ಉಡುಪಿ: ದೇಶಾದ್ಯಂತ ಎನ್ಐಎ ದಾಳೀ ನಡೆಸಿ, ಪಿಎಫ್ಐ ಸಂಘಟನೆಗೆ ಸಂಬಂಧಿಸಿದ ಎಲ್ಲೆಡೆ ದಾಳಿ ನಡೆಸಿದೆ. ಹಲವರನ್ನು ವಶಕ್ಕೂ ಪಡೆಯಲಾಗಿದೆ. ಈ ಸಂಬಂಧ ಇಂದು ಮಾತನಾಡಿದ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ನಮ್ಮ ರಾಷ್ಟ್ರವನ್ನು ಹಿಂದೂ ಸಂಸ್ಕೃತಿ ಆಧಾರದಲ್ಲಿಯೇ ಮತ್ತಷ್ಟು ಬಲಗೊಳಿಸಬೇಕು ಎಂದು ಹೇಳಿದ್ದಾರೆ.

ಭಾರತವನ್ನು ಎಂದಿಗೂ ಮುಸ್ಲಿಂ ರಾಷ್ಟ್ರವನ್ನಾಗಿಸಲು ಸಾಧ್ಯವಿಲ್ಲ. ಭಾರತ ಎಂದಿಗೂ ಹಿಂದೂ ರಾಷ್ಟ್ರ. ಹಿಂದೂ ಸಂಸ್ಕೃತಿಯ ಆಧಾರದ ಮೇಲೆಯೇ ಮತ್ತಷ್ಟು ಬಲಗೊಳಿಸಬೇಕಾಗಿದೆ. ಇದಕ್ಕೆ ಜನರ ಬೆಂಬಲವೂ ಇರಬೇಕು. ಭಾರತವನ್ನು ದುರ್ಬಲಗೊಳಿಸುವ ಕೆಲಸವನ್ನು ಯಾರು ಕೂಡ ಮಾಡಬಾರದು. ಪಿಎಫ್ಐ ಸಂಘಟನೆಯವರನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಗ್ಗು ಬಡಿಯುತ್ತದೆ. ಈಗ ಬಂಧಿತ ವ್ಯಕ್ತಿಗಳು ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲು ಬಯಸಿದ್ದರು ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಸಚಿವ ಸುನೀಲ್ ಕುಮಾರ್, ಅಶಾಂತಿ ಸೃಷ್ಟಿಸಿರುವವರ ಜೊತೆಗೆ ಕಾಂಗ್ರೆಸ್ ಸ್ನೇಹ ಬೆಳೆಸಿತ್ತು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳನ್ನು ಪೋಷಿಸಿದ್ದರು. ಆ ಸಮಯದಲ್ಲಿಯೇ 18 ಹಿಂದೂಗಳ ಕೊಲೆಯಾಗಿದ್ದರು, ಆರೋಪಿಗಳ ಕೇಸನ್ನು ವಾಪಾಸ್ ಪಡೆದಿದ್ದರು ಎಂದಿದ್ದಾರೆ.

