ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಮೇ.10) : ರಾಜ್ಯ ವಿಧಾನಸಭೆಗೆ ಬುಧವಾರ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯು ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಅಂದಾಜು ಶೇ.80.37 ರಷ್ಟು ಮತದಾನವಾಗಿದೆ.
ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ, ಮಹಿಳೆಯರು, ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಇದೇ ಮೊದಲ ಬಾರಿಗೆ ಮತದಾನ ಮಾಡುವ ಯುವ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಬೆಳಿಗ್ಗೆ ಮಂದಗತಿಯಿಂದ ಆರಂಭವಾದ ಮತದಾನವು ಮಧ್ಯಾಹ್ನದ ಬಿರುಸು ಪಡೆದುಕೊಂಡಿತು.
ಮತಗಟ್ಟೆಯಲ್ಲಿ ಬಿಸಿಲಿನಿಂದ ರಕ್ಷಣೆಗಾಗಿ ಶಾಮಿಯಾನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಆಸನ ಹಾಗೂ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆ ಕೇಂದ್ರಗಳಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.
ಬೆಳಿಗ್ಗೆ 9ಕ್ಕೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಜಿಲ್ಲೆಯ ಸರಾಸರಿ ಮತದಾನ ಶೇ.6.08 ಮತದಾನವಾಯಿತು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.8.37 ರಷ್ಟು ಮತದಾನ ನಡೆಯಿತು. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಶೇ.8.6, ಚಳ್ಳಕೆರೆ ಶೇ.3.6, ಹಿರಿಯೂರು ಶೇ.5.1, ಹೊಸದುರ್ಗ ಶೇ.4.67, ಹೊಳಲ್ಕೆರೆ ಶೇ.5.44 ಮತದಾನ ನಡೆಯಿತು.
ಬೆಳಿಗ್ಗೆ 11ಕ್ಕೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಜಿಲ್ಲೆಯ ಸರಾಸರಿ ಮತದಾನ ಶೇ.18.56 ಮತದಾನವಾಯಿತು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.20.47 ರಷ್ಟು ಮತದಾನ ನಡೆಯಿತು. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಶೇ.24.64, ಚಳ್ಳಕೆರೆ ಶೇ.16.35, ಹಿರಿಯೂರು ಶೇ.13.40, ಹೊಸದುರ್ಗ ಶೇ.16.91, ಹೊಳಲ್ಕೆರೆ ಶೇ.18.93 ಮತದಾನ ನಡೆಯಿತು.
ಮಧ್ಯಾಹ್ನ 1ಕ್ಕೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಜಿಲ್ಲೆಯ ಸರಾಸರಿ ಮತದಾನ ಶೇ.36.41 ಮತದಾನವಾಯಿತು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.38.1 ರಷ್ಟು ಮತದಾನ ನಡೆಯಿತು. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಶೇ.43.19, ಚಳ್ಳಕೆರೆ ಶೇ.30.16, ಹಿರಿಯೂರು ಶೇ.30.9, ಹೊಸದುರ್ಗ ಶೇ.36, ಹೊಳಲ್ಕೆರೆ ಶೇ.39.39 ಮತದಾನ ನಡೆಯಿತು.
ಮಧ್ಯಾಹ್ನ 3ಕ್ಕೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಜಿಲ್ಲೆಯ ಸರಾಸರಿ ಮತದಾನ ಶೇ.53.05.41 ಮತದಾನವಾಯಿತು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.53.49 ರಷ್ಟು ಮತದಾನ ನಡೆಯಿತು. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಶೇ.60.16, ಚಳ್ಳಕೆರೆ ಶೇ.52.19, ಹಿರಿಯೂರು ಶೇ.40, ಹೊಸದುರ್ಗ ಶೇ.55.17, ಹೊಳಲ್ಕೆರೆ ಶೇ.57.71 ಮತದಾನ ನಡೆಯಿತು.
ಸಂಜೆ 5ಕ್ಕೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಜಿಲ್ಲೆಯ ಸರಾಸರಿ ಮತದಾನ ಶೇ.70.74 ಮತದಾನವಾಯಿತು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.70.47 ರಷ್ಟು ಮತದಾನ ನಡೆಯಿತು. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಶೇ.76, ಚಳ್ಳಕೆರೆ ಶೇ.69.32, ಹಿರಿಯೂರು ಶೇ.62.05, ಹೊಸದುರ್ಗ ಶೇ.71.87, ಹೊಳಲ್ಕೆರೆ ಶೇ.74.97ರಷ್ಟು ಮತದಾನವಾಯಿತು.
ಅಂತಿಮವಾಗಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಜಿಲ್ಲೆಯ ಸರಾಸರಿ ಮತದಾನ ಶೇ.80.37 ಮತದಾನವಾಯಿತು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.76.42 ರಷ್ಟು ಮತದಾನ ನಡೆಯಿತು. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಶೇ.82.73, ಚಳ್ಳಕೆರೆ ಶೇ.79.8, ಹಿರಿಯೂರು ಶೇ.78.25, ಹೊಸದುರ್ಗ ಶೇ.84, ಹೊಳಲ್ಕೆರೆ ಶೇ.82 ರಷ್ಟು ಮತದಾನವಾಯಿತು.
*ಡಿಸಿ, ಸಿಇಒ, ಎಸ್‍ಪಿ ಮತದಾನ:* ಚಿತ್ರದುರ್ಗ ನಗರದ ಸಂತ ಜೋಸೆಫೆರ ಕಾನ್ವೆಂಟ್ ಶಾಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಅಧಿಕಾರಿ ಎಂ.ಎಸ್.ದಿವಾಕರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮತದಾನ ಮಾಡಿದರು.
ಇದೇ ಮೇ.13ರಂದು ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ.