Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಿಚ್ಚನ ಪಂಚಾಯ್ತಿಯಲ್ಲಿ ಅಶ್ವಿನಿಗೆ ಮತ್ತೆ ಕ್ಲಾಸ್..!

---Advertisement---

ಅಶ್ವಿನಿ ಗೌಡ ಅದ್ಯಾಕೋ ಏನೋ ಬದಲಾಗುತ್ತಲೇ ಇಲ್ಲ. ಕಳೆದ ವಾರವಷ್ಟೇ ಸುದೀಪ್ ಅವರು ಬುದ್ಧಿ ಮಾತು ಹೇಳಿದ್ದರು. ಈ ವಾರವಾದರೂ ಸರಿಯಾಗ್ತಾರೆ ಅಂದುಕೊಂಡರೆ ಅದು ಸಾಧ್ಯವಾಗಲೇ ಇಲ್ಲ. ಈ ವಾರ ಇನ್ನು ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಕಳಪೆ ಪಟ್ಟ ಕೊಟ್ಟರೂ ಸಿಕ್ಕಾಪಟ್ಟೆ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಕಳೆದ ವಾರ ರಕ್ಷಿತಾ ವಿಚಾರಕ್ಕೆ ಪಾಠ ಹೇಳಿಸಿಕೊಂಡಿದ್ದರು, ಈ ವಾರ ಮನೆಯ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಬುದ್ಧಿ ಹೇಳಿಸಿಕೊಳ್ಳಲಿದ್ದಾರೆ.

ಮ್ಯೂಟಂಟ್ ರಘುಗೆ ಸ್ಪೆಷಲ್ ಅಧಿಕಾರವಿದ್ದ ಕಾರಣ, ಅಶ್ವಿನಿ ಅವರಿಗೆ ಕಳಪೆ ಪಟ್ಟವನ್ನ ನೀಡಿದ್ದರು. ಆದರೆ ಅಶ್ವಿನಿ ಅವರು ಕಂಪ್ಲೀಟ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಸೇಬು ತಿಂದಿದ್ದಾರೆ, ಹೊರಗೆ ಜಾಸ್ತಿ ಕಾಲ ಕಳೆದಿದ್ದಾರೆ, ತರಕಾರಿ ಕಟ್ ಮಾಡಿ ಕೊಟ್ಟಿಲ್ಲ ಹೀಗೆ ಹಲವು ರೂಲ್ಸ್ ಬ್ರೇಕ್ ಮಾಡಿದ್ದಾರೆ. ಇದರ ಜೊತೆಗೆ ಕಾಕ್ರೋಚ್ ಸುಧಿ ಅವರಿಗೂ ಪಾಠ ಮಾಡಲಿದ್ದಾರೆ.

ಯಾಕಂದ್ರೆ ಕಾಕ್ರೋಚ್ ಸುಧಿ ರಕ್ಷಿತಾಗೆ ಸೆಡೆ ಎಂಬ ಪದವನ್ನ ಬಳಕೆ ಮಾಡಿದ್ದರು. ಚೈಲ್ಡ್ ಗೆ ಸೆಡೆ ಅಂತಾರೆ ಎಂಬ ಸಮರ್ಥನೆಯನ್ನು ನೀಡಿದ್ದರು. ಇದಕ್ಕೆ ಅಶ್ವಿನಿ ಗೌಡ ಅವರು ಸ್ಟ್ಯಾಂಡ್ ತೆಗೆದುಕೊಂಡಿದ್ದರು. ಈ ಕಾರಣಕ್ಕೆ ಇಬ್ಬರಿಗೂ ಕಿಚ್ಚ ಸುದೀಪ್ ಹೇಗೆ ಪಾಠ ಮಾಡ್ತಾರೆ ಎಂಬುದನ್ನ ನೋಡುವುದಕ್ಕೆ ಎಲ್ಲರೂ ಕಾಯ್ತಿದ್ದಾರೆ. ವಾರದಲ್ಲಿ ಕಿಚ್ಚನ ಚಪ್ಪಾಳೆಯು ಮುಖ್ಯವಾಗುತ್ತದೆ. ಕಿಚ್ಚನ ಚಪ್ಪಾಳೆ ಪಡೆಯಬೇಕು ಅಂದ್ರೆ ಆ ವಾರಪೂರ್ತಿ ಮನೆಗೆ ಒಳ್ಳೆಯದಾಗುವಂತೆ, ನಡವಳಿಕೆ ಉತ್ತಮವಾಗಿರುವಂತೆ, ಎಲ್ಲರ ಜೊತೆಗೂ ನಿಲ್ಲುವಂತೆ, ಟಾಸ್ಕ್ ಗಳನ್ನ ಸರಿಯಾದ ರೀತಿಯಲ್ಲಿ ಆಡಬೇಕಾಗಿರುತ್ತದೆ. ಈ ವಾರ ಅದೆಲ್ಲದರಲ್ಲೂ ರಕ್ಷಿತಾ ಮನಸ್ಸನ್ನ ಗೆದ್ದಿದ್ದು, ಈ ವಾರ ಕಿಚ್ಚನ ಚಪ್ಪಾಳೆಯನ್ನು ಪಡೆಯಲಿದ್ದಾರೆ ಎನ್ನಲಾಗ್ತಾ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now