ಗ್ಯಾರೆಂಟಿ ಕಾರ್ಡ್ ವಿತರಿಸಿ ಆಶಾ ರಘು ಆಚಾರ್ ಕಾಂಗ್ರೆಸ್ ಪರ ಪ್ರಚಾರ

1 Min Read

 

ಚಿತ್ರದುರ್ಗ,(ಮಾ.05): ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಘು ಆಚಾರ್ ಅವರ ಪತ್ನಿ ಆಶಾ ರಘು ಆಚಾರ್ ಇಂದು ನಗರದ 25ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ವಿತರಿಸಿ ಪಕ್ಷದ ಪರ ಪ್ರಚಾರ ನಡೆಸಿದರು.

ಮಾರ್ಚ್ 10 ರಂದು ನಡೆಯಲಿರುವ ತಮ್ಮದೇ ಗೃಹ ಪ್ರವೇಶದ ತರಾತುರಿಯಲ್ಲಿರುವ ರಘು ಆಚಾರ್ ದಂಪತಿ, ಗೃಹ ಪ್ರವೇಶ ಆಮಂತ್ರಣ ಪತ್ರಿಕೆ ಕೊಡುವುದರಲ್ಲಿ ಇಷ್ಟು ದಿನ ಬ್ಯುಸಿಯಾಗಿದ್ರು. ಆದ್ರೆ ಭಾನುವಾರ ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರಕ್ಕಿಳಿದ ರಘು ಆಚಾರ್ ಪತ್ನಿ, ಮಹಿಳೆಯರಿಗೆ ಗ್ಯಾರೆಂಟ್  ಕಾರ್ಡ್ ವಿತರಿ ಅಚ್ಚರಿ ಮೂಡಿಸಿದರು.

ಈ ವೇಳೆ ತಮ್ಮ ಅಳಲನ್ನು ತೋಡಿಕೊಂಡ ಮಹಿಳೆಯರಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದ ಆಶಾ ರಘು ಆಚಾರ್, ಈ ಬಾರಿ ಎಲ್ಲರೂ ಒಟ್ಟಾಗಿ ಸಹಕರಿಸಿ, ನಾವೆಲ್ಲಾ ಸೇರಿ ಕಾಂಗ್ರೆಸ್ ಪಕ್ಷವನ್ನು ಧಿಕಾರಕ್ಕೆ ತರೋಣ, ಪಕ್ಷ ನೀಡಿರುವ ಗ್ಯಾರೆಂಟಿಯಂತೆ ಪ್ರತೀ ತಿಂಗಳು ಗೃಹಜ್ಯೋತಿ ಯೋಜನೆಯಡಿ ಉಚಿತವಾಗಿ 200 ಯುನಿಟ್ ವಿದ್ಯುತ್, ಮಹಿಳೆಯರಿಗೆ ಪ್ರತೀ ತಿಂಗಳು 2000 ರೂಪಾಯಿ ಸಹಾಯ ಧನ ಪಡೆಯುವ ಜೊತೆಗೆ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆಯನ್ನು ಕಡಿಮೆ ಮಾಡೋಣ, ನಾನು ನಿಮ್ಮೆಲ್ಲರ ಜೊತೆ ಇರುತ್ತೇನೆ, ಕೊಟ್ಟ ಮಾತಿನಂತೆ ನಿಮಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ಪಕ್ಷದ ಪರ ಪ್ರಚಾರದ ನಡುವೆಯೇ ಎಲ್ಲರಿಗೂ ಗೃಹ ಪ್ರವೇಶದ ಆಮಂತ್ರಣ ಪತ್ರಿಕೆಯನ್ನು ನೀಡಿ, ತಪ್ಪದೇ ಎಲ್ಲರೂ ಮಾರ್ಚ್ 10ರಂದು ನಮ್ಮ ಮನೆಯ ಗೃಹ ಪ್ರವೇಶಕ್ಕೆ ಕುಟುಂಬ ಸಮೇತರಾಗಿ ಬಂದು ನಮಗೆ ಆಶೀರ್ವಾದ ಮಾಡಿ ಎಂದು ಕೇಳುವ ಮೂಲಕ ಗಮನ ಸೆಳೆದರು.

ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ಡಿಎಸ್ಎಸ್ ಜಯಣ್ಣ ಅವರ ಪುತ್ರ ಪ್ರಸನ್ನ, ಜೆಜೆ ಹಟ್ಟಿ ಯುವಬಳಗದ ಶಶಿಕುಮಾರ್, ಮಲ್ಲಿಕಾರ್ಜುನ್, ಮುಖೇಶ್, ದೇವರಾಜ್, ಮುಬೇದುಲ್ಲಾ ಇತರರು ಭಾಗವಹಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *