ಏಷ್ಯನ್ ಗೇಮ್ಸ್ 2023 : 72 ವರ್ಷಗಳ ಇತಿಹಾಸದಲ್ಲಿ ಭಾರತದ ಹೊಸ ದಾಖಲೆ..

2 Min Read

ಸುದ್ದಿಒನ್ : ಏಷ್ಯನ್ ಕ್ರೀಡಾಕೂಟದ 72 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಅತಿ ಹೆಚ್ಚು ಪದಕಗಳನ್ನು ಗೆದ್ದುಕೊಂಡಿತು.

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಶತಕದ ಸಮೀಪದಲ್ಲಿದೆ.‌ 2018 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 70 ಪದಕಗಳನ್ನು ಗೆದ್ದಿತ್ತು. ಇದು ಇಲ್ಲಿಯವರೆಗಿನ ಅತ್ಯಧಿಕವಾಗಿದೆ. ಈ ಬಾರಿ 100 ಪದಕಗಳ ಗುರಿಯೊಂದಿಗೆ ಭಾರತದ ಅಥ್ಲೀಟ್ ಗಳು ಕಣಕ್ಕೆ ಇಳಿದು ಗುರಿ ತಲುಪಿದ್ದಾರೆ.

ಇಲ್ಲಿಯವರೆಗೆ ಭಾರತ 95 ಪದಕಗಳನ್ನು ಗೆದ್ದುಕೊಂಡಿತ್ತು. ಇನ್ನೂ 9 ಅಥ್ಲೀಟ್‌ಗಳು ಫೈನಲ್ ತಲುಪಿದ್ದಾರೆ.  ಕುಸ್ತಿಯಲ್ಲಿ ಸೋನಮ್ ಮಲಿಕ್ ಅವರು ಕಂಚಿನ ಪದಕ ಪಡೆಯುವುದರೊಂದಿಗೆ ಭಾರತದ ಪದಕಗಳ ಸಂಖ್ಯೆ 100 ರ ಗಡಿ ದಾಟಲಿದೆ.

ಭಾರತದ ಆಟಗಾರರಾದ ಅಭಿಷೇಕ್ ವರ್ಮಾ ಮತ್ತು ಓಜಸ್ ಪ್ರವೀಣ್ ಅವರು ಶನಿವಾರದಂದು ಕಾಂಪೌಂಡ್ ಆರ್ಚರಿ ವೈಯಕ್ತಿಕ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮುಖಾಮುಖಿಯಾಗಲಿದ್ದಾರೆ. ವೆನ್ನಂ ಜ್ಯೋತಿ ಸುರೇಖಾ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
ಕಬಡ್ಡಿಯಲ್ಲೂ ಎರಡು ಪದಕಗಳು ಖಾಯಂ ಆಗಿವೆ. ಪುರುಷ ಮತ್ತು ಮಹಿಳಾ ತಂಡಗಳು ಫೈನಲ್ ತಲುಪಿವೆ. ಬ್ರಿಡ್ಜ್, ಹಾಕಿ ಮತ್ತು ಪುರುಷರ ಕ್ರಿಕೆಟ್ ತಂಡಗಳು ಕೂಡ ಸೆಮೀಸ್ ನಲ್ಲಿ ಗೆದ್ದು ಫೈನಲ್‌ ಸೇರಿವೆ. ಬ್ಯಾಡ್ಮಿಂಟನ್ (ಪುರುಷರ ಡಬಲ್ಸ್)ನಲ್ಲಿ ಸಾತ್ವಿಕ್ರಾಜ್ ರಿಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಕನಿಷ್ಠ ಕಂಚು ಗೆಲ್ಲಲಿದ್ದಾರೆ. ಕೊನೆಯ ದಿನ ಇನ್ನೂ ಕಾರ್ಯಕ್ರಮಗಳು ನಡೆಯಲಿರುವ ಹಿನ್ನೆಲೆಯಲ್ಲಿ ಭಾರತ ನೂರಕ್ಕೂ ಹೆಚ್ಚು ಪದಕ ಗೆಲ್ಲುವುದು ಖಚಿತವಾಗಿದೆ.

ಹಾಕಿ ಫೈನಲ್ ನಲ್ಲಿ ಜಪಾನ್ ತಂಡವನ್ನು ಗೆದ್ದದೆ. ಈ ಮೂಲಕ ಭಾರತ ನೇರವಾಗಿ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ಗೆ ಭಾರತ 655 ಆಟಗಾರರ ತಂಡವನ್ನು ಕಳುಹಿಸಿದೆ.

ಸದ್ಯ ಭಾರತ 95 ಪದಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿಯವರೆಗೆ 22 ಚಿನ್ನ, 34 ಬೆಳ್ಳಿ ಮತ್ತು 39 ಕಂಚಿನ ಪದಕಗಳನ್ನು ಗೆದ್ದಿದೆ.

ಆತಿಥೇಯ ರಾಷ್ಟ್ರ ಚೀನಾ 184 ಚಿನ್ನ ಸೇರಿದಂತೆ 346 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ,

ಜಪಾನ್ (44 ಚಿನ್ನ ಸೇರಿದಂತೆ 159 ಪದಕಗಳು) ಮತ್ತು

ರಿಪಬ್ಲಿಕ್ ಆಫ್ ಕೊರಿಯಾ
(36 ಚಿನ್ನದೊಂದಿಗೆ 166 ಪದಕಗಳು) ನಂತರದ ಸ್ಥಾನದಲ್ಲಿವೆ.

ಏಷ್ಯನ್ ಕ್ರೀಡಾಕೂಟವು ನಾಲ್ಕು ವರ್ಷಗಳಿಗೊಮ್ಮೆ ವೇಳಾಪಟ್ಟಿಯಂತೆ ನಡೆಯುತ್ತದೆ. ಈ ಲೆಕ್ಕಾಚಾರದ ಪ್ರಕಾರ 2022ರಲ್ಲಿ ಏಷ್ಯನ್ ಗೇಮ್ಸ್ ನಡೆಯಬೇಕಿತ್ತು. ಆದರೆ, ಚೀನಾದಲ್ಲಿ ಕೊರೊನಾ ವೈರಸ್‌ನಿಂದಾಗಿ ಅದು ಮುಂದೂಡಲ್ಪಟ್ಟಿತ್ತು.

Share This Article
Leave a Comment

Leave a Reply

Your email address will not be published. Required fields are marked *