ಬೆಳಗಾವಿ : ಯಾವುದೇ ಆರ್ಡರ್ ಕಾಪಿ ಇಲ್ಲದೆ ನಾಲ್ಕು ಕೋಟಿ ಯೋಜನೆ ಪೂರ್ಣ ಮಾಡಿ, ಹಣ ಬರಲಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಬಗ್ಗೆ ಬೆಳಗಾವಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ಐಹೊಳೆ ಮಾತನಾಡಿದ್ದು, ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಇಂಡಲಗ ಗ್ರಾ.ಪಂಚಾಯತಿಯ ಎಲ್ಲಾ ಸದಸ್ಯರು ಹಾಗೂ ಅಧ್ಯಕ್ಷರು ನಮ್ಮ ಚೇಂಬರ್ ಗೆ ಬಂದಿದ್ದರು. ನೂರು ವರ್ಷಕ್ಕೊಮ್ಮೆ ಮಹಾಲಕ್ಷ್ಮಿ ತಾಯಿ ಜಾತ್ರೆಯಾಗುತ್ತೆ. ಸಮಗ್ರ ಅಭಿವೃದ್ಧಿ ಕಾಮಗಾರಿಗೋಸ್ಕರ ನಮಗೆ ಲೆಟರ್ ಕೊಡಿ ಎಂದಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರ ಮುಖಾಂತರ ನಾನು ಲೆಟರ್ ಕೊಟ್ಟಿದ್ದೇನೆ.
ಪಂಚಾಯತ್ ರಾಜ್ ಇಲಾಖೆಗೆ ಲೆಟರ್ ಮುಟ್ಟಿದೆ. ಆ ಲೆಟರ್ ಬಗ್ಗೆ ಏನು ಆಕ್ಷನ್ ಆಗಿದೆ ಎಂಬುದು ಇಲ್ಲಿ ತನಕ ಏನು ಗೊತ್ತಿಲ್ಲ. ಕಳೆದ ವರ್ಷ ಮೇ 10ರಂದು ಎಲ್ಲ ಕಂಪ್ಲೀಟ್ ಆಗಿದೆ. ಅಲ್ಲಿಂದ ಇಲ್ಲಿವರೆಗೆ ಆ ಸುದ್ದಿ ಮುಂಜಾನೆ ಆ ಲೆಟರ್ ನೋಡಿದ್ದೇನೆ. ಕಾಂಟ್ರಾಕ್ಟರ್ ಪಾಟೀಲ್ ಸರ್ ಏನಿದ್ದಾರೆ ಅವರನ್ನು ಮುಖಾಮುಖಿ ನೋಡಿಲ್ಲ. ಒಂದು ಸಾರಿಯೂ ಮಾತನಾಡಿಲ್ಲ. ಮಾಧ್ಯಮದಲ್ಲಿ ಮೊದಲು ನೋಡಿದ್ದು. ಇಂಥ ದುರಂತ ಆಗಬಾರದಿತ್ತು. ತುಂಬಾ ದುಃಖ ಆಯ್ತು ಈ ಘಟನೆ ಕೇಳಿ.
ರಿಸಿವ್ಡ್ ಕಾಪಿ ಯಾವಾಗ್ಲೂ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚೇಂಬರ್ ಗೆ ಯಾವಾಗಲೂ ಬರಲ್ಲ. ಕಡತಗಳ ವಿಭಾಗಕ್ಕೆ ಸಲ್ಲಿಸುತ್ತಿದ್ದದ್ದು. ಸರ್ಕಾರ ಯಾವಾಗಲೂ ಮುಖ್ಯವಾದದ್ದಾರೆ ಸಭೆಗೋಸ್ಕರ ನಮಗೆ ತೋರಿಸುತ್ತಾರೆ. ಉಳಿದ ರಿಸೀವ್ಡ್ ಕಾಪಿ ನಮ್ಮ ಕಡೆ ಬರಲ್ಲ. ಕ್ಷೇತ್ರದ ಬಗ್ಗೆ ಇರಬಹುದು, ಮತ್ತೊಂದೆ ಆಗಲಿ ಮುಖ್ಯವಾದ ಕಾಪಿ ಆದರೆ ಮಾತ್ರ ಬರಲಿದೆ.
ಕಾಮಗಾರಿ ಆಗಬೇಕು ಅಂತ ಲೆಟರ್ ಕೊಡಿ ಅಂತ ನಮ್ಮ ಕಡೆ ಬರ್ತಾರೆ. ಆಮೇಲೆ ಆ ಕೆಲಸ ಆಗುತ್ತೆ, ಆಗಂಗಿಲ್ಲ ಏನು ರಿಪ್ಲೆ ಬರಂಗಿಲ್ಲ. ಸಂತೋಷ್ ಪಾಟೀಲ್ ವಿಚಾರ ಡೀಪ್ ಆಗಿ ಸ್ಟಡಿ ಆಗಬೇಕು. ನಾವೂ ಲೆಟರ್ ಕೊಟ್ಟಿದ್ದೀವಿ ಆದರೆ ಏನಾಗಿದೆ ನಮಗೆ ಗೊತ್ತಿಲ್ಲ ಎಂದು ಆಶಾ ಐಹೊಳೆ ಹೇಳಿದ್ದಾರೆ.