ನಿನ್ನೆ ರಾತ್ರಿ ನಡೆದ ರೈಲು ದುರಂತ ಎಲ್ಲರನ್ನು ಶಾಕ್ ಗೆ ಒಳಗಾಗಿಸಿದೆ. ದೇಶದಲ್ಲಿಯೇ ಇಂಥ ಘೋರ ರೈಲು ದುರಂತ ಇದೆ ಮೊದಲಾಗಿದೆ. ಎರಡು ಪ್ಯಾಸೆಂಜರ್ ಮತ್ತು ಒಂದು ಗೂಡ್ಸ್ ರೈಲು ಡಿಕ್ಕಿಯಾದ ಪರಿಣಾಮ ಬರೋಬ್ಬರಿ 233 ಜನ ಅಸುನೀಗಿದ್ದಾರೆ. 900 ಮಂದಿ ಗಾಯಗೊಂಡಿದ್ದಾರೆ. ಇನ್ನು ಕೂಡ ಜನರ ನರಳಾಟ ಜಾಸ್ತಿಯಾಗಿಯೇ ಇದೆ.
ಗಾಯಗೊಂಡವರಿಗೆ ಅಲ್ಲಿನ ಸ್ಥಳೀಯರೇ ರಕ್ತದಾನ ಮಾಡಿ ಕಾಪಾಡಿದ್ದಾರೆ. ಶಾಲಿಮಾರ್ – ಚೆನ್ನೈ ಕೊರೋಮಂಡಲ್ ಟ್ರೈನ್ ಮುಖಾಮುಖಿಯಾಗಿ ಈ ದುರ್ಘಟನೆ ಸಂಭವಿಸಿದೆ. ಟ್ರೈನ್ ಚಲಿಸುತ್ತಿದ್ದ ಬೋಗಿ ಬಿಟ್ಟು ಮತ್ತೊಂದು ಬೋಗಿಗೆ ಹೋಗಿ ಬಿದ್ದಿದ್ದವು. 10-12 ಕೋಚ್ ಗಳು ಹಳಿ ತಪ್ಪಿದ್ದವು. ಇದೆ ವೇಳೆ ಅದೇ ಟ್ರ್ಯಾಕ್ ನಲ್ಲಿ ಬೆಂಗಳೂರು – ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಬಂದು ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ಹೊಡೆದಿದೆ. ಇದರಿಂದ ಗೂಡ್ಸ್ ರೈಲು ಕೂಡ ಅಪಘಾತಕ್ಕೀಡಾಗಿದೆ.
NDRF ನ ಮೂರು ತಂಡಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿವೆ. ಅಷ್ಟೇ ಅಲ್ಲ ಒರಿಸ್ಸಾದ ಡಿಸಾಸ್ಟರ್ ರ್ಯಾಪಿಡ್ ಆಕ್ಷನ್ ಫೋರ್ಸ್ ತಂಡ ಕೂಡ ಕಾರ್ಯಾಚರಣೆಯಲ್ಲಿ ತೊಡಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಒಡಿಶಾದ ಜನ ಸಹಾಯಕ್ಕೆ ಧಾವಿಸಿದ್ದಾರೆ. ರಕ್ತದಾನ ಮಾಡಲು ಮುಂದಾಗಿದ್ದಾರೆ. ಸ್ಥಳೀಯರ ಮಾನವೀಯತೆ ಕಂಡು ಅಲ್ಲಿನ ವೈದ್ಯರು ಧನ್ಯವಾದ ತಿಳಿಸಿದ್ದಾರೆ.