
ಮೈಸೂರು: ಬಹಳ ದಿನಗಳಿಂದ ಪ್ರೀತಿಯಲ್ಲಿದ್ದ ಜೋಡಿ ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾವಿಷ್ಟಪಟ್ಟಂತೆ ಗಣಪತಿ ಆಶ್ರಮದಲ್ಲಿಯೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಆತ್ಮೀಯರ ಸಮ್ಮುಖದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

ಮದುವೆಯಲ್ಲಿ ಹರಿಪ್ರಿಯಾ ಮುದ್ದು ಮುದ್ದಾಗಿ ಕಂಗೊಳಿಸಿದ್ದಾರೆ. ನೀಲಿ ಬಣ್ಣದ ಸೀರೆಯನ್ನುಟ್ಟ ಹರಿಪ್ರಿಯಾ ಪಕ್ಕದಲ್ಲಿ ಪೇಟ ಧರಿಸಿ ಇಬ್ಬರು ಅದ್ಭುತವಾದ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನವ ವಧು ವರರಿಗೆ ನಿರೀಕ್ಷೆ ಮಾಡಿದಂತೆ ಶಿವಣ್ಣ, ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಸೇರಿದಂತೆ ಹಲವರು ಬಂದು ಹಾರೈಸಿದ್ದಾರೆ.
ಇನ್ನು ಮೈಸೂರಿನ ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್, ಎಸ್ ಟಿ ಸೋಮಶೇಖರ್ ಸೇರಿದಂತೆ ರಾಜಕಾರಣಿಗಳು, ಸಿನಿಮಾ ತಾರೆಯರು ಮದುಮಕ್ಕಳಿಗೆ ಹರಸಿ ಹಾರೈಸಿದ್ದಾರೆ. ಇಂದು ಆಶ್ರಮದಲ್ಲಿ ಮದುವೆಯಾಗಿದ್ದು, 28ರಂದು ಬೆಂಗಳೂರಿನಲ್ಲಿ ಇನ್ನು ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಳ್ಳಲಿದ್ದಾರೆ.

GIPHY App Key not set. Please check settings