ರಾಮನಗರ: ಸಚಿವ ಅಶ್ವತ್ಥ್ ನಾರಾಯಣ್ ಬಗ್ಗೆ ಮತ್ತೆ ಆಕ್ರೋಶ ಹೊರ ಹಾಕಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾತಲ್ಲ, ಅದರಲ್ಲಿ ಅನುಮಾನವೇನು ಇಲ್ಲ. ಕರ್ನಾಟಕದಲ್ಲಿ ಕರೆಪ್ಟ್ ಮಿನಿಸ್ಟರ್. ಅದರಲ್ಲಿ ಅನುಮಾನವೇನು ಇಲ್ಲ. ಸುಮ್ಮನೆ ಬಂದು ನಾನು ಬ್ರಾಹ್ಮಣ ತರ ಇದ್ದೀನಿ, ಬಹಳ ಶುದ್ಧ ರಾಜಕಾರಣಿ. ಅದೆಲ್ಲಾ ಯಾಕೆ ಬೇಕು. ಇಷ್ಟು ದಿನ ಎಲ್ಲಾ ಗೊತ್ತಾಗುತ್ತೆ. ತನ್ನ ನಡವಳಿಕೆಯಿಂದ. ಮಾತನಾಡುವ ಶೈಲಿ, ಮತ್ತೊಂದು ನೋಡಿದರೆ ಸಂಸ್ಕೃತಿ ಇರುವ ಯಾರು ಆ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.
ಇದು ನಿಜ ಸಂಗತಿ. ಈ ಜಿಲ್ಲೆಯಲ್ಲಿ ನಡೆದಂತ ಅನಾಹುತಗಳಿಗೆ ಇದು ಫ್ಯಾಕ್ಟ್. ಅದೇನೋ ಬಿಚ್ತೀನಿ ಅಂತ ಹೇಳಿದ್ದಾರಲ್ಲ, ಎಲ್ಲವನ್ನು ಬಿಚ್ಲಿ. ಯಾರು ಬೇಡ ಎಂದವರು. ತಡ ಮಾಡಬಾರದು ಎಂದಿದ್ದಾರೆ. ಇನ್ನು ಕಮಲ್ ಪಂಥ್ ಬಗ್ಗೆ ಮಾತನಾಡಿ, ಅವರು ಪ್ರಮುಖ ಸ್ಥಾನದಲ್ಲಿದ್ದವರು. ನಡೆದಂತ ಹಗರಣವನ್ನು ಯಾರಾದರೂ ಮುಚ್ಚಿ ಹಾಕಲು ಸಾಧ್ಯವಾ..? ಸರ್ಕಾರದ ಪ್ರಭಾವದಿಂದ ಮುಚ್ಚಿ ಹಾಕಬಹುದು.
ಸಾಕಷ್ಡು ಜನ ಮೊದಲ ರ್ಯಾಂಕ್ ಪಡೆದಿದ್ದಾರೆ. ನಮ್ಮ ಜಿಲ್ಲೆಯ ರೆ ನಾಲ್ಕೈದು ಜನ ಇದ್ದಾರೆ. ಈಗ ಅವರು ಒಳಗೆ ಹೋಗಿದ್ದಾರೆ. ನಮಗೆ ಬೇಕಾದವರೇ ಅವರೆಲ್ಲ. ಸಹಾಯ ಮಾಡಿರಬಹುದು. ಮಂತ್ರಿಗಳಿರಬಹುದು ಅಥವಾ ಬೇರೆ ಯಾರಾದ್ರೂ ಆಗಿರಲು ಬಹುದು. ನಾನು ಚೆಕ್ ಮಾಡಿದ್ದೀನಿ. ಅವರಿಗೆ ಏನೋ ಆಸೆ. ಅಂಗಡಿ ಓಪನ್ ಮಾಡಿದ್ರೆ ವ್ಯಾಪಾರಕ್ಕೆ ಬರ್ತಾರೆ. ಅಂಗಡಿಯೇ ಓಪನ್ ಇಲ್ಲದೆ ಇದ್ದರೆ ಖರೀದಿಗೆ ಬರ್ತಾ ಇದ್ರಾ..? ಈ ರೀತಿ ಮಾಡಬಹುದು ಅಂತ ಪ್ರಭಾವಿಗಳು ತಿಳಿಸಿರುವ ಕಾರಣ ಮನೆ ಮಠ, ಆಸ್ತಿ ಪಾಸ್ತಿ ಮಾಡಿ ತಗಲಾಕಿಕೊಂಡಿದ್ದಾರೆ. ಈಗ ಲಂಚ ಕೊಟ್ಟಚನು ನಾನು ಕೊಟ್ಟೆ ಅಂತ ಯಾರು ಹೇಳಲ್ಲ. ತೆಗೆದುಕೊಂಡವನು ಹೇಳಲ್ಲ ಎಂದು ಪಿಎಸ್ಐ ಹಗರಣದ ಬಗ್ಗೆ ಡಿಕರ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.