ಹೈದರಾಬಾದ್: ಮಸೀದಿಗಳ ಮೇಲಿನ ಧ್ವನಿವರ್ಧಕ ತೆಗೆಯುವ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಒವೈಸಿ ಎಲ್ಲಾ ಮಾಈದಿಗಳಿಗೆ ಕ್ಯಾಮೆರಾ ಅಳವಡಿಸಲು ಸೂಚನೆ ನೀಡಿದ್ದಾರೆ. ಹೈ ರೆಸ್ಯೂಲೋಷನ್ ಕ್ಯಾಮೆರಾ ಅಳವಡಿಸುವುದರಿಂದ ಕಲ್ಲು ತೂರಾಟ ನಡೆಸಿದವರ ಮಾಹಿತಿ ಸಿಗಲಿದೆ ಎಂದು ಕರೆ ನೀಡಿದ್ದಾರೆ.
ಧಾರ್ಮಿಕ ಮೆರವಣಿಗೆಗಳನ್ನು ರೆಕಾರ್ಡ್ ಮಾಡುವ ಸಲುವಾಗಿ ಕ್ಯಾಮೆರಾ ಅಳವಡಿಸಿ. ಇದರಿಂದ ಯಾರು ಕಲ್ಲು ತೂರಾಟ ಮಾಡಿದ್ದಾರೆಂದು ತಿಳಿಯುತ್ತದೆ. ಪೂಜಾ ಸ್ಥಳಗಳ ಕಾಯಿದೆ 1991ರ ಪ್ರಕಾರ ಧಾರ್ಮಿಕ ಕೇಂದ್ರಗಳಿಗೆ ಯಾವುದೇ ತೊಂದರೆಯುಂಟು ಮಾಡಬಾರದು ಎಂದು ಹೇಳಿದೆ. ಇದನ್ನು ಭಾರಯ ಸರ್ಕಾರ ಕೂಡ ಅಂಗೀಕರಿಸಿದೆ. ಸರ್ಕಾರವೇ ನ್ಯಾಯಾಲಯಕ್ಕೆ ಮನವರಿಕೆ ಮಾಡಬೇಕಿತ್ತು. ಆದರೆ ಸರ್ಕಾರ ಇದರಲ್ಲಿ ಮೌನವಹಿಸಿ, ದ್ವೇಷದ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ.
ಇತ್ತಿಚೆಗೆ ದೆಹಲಿ ಮತ್ತು ಮದ್ಯಪ್ರದೇಶದಲ್ಲಿ ನಡೆದ ಕೋಮುವಾದ, ಹಿಂಸಾಚಾರದ ಬಗ್ಗೆ ಮಾತನಾಡಿ, ಮಸೀದಿಗಳ ಮುಂದೆ ಇನ್ಮುಂದೆ ಕ್ಯಾನೆರಾ ಅಳವಡಿಸಿ ಎಂದು ಒವೈಸಿ ಕರೆ ನೀಡಿದ್ದಾರೆ.






GIPHY App Key not set. Please check settings