ಹೊಸದಿಲ್ಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕುಡಿದಿದ್ದಾರೆ ಎಂದು ವಿಮಾನದಿಂದ ಇಳಿಸಲಾಯಿತು ಎಂಬ ಆರೋಪಗಳ ನಡುವೆ, ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಇಂದು (ಸೆಪ್ಟೆಂಬರ್ 20, 2022) ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಕೆಲಸದಲ್ಲಿ ತಪ್ಪು ಹುಡುಕಲಾಗದೆ ಪ್ರತಿಪಕ್ಷಗಳು ಸುಳ್ಳುಗಳನ್ನು ಹರಡುತ್ತಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗುಜರಾತಿನ ವಡೋದರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಸಿಎಂ, ಮನ್ ಸಾಹೇಬ್ ಅವರು ಕಳೆದ ಆರು ತಿಂಗಳಲ್ಲಿ ಮಾಡಿದ್ದನ್ನು ಪಂಜಾಬ್‌ನಲ್ಲಿ ಕಳೆದ 75 ವರ್ಷಗಳಲ್ಲಿ ಯಾವ ಸರ್ಕಾರವೂ ಮಾಡಿರಲಿಲ್ಲ. 75 ವರ್ಷಗಳ ನಂತರ ಪಂಜಾಬ್‌ಗೆ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮದ ಮುಖ್ಯಮಂತ್ರಿ ಸಿಕ್ಕಿದ್ದಾರೆ ಎಂದು ಹೇಳಿದ್ದಾರೆ.
ಇದೆಲ್ಲ ಸುಳ್ಳು, ಎಲ್ಲಾ ಅಸಂಬದ್ಧ. ಪ್ರತಿಪಕ್ಷಗಳು ಮಾನ್ ಅವರನ್ನು ತಡೆಯಲು ಪ್ರಯತ್ನಿಸುತ್ತಿವೆ ಆದರೆ ಜನರು ಎಲ್ಲದನ್ನು ನೋಡುತ್ತಿದ್ದಾರೆ. ಅವರ ಕೆಲಸದಿಂದ ಅವರು ಸಂತೋಷವಾಗಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.