Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

Ashada Masa 2023 : ಆಷಾಢ ಮಾಸದಲ್ಲಿ ನವವಿವಾಹಿತರು ಒಂದು ತಿಂಗಳು ದೂರವಿರುತ್ತಾರೆ ಯಾಕೆ ? ಆಸಕ್ತಿಕರ ಮಾಹಿತಿ ಇಲ್ಲಿದೆ…!

Facebook
Twitter
Telegram
WhatsApp

ಹಿಂದೂ ಪಂಚಾಂಗದ ಪ್ರಕಾರ, ಆಷಾಢ ಮಾಸವು ಕನ್ನಡ ತಿಂಗಳುಗಳಲ್ಲಿ ನಾಲ್ಕನೆಯದು. ಈ ಅವಧಿಯಲ್ಲಿ ಹೊಸ ಜೋಡಿಗಳು ಒಂದು ತಿಂಗಳು ದೂರವಿರಬೇಕೆಂದು ಹಿರಿಯರು ಹೇಳುತ್ತಾರೆ. ಅತ್ತೆ ಸೊಸೆಯರು ಕೂಡಾ ಒಬ್ಬರನ್ನೊಬ್ಬರು ನೋಡದಿರುವ ಪದ್ಧತಿಯೂ ಹಿಂದೂ ಸಂಪ್ರದಾಯದಲ್ಲಿದೆ.

ಆಷಾಢ ಮಾಸವನ್ನು ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಶೂನ್ಯ ಮಾಸವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ಶ್ರೀ ಮಹಾವಿಷ್ಣು ಯೋಗ ನಿದ್ರೆಗೆ ಹೋಗುತ್ತಾನೆ. ಮತ್ತೊಂದೆಡೆ, ಆಷಾಢ ಮಾಸ ಬಂದಾಗ, ಹೊಸದಾಗಿ ಮದುವೆಯಾದ ದಂಪತಿಗಳು ಒಂದು ತಿಂಗಳ ಕಾಲ ದೂರವಿರುತ್ತಾರೆ. ನಮ್ಮಲ್ಲಿ ಮೊದಲಿನಿಂದಲೂ ಈ ಮಾಸದಲ್ಲಿ ಹೊಸ ಸೊಸೆಯ ಮುಖವನ್ನು ಅತ್ತೆಯು ನೋಡಬಾರದು ಮಯ ಹೊಸ ಅಳಿಯ ಅತ್ತೆಯ ಮನೆಗೆ ಹೋಗಬಾರದು ಎಂಬ ಸಂಪ್ರದಾಯವಿದೆ.

ಆದರೆ ಇಂದಿನ ಪೀಳಿಗೆಯ ದಂಪತಿಗಳು ಈ ಪದ್ಧತಿಯನ್ನು ಹೆಚ್ಚಾಗಿ ಅನುಸರಿಸುವುದಿಲ್ಲ.  ಇತ್ತೀಚಿನ ದಿನಗಳಲ್ಲಿ ಅನೇಕ ದಂಪತಿಗಳು ನಿಯಮಮಾತ್ರಕ್ಕೆ 5 ದಿನಗಳು ಸಾಕು ಎಂದು ಭಾವಿಸುತ್ತಾರೆ. ಇದೆಲ್ಲ ಬಿಡಿ, ಆಷಾಢದಲ್ಲಿ ನವ ಜೋಡಿಗಳು ಪರಸ್ಪರ ದೂರವಿರಬೇಕು ಎಂಬ ನಿಯಮದ ಹಿಂದಿನ ಕಾರಣಗಳೇನು ಎಂಬುದನ್ನು ತಿಳಿಯೋಣ….

ಕೆಲಸಗಳು ನಿಲ್ಲುತ್ತವೆ..

ಹಿಂದಿನ ಕಾಲದಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳು ಸುಮಾರು ಆರು ತಿಂಗಳ ಕಾಲ ಅತ್ತೆಯ ಮನೆಯಲ್ಲಿ ಇರುತ್ತಿದ್ದರು. ಆದರೆ ಆಷಾಢ ಮಾಸದಲ್ಲಿ ಮಳೆ ಧಾರಾಕಾರವಾಗಿ ಬೀಳುತ್ತದೆ. ನಮ್ಮದು ಕೃಷಿ ಪ್ರಧಾನ ದೇಶ. ಈ ಅವಧಿಯಲ್ಲಿ ಎಲ್ಲಾ ಕೃಷಿ ಕೆಲಸಗಳು ಪ್ರಾರಂಭವಾಗುತ್ತವೆ. ಆದರೆ ಹೊಸ ಅಳಿಯ ಹೆಂಡತಿಯ ವ್ಯಾಮೋಹಕ್ಕೆ ಒಳಗಾಗಿ ಏನೂ ಮಾಡದೆ ಅತ್ತೆಯ ಮನೆಯಲ್ಲಿಯೇ ಸುಮಾರು ಒಂದು ತಿಂಗಳ ಕಾಲ ಅಲ್ಲಿಯೇ ಇದ್ದು ಹಬ್ಬದ ಊಟವನ್ನು ಸವಿಯುತ್ತಾ ಅಲ್ಲಿಯೇ ಇದ್ದು ಬಿಡುತ್ತಾನೆ ಎಂಬ ಕಾರಣದಿಂದಾಗಿ ನಮ್ಮ ಹಿರಿಯರು ವಿಷೇಶವಾಗಿ ಈ ತಿಂಗಳಲ್ಲಿ ಈ ಪದ್ದತಿಯನ್ನು ಅನುಸರಿಸುತ್ತಿದ್ದರು ಎಂಬುದು ನಮ್ಮ ಸಂಪ್ರದಾಯ ಎಂದು ಹೇಳಲಾಗುತ್ತದೆ.

ಭಾರೀ ಮಳೆಯಿಂದಾಗಿ..

ಈ ಅವಧಿಯಲ್ಲಿ ಗರ್ಭಾವಸ್ಥೆಯು ತಾಯಿ ಮತ್ತು ಮಗುವಿಗೆ ಒಳ್ಳೆಯದಲ್ಲ. ಈ ಅವಧಿಯಲ್ಲಿ, ಗುಡುಗು, ಸಿಡಿಲು, ಮಳೆ ಮತ್ತು ಪ್ರವಾಹದಿಂದಾಗಿ ಜಲಾಶಯಗಳು, ನದಿಗಳು ಮತ್ತು ಕಾಲುವೆಗಳಲ್ಲಿನ ನೀರು ಕಲುಷಿತಗೊಳ್ಳುತ್ತದೆ. ಇದರಿಂದ ಈ ನೀರು ಬಳಸಿದವರಿಗೆ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಶೀತ ಜ್ವರ, ಅತಿಸಾರ ಮತ್ತು ತಲೆನೋವಿನಂತಹ ಆರೋಗ್ಯ ಸಮಸ್ಯೆಗಳ ಸಾಧ್ಯತೆಯಿದೆ. ಅದಕ್ಕಾಗಿಯೇ ಆಷಾಢದಲ್ಲಿ ಗರ್ಭ ಧರಿಸುವುದು ಒಳ್ಳೆಯದಲ್ಲ ಎಂದು ಈ ಪದ್ಧತಿಗಳನ್ನು ಆಚರಣೆಗೆ ತಂದರು ಎಂದು ನಂಬಲಾಗುತ್ತದೆ.

ತಂತ್ರಜ್ಞಾನ ದೂರವನ್ನು ಕಡಿಮೆ ಮಾಡುತ್ತದೆ :
ಆದರೆ ಇತ್ತೀಚಿನ ದಿನಗಳಲ್ಲಿ ನವಜೋಡಿಗಳು ದೈಹಿಕವಾಗಿ ದೂರವಾಗಿದ್ದರೂ ಆಧುನಿಕ ತಂತ್ರಜ್ಞಾನದಿಂದಾಗಿ ಮಾನಸಿಕವಾಗಿ ಹತ್ತಿರವಾಗುತ್ತಿದ್ದಾರೆ. ವಿಶೇಷವಾಗಿ ಸ್ಮಾರ್ಟ್‌ಫೋನ್‌ಗಳ ಆಗಮನದಿಂದ, ಜನರು ವೀಡಿಯೊ ಕರೆಗಳು, ಆಡಿಯೋ ಕರೆಗಳು, ವಾಟ್ಸಾಪ್, ಇನ್‌ಸ್ಟಾಗ್ರಾಮ್, ಟೆಲಿಗ್ರಾಮ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಸಹಾಯದಿಂದ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಆಷಾಢ ಮಾಸದ ನಂತರ ಬರುವ ಶ್ರಾವಣ ಮಾಸದಲ್ಲಿ ಹಿಂದೂ ಸಂಪ್ರದಾಯಲ್ಲಿ ಹಬ್ಬಗಳು ಆರಂಭವಾಗುತ್ತವೆ. ಹಾಗಾಗಿ ಕೆಲವರು ಆಷಾಢದ ಜೊತೆಗೆ ಶ್ರಾವಣದಲ್ಲಿಯೂ ಸಹಾ ತವರು ಮನೆಯಲ್ಲಿಯೇ ಇರುತ್ತಾರೆ.

ಸುಗಮ ಹೆರಿಗೆಗೆ..

ಈ ಸಮಯದಲ್ಲಿ ಗರ್ಭ ಧರಿಸಿದರೆ ಬೇಸಿಗೆಯಲ್ಲಿ ಹೆರಿಗೆಯಾಗುತ್ತದೆ. ಆ ಸಮಯದಲ್ಲಿ ಬಿಸಿಲು ಜಾಸ್ತಿ.. ತಾಪ ತಾಳುವುದು ತುಂಬಾ ಕಷ್ಟ. ಅದೇ ರೀತಿ ಬೇಸಿಗೆಯಲ್ಲಿ ಅತ್ತೆಯ ಮನೆಯಲ್ಲಿ ನವ ವಧುವಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ನವವಧುವನ್ನು ಅತ್ತೆ ಮನೆಗೆ ಕಳುಹಿಸುತ್ತಾರೆ.

ಸೂಚನೆ : ಇಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಗಳು ಮತ್ತು ಪರಿಹಾರಗಳು ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ.
ಇವುಗಳನ್ನು ಕೇವಲ ಊಹೆಗಳ ಆಧಾರದ ಮೇಲೆ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

14 ತಿಂಗಳ ಮಗುವಿಗೆ ಯಶಸ್ವಿ ಹೃದಯ ಕಸಿ : ಬೆಂಗಳೂರಿನಲ್ಲಿ ವೈದ್ಯರ ಅಪರೂಪದ ಸಾಧನೆ..!

ಬೆಂಗಳೂರು : ಇಲ್ಲಿನ ನಾರಾಯಣ ಹೃದಯಾಲಯದಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ 14 ತಿಂಗಳ ಮಗುವಿಗೆ ನಾರಾಯಣ ಆಸ್ಪತ್ರೆ ವೈದ್ಯರು ಹೃದಯ ಕಸಿ ಚಿಕಿತ್ಸೆ ಯಶಸ್ವಿಯಾಗಿ

ಚಿತ್ರದುರ್ಗ APMC : ಇಂದಿನ ಹತ್ತಿ ಮಾರುಕಟ್ಟೆ ಧಾರಣೆ…!

ಸುದ್ದಿಒನ್, ಚಿತ್ರದುರ್ಗ, ನವಂಬರ್. 23 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಶನಿವಾರ, ನವಂಬರ್. ,23 ) ಹತ್ತಿ ಮಾರುಕಟ್ಟೆ ಇದ್ದು, ಧಾರಣೆಯಾದ ಕನಿಷ್ಠ ಮತ್ತು ಗರಿಷ್ಠ ದರ ಈ ಕೆಳಕಂಡಂತೆ ಇದೆ. ಹತ್ತಿ

IND vs AUS TEST | ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಟೆದ ಜಸ್ಪ್ರೀತ್ ಬುಮ್ರಾ : ಈ ಸಾಧನೆ ಮಾಡಿದ ಇತರ ಭಾರತೀಯ ಆಟಗಾರರ ಮಾಹಿತಿ ಇಲ್ಲಿದೆ…!

ಸುದ್ದಿಒನ್ | ಟೀಂ ಇಂಡಿಯಾ ವೇಗಿ ಮತ್ತು ನಾಯಕ ಜಸ್ಪ್ರೀತ್ ಬುಮ್ರಾ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್‌ನಲ್ಲಿ ಶನಿವಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಐದು ವಿಕೆಟ್‌ಗಳನ್ನು ಗಳಿಸುವ ಮೂಲಕ ಇತಿಹಾಸ ದಾಖಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ

error: Content is protected !!