ಮುಂಬೈ: ಬಾಲಿವುಡ್ ಬಾದ್ ಷಾ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ ನಲ್ಲಿ ಒಂದಷ್ಟು ದಿನ ಜೈಲುವಾಸ ಅನುಭವಿಸಿದ್ದು ಗೊತ್ತೆ ಇದೆ. ಆ ಬಳಿಕ ಜಾಮೀನಿನ ಮೇಲೆ ಹೊರಗು ಬಂದಿದ್ದಾರೆ. ಆದ್ರೆ ಇದೀಗ ಕೋರ್ಟ್ ಮತ್ತಷ್ಟು ರಿಲೀಫ್ ಕೊಟ್ಟಿದೆ.
ಆರ್ಯನ್ ಖಾನ್ ಗೆ ಕೋರ್ಟ್ ಷರತ್ತು ಬದ್ಧ ಜಾಮೀನು ವಿಧಿಸಿದಾಗ ಪ್ರತಿ ಶುಕ್ರವಾರ ಎನ್ಸಿಬಿ ಕಚೇರಿಗೆ ಬಂದು ಸಹಿ ಹಾಕಿ ಹೋಗಬೇಕು ಎಂಬ ಷರತ್ತು ವಿಧಿಸಿತ್ತು. ಅದರಂತೆ 6 ವಾರಗಳು ತಪ್ಪದೆ ಆರ್ಯನ್ ಖಾನ್ ಎನ್ ಸಿಬಿ ಕಚೇರಿಗೆ ಹೋಗಿ ಬಂದಿದ್ದರು.
ಈ ಸಂಬಂಧ ಬಾಂಬೆ ಹೈಕೋರ್ಟ್ ನಲ್ಲಿ ಆರ್ಯನ್ ಖಾನ್ ಮನವಿಯೊಂದನ್ನ ಮಾಡಿದ್ದರು. ಎನ್ ಸಿ ಬಿ ಕಚೇರಿಗೆ ಹೋಗುವ ವಿಚಾರವಾಗಿ ರಿಯಾಯಿತಿ ನೀಡಬೇಕೆಂದು. ಅದರಂತೆ ವಿಚಾರಣೆ ವೇಳೆ ಆರ್ಯನ್ ಖಾನ್ ಪರ ವಕೀಲರು ಆ ಬಗ್ಗೆ ನ್ಯಾಯಾಧೀಶರಿಗೆ ತಿಳಿಸಿದ್ದರು. ಆರ್ಯನ್ ಖಾನ್ ಕರೆದಾಗೆಲ್ಲಾ ವಿಚಾರಣೆಗೆ ಬರ್ತಾರೆ. ಅವರು ಎನ್ ಸಿ ಬಿ ಕಚೇರಿಗೆ ಬರುವಾಗ ಸಾಕಷ್ಟು ಭದ್ರತೆ ಬೇಕಾಗಿದೆ. ಅವರ ಕೇಸ್ ದೆಹಲಿಯಲ್ಲಿ ನಡೆಯುತ್ತಿದೆ. ಅಲ್ಲಿಗೆ ಹಾಜರಾಗಿ ಅಂದರೂ ಆಗ್ತಾರೆ. ಆದ್ರೆ ಈ ಪ್ರತಿ ಶುಕ್ರವಾರ ಎನ್ ಸಿ ಬಿ ಕಚೇರಿಗೆ ಬರುವ ಬಗ್ಗೆ ಸ್ವಲ್ಪ ರಿಯಾಯಿತಿ ನೀಡಿ ಎಂದು ಕೇಳಿದ್ದರು.
ಅವರ ಮನವಿ ಪುರಸ್ಕರಿಸಿರುವ ಬಾಂಬೆ ಹೈಕೋರ್ಟ್ ಪ್ರತಿ ಶುಕ್ರವಾರ್ ಹಾಜರಾತಿಗೆ ರಿಲೀಫ್ ನೀಡಿದೆ. ನ್ಯಾಯಮೂರ್ತಿ ಎನ್ಡಬ್ಲ್ಯೂ ಸಾಂಬ್ರೆ ಈ ರಿಯಾಯಿತಿ ನೀಡಿದ್ದಾರೆ.