂಟರಗಾಳಿಯಾಗಿದೆ,” ಎಂದು ಅವರು ಹೇಳಿದರು. ಮೇಫೀಲ್ಡ್ ನಗರದಲ್ಲಿ ಕ್ಯಾಂಡಲ್ ಫ್ಯಾಕ್ಟರಿಯ ಮೇಲ್ಛಾವಣಿ ಕುಸಿದಿದ್ದು, ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸಿವೆ. ಸ್ಥಳೀಯವಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.
ಗೋದಾಮಿನಲ್ಲಿ ಸಿಲುಕಿದ ನೂರಾರು ಮಂದಿ :
ಇಲಿನಾಯ್ಸ್‌ನ ಎಡ್ವರ್ಡ್ಸ್‌ವಿಲ್ಲೆಯಲ್ಲಿರುವ ಬೃಹತ್ ಅಮೆಜಾನ್ ಗೋದಾಮು ಸುಂಟರಗಾಳಿಯಿಂದ ನಾಶವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 100 ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅವರನ್ನು ರಕ್ಷಿಸಲು ಅಧಿಕಾರಿಗಳು ಪರಿಹಾರ ಕ್ರಮ ಕೈಗೊಳ್ಳುತ್ತಿದ್ದಾರೆ. ಕಾಲಿನ್ಸ್‌ವಿಲ್ಲೆ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿ ಇದನ್ನು ದೊಡ್ಡ ಅಪಘಾತ ಎಂದು ಬಣ್ಣಿಸಿದೆ. ಅಪಘಾತದಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಅಥವಾ ಸಾವನ್ನಪ್ಪಿದ್ದಾರೆಯೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಇಲಿನಾಯ್ಸ್ ರಾಜ್ಯ ಪೊಲೀಸ್, ತುರ್ತು ನಿರ್ವಹಣಾ ಸಂಸ್ಥೆ ಮತ್ತು ಸ್ಥಳೀಯ ಅಧಿಕಾರಿಗಳು ಪರಿಸ್ಥಿತಿಯನ್ನು ಸ್ವತಃ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಗವರ್ನರ್ ಜೆಬಿ ಪ್ರಿಟ್ಜರ್ ಹೇಳಿದ್ದಾರೆ.

