ಬೆಂಗಳೂರು: ಕಾಂಗ್ರೆಸ್ ನವರು ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ, ಜನವರಿ 9 ರಂದು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಬಿಜೆಪಿ ನಾಯಕರು ಆ ಬಗ್ಗೆ ಆಗಾಗ ಏನಾದರೊಂದನ್ನ ಹೇಳಿ ವ್ಯಂಗ್ಯ ಮಾಡುತ್ತಲೆ ಇರುತ್ತಾರೆ. ಇದೀಗ ಸಚಿವ ಅಶ್ವಥ್ ನಾರಾಯಣ್ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಕಿಂಗ್ ಫೋಟೋ ಹಾಕಿ ವ್ಯಂಗ್ಯವಾಡಿದ್ದಾರೆ.
ಹೊಸ ವರ್ಷದ ಮೊದಲ ದಿನ ಸ್ಯಾಂಕಿ ಕೆರೆಯ ವಾಯು ವಿಹಾರದ ಮೂಲಕ ಆರಂಭ. ಇದು ಮೇಕೆದಾಟು ಪಾದಯಾತ್ರೆಗೆ ತಯಾರಿ ಕೂಡ ಎಂದು ಡಿ ಕೆ ಶಿವಕುಮಾರ್ ಪೋಸ್ಟ್ ವೊಂದನ್ನ ಹಾಕಿದ್ದಾರೆ.
ಇದೇ ಪೋಸ್ಟನ್ನ ಶೇರ್ ಮಾಡಿಕೊಂಡಿರುವ ಸಚಿವ ಅಶ್ವಥ್ ನಾರಾಯಣ್, 2022 ವರ್ಷದ ಶುಭಾಶಯಗಳು ಡಿ ಕೆ ಶಿವಕುಮಾರ್ ಅವರೇ. ನಮ್ಮ ಮಲ್ಲೇಶ್ವರ ಕ್ಷೇತ್ರದ ಸ್ಯಾಂಕಿ ಕೆರೆಯ ಸದುಪಯೋಗದ ಬಗ್ಗೆ ಜನತೆಗೆ ಅರಿವು ಮೂಡಿಸುತ್ತಿರುವುದಕ್ಕಾಗಿ ನನ್ನ ಕಡೆಯಿಂದ ಧನ್ಯವಾದಗಳು. ವಾಯುವಿಹಾರ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಸ್ವಚ್ಛ, ಸುಂದರವಾಗಿಟ್ಟಿದ್ದೇವೆ. ಈ ವಾತಾವರಣ ನಿಮಗೆ ಆಹ್ಲಾದಕರವಾಗಿತ್ತೆಂದು ಭಾವಿಸುತ್ತೇನೆ ಎಂದು ಬರೆದಿದ್ದಾರೆ.