ಸುದ್ದಿಒನ್, ಚಿತ್ರದುರ್ಗ, ನವೆಂಬರ್.24 :ರಾಷ್ಟ್ರಮಟ್ಟದ ಅತ್ಯಂತ ಸೃಜನಶೀಲ ರಂಗ ನಿರ್ದೇಶಕರಲ್ಲಿ ಅಶೋಕ ಬಾದರದಿನ್ನಿ ಅವರು ಒಬ್ಬರು, ಅವರ ನಾಟಕದ ಪ್ರತಿ ಪ್ರಯೋಗದಲ್ಲಿ ಹೊಸತನವನ್ನು ಕಾಣಬಹುದಾಗಿತ್ತು.
ರಂಗಭೂಮಿಯ ಪ್ರಯೋಗಶೀಲ ನಾಟಕಗಳಿಗೆ ಹೊಸ ಆಯಾಮ ನೀಡಿದವರಲ್ಲಿ ಅಶೋಕ ಬಾದರದಿನ್ನಿ ಪ್ರಮುಖರು ಎಂದು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸೃತ ಹಾಗೂ ಹಿರಿಯ ಕಲಾವಿದ ಜಂಬೂನಾಥ್ ಹೇಳಿದರು.
ನಗರದ ಐಯುಡಿಪಿ ಬಡಾವಣೆಯ ಲಿಲ್ ಬ್ರೂಕ್ಸ್ ಶಾಲಾ ಆವರಣದಲ್ಲಿ ಶುಕ್ರವಾರ ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ದಿ: ಆಶೋಕ ಬಾದರದಿನ್ನಿ ರಂಗ ಸ್ಮರಣೋತ್ಸವ ಕಾರ್ಯಕ್ರಮ ಉದ್ಧಾಟಿಸಿ ಮಾತನಾಡಿದರು.
ಒಬ್ಬ ಸಾಧಾರಣ ವ್ಯಕ್ತಿಯನ್ನು ಸಹ ಅವರು ಉತ್ತಮ ಕಲಾವಿದನನ್ನಾಗಿ ರೂಪಿಸುವ ಶಕ್ತಿ ಅವರಲ್ಲಿತ್ತು. ಶರಣರ ನಾಟಕಗಳನ್ನು ಅವರು ಸಾಮಾನ್ಯ ಜನರಿಗೆ ಮನಃ ಮುಟ್ಟುವಂತೆ ಕಟ್ಟಿ ಕೊಡುವ ಕಲೆ ಅವರಿಗೆ ಕರಗತವಾಗಿತ್ತು.
1980ರಲ್ಲಿ ರಾಷ್ಟೀಯ ನಾಟಕ ಶಾಲೆಯಲ್ಲಿ ಪದವಿ ಪಡೆದು ಬಂದ ನಂತರ ಇಡೀ ರಾಜ್ಯವೇ ಕಾರ್ಯಕ್ಷೇತ್ರ ಎಂಬಂತೆ ಓಡಾಡಿದರು. ಕಾಲಲ್ಲಿ ಚಕ್ರ ಕಟ್ಟಿಕೊಂಡವರಂತೆ ರಾಜ್ಯದ ಹಲವು ಊರುಗಳಲ್ಲಿ ಸಂಚರಿಸಿ ರಂಗ ಶಿಬಿರ ಹಾಗೂ ನಾಟಕಗಳನ್ನು ಅವರು ನಿರ್ದೇಶಿಸಿದರು.
ತಮ್ಮ ಕಲಾ ಸೇವೆಯಿಂದ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ಕಲಾವದರನ್ನು ಹುಟ್ಟುಹಾಕಿದ್ದಾರೆ ಎಂದರು.
ಕರ್ನಾಟಕ ಕಲಾ ಶ್ರೀ ಪ್ರಶಸ್ತಿ ಪುರಸೃತ ತೋಟಪ್ಪ ಉತ್ತಂಗಿ ಮಾತನಾಡಿ, ಅಶೋಕ ಬಾದರದಿನ್ನಿ ಅವರಲ್ಲಿ ನಾಟಕ ಹಾಗೂ ರೂಪಕಗಳಿಗೆ ಬೇಕಾದ ಸಂಗೀತದ ಜ್ಞಾನವಿತ್ತು. ಪೌರಪ್ರಜ್ಞೆ, ದಹನ, ಭಾವಕ್ಯತೆ, ಮಾರ್ಗದರ್ಶನ, ಬಾಳುಗೋಳು ಮುಂತಾದ ರೂಪಕಗಳಿಗೆ ಅವರೊಂದಿಗೆ ಸಂಗೀತ ನಿರ್ದೆಶಕನಾಗಿ ಹಾಗೂ ಗಾಯಕನಾಗಿ ಕಳೆದ ಸಮಯ ಸ್ಮರಣಿಯ. ಕೆಲವೇ ನಿಮಿಷಗಳಲ್ಲಿ ಅವರು ರೂಪಕಗಳನ್ನು ತಯಾರು ಮಾಡುತ್ತಿದ ಪರಿ ಎಂತಹವರನ್ನು ಬೆರಗುಗೊಳ್ಳಿಸುತ್ತಿತ್ತು ಎಂದು ತಿಳಿಸಿದರು.
ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಮಾತನಾಡಿ, ಅಶೋಕ ಬಾದರದಿನ್ನಿ ಅವರು ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಪರಿಸರ, ಮೂಡನಂಭಿಕೆ, ಕಂದಾಚಾರ ಮುಂತಾದ ರೂಪಕಗಳ ಮೂಲಕ ಮೌಡ್ಯಗಳನ್ನು ಕಿತ್ತೋಗೆಯುವಂತೆ ಸಮಾಜಕ್ಕೆ ಸಂದೇಶ ನೀಡಿದ್ದಾರೆ.
ರಂಗಭೂಮಿಗೆ ಅನೇಕ ಕಲಾವಿದರನ್ನು ಹಾಗೂ ಕಲಾ ತಂಡಗಳನ್ನು ಹಟ್ಟುಹಾಕುವಲ್ಲಿ ಪ್ರಥಮರಾಗಿದ್ದಾರೆ. ಅವರಿಂದ ತರಬೇತಿಗೊಂಡ ಅನೇಕ ಕಲಾ ತಂಡಗಳು ಇಂದು ರಾಷ್ಟಮಟ್ಟದಲ್ಲಿ ದಾಖಲೆಗಳನ್ನು ಸೃಷ್ಠಿಸಿದ್ದಾವೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಬಾದರದಿನ್ನಿ ಆರ್ಟ್ಸ್ ಅಕಾಡೆಮಿಯ ಅಧ್ಯಕ್ಷೆ ಅನಸೂಯ ಬಾದರದಿನ್ನಿ, ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ಜ್ಯೋತಿ ಬಾದರದಿನ್ನಿ, ಕಲಾವಿದೆ ಪದ್ಮ, ಕಲಾವಿದರಾದ ರಂಗನಾಥ್, ಗುರುಕಿರಣ, ವಿಷ್ಣು ಮತ್ತಿತರರು ಇದ್ದರು.