ಮೈಸೂರು: ಇಂದು ಪುನೀತ್ ರಾಜ್‍ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಮೈಸೂರು ವಿಶ್ವವಿದ್ಯಾಲಯ ಗೌರವಿಸಿದೆ. ಮರಣೋತ್ತರವಾಗಿ ಈ ಪದವಿ ನೀಡಿದ್ದು, ಇಂದು ನಡೆದ ಕಾರ್ಯಕ್ರಮದಲ್ಲಿ ಅಶ್ವಿನಿ ಅವರು ಈ ಗೌರವ ಸ್ವೀಕರಿಸಿದ್ದಾರೆ.
ಇದೇ ವೇಳೆ ಮುಂದಿನ ವರ್ಷದಿಂದ ಪಾರ್ವತಮ್ಮ ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಅವರ ಹೆಸರಿನಲ್ಲಿ ಪದಕ ವಿತರಿಸುವುದಾಗು ಮೈಸೂರಿನಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಘೋಷಣೆ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅಶ್ವಿನಿ ಅವರು, ಪಾರ್ವತಮ್ಮ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಹೆಸರಲ್ಲಿ, ಬಂಗಾರದ ಪದಕ ಪ್ರದಾನ ಮಾಡುತ್ತೇವೆ. ಬ್ಯುಸಿನೆಸ್ ಮ್ಯಾನೆಜ್‌ಮೆಂಟ್ ವಿಭಾಗಕ್ಕೆ ಪಾರ್ವತಮ್ಮ ಪದಕ, ಲಲಿತ ಕಲೆ ವಿಭಾಗಕ್ಕೆ ಪುನೀತ್ ಹೆಸರಲ್ಲಿ ಪದಕ ವಿತರಣೆ ಮಾಡಲಿದ್ದೇವೆ. ಅದು ಮುಂದಿನ ವರ್ಷದಿಂದಲೇ ಪದಕ ಪ್ರದಾನ ಮಾಡಲಾಗುತ್ತೆ ಎಂದಿದ್ದಾರೆ.
ಅಪ್ಪು ನಮ್ಮ ಜೊತೆ ಇಲ್ಲ ಎಂಬುದನ್ನ ಯಾರೊಬ್ಬರಿಂದಲೂ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರೊಬ್ಬ ಬರೀ ನಟನಾಗಿ ಉಳಿದಿರಲಿಲ್ಲ. ಒಂದು ಶಕ್ತಿಯಾಗಿ, ಅದೆಷ್ಟೋ ಜನರ ಬದುಕಾಗಿ ಉಳಿದಿದ್ದರು. ಅವರಿದ್ದದ್ದರಿಂದಲೇ ಅದೆಷ್ಟೋ ಅನಾಥ ಮಕ್ಕಳು ಅನ್ನ ತಿನ್ನುತ್ತಿದ್ದರು. ಅವರ ನಿಧನದ ಬಳಿಕ ಚಿತ್ರರಂಗ, ಶಕ್ತಿಧಾಮ ಕಳೆಕುಂದಿದೆ. ಆದ್ರೆ ಸರ್ಕಾರದಿಂದ ಸಿಕ್ಕ ಗೌರವ, ಈಗ ಡಾಕ್ಟರೇಟ್ ಈ ಎಲ್ಲಾ ಗೌರವ ಅವರಿಗೆ ಸಲ್ಲಲೇಬೇಕಾಗಿತ್ತು.