ವಂಚನೆ ಕೇಸ್ ನಲ್ಲಿ ಅರೆಸ್ಟ್.. ಸೋಷಿಯಲ್ ಮೀಡಿಯಾದಲ್ಲಿ ಫೇಮಸ್.. ಮೈತುಂಬಾ ಗೋಲ್ಡ್ : ಬಿಗ್ ಬಾಸ್ ಬಂದವರ ಹಿನ್ನೆಲೆ ಏನು..?

1 Min Read

ಬಿಗ್ ಬಾಸ್ ಕನ್ನಡ ಸೀಸನ್ 11 ಇಂದಿನಿಂದ ಅಧಿಕೃತವಾಗಿ ಚಾಲನೆ ಸಿಗುತ್ತಿದೆ. ಅದಕ್ಕೂ ಮುನ್ನ ನಿನ್ನೆ ದಿನವೇ ರಾಜಾರಾಣಿ ರಿಲೋಡೆಡ್ ಕಾರ್ಯಕ್ರಮದಲ್ಲಿ ಒಂದಷ್ಟು ಸ್ಪರ್ಧಿಗಳ ಹೆಸರನ್ನು ಅನೌನ್ಸ್ ಮಾಡಲಾಗಿದೆ. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಯತ್ನ ಈ ಬಾರಿಯ ಬಿಗ್ ಬಾಸ್ ನಲ್ಲಿ ನಡೆದಿದೆ. ಬಿಗ್ ಬಾಸ್ ಸ್ಪರ್ಧಿಗಳು ಅನೌನ್ಸ್ ಆದ ಕೂಡಲೇ ಅವರ ಹಿಸ್ಟರಿಯನ್ನು ಹುಡುಕುತ್ತಾ ಹೊರಟಿದ್ದಾರೆ ವೀಕ್ಷಕರು. ಯಾರೆಲ್ಲಾ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಈ ಬಾರಿಯ ಬಿಗ್ ಬಾಸ್ ಗೆ ಗೋಲ್ಡ್ ಸುರೇಶ್ ಕೂಡ ಬಂದಿದ್ದಾರೆ. ಈ ಗೋಲ್ಡ್ ಸುರೇಶ್, ಬೆಳಗಾವಿಯ ಅಥಣಿ ತಾಲೂಕಿನ ಕುಗ್ರಾಮದವರು. ಬೆಂಗಳೂರಿಗೆ ಬಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವ, ಕೆಲಸ ಬಿಟ್ಟು ಸ್ವಂತ ಕ್ರಿಯೇಟಿವ್ ಇಂಟಿರಿಯರ್ ಶುರು ಮಾಡಿ ಸಾಧಿಸಿ ತೋರೊಸಿದ್ದಾರೆ. ಸದಾ ಮೈಮೇಲೆ ಕೆಜಿಗಟ್ಟಲೇ ಚಿನ್ನವಿರುವ ಕಾರಣ ಗೋಲ್ಡ್ ಸುರೇಶ್ ಎಂದೇ ಖ್ಯಾತಿ ಪಡೆದಿದ್ದಾರೆ.

ಚೈತ್ರಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಭಾಷಣದ ಮಾಡುವ ಮೂಲಕವೇ ಖ್ಯಾತಿ ಪಡೆದಿದ್ದರು. ಜೋರು ಧ್ವನಿ. ಕೆಲ ವಿವಾದಗಳಿಗೆ ಸಿಲುಕಿ, ವಂಚನೆ ಪ್ರಕರಣದಲ್ಲಿ ಜೈಲು ಸೇರಿ ಬಂದ ಮೇಲೆ ಸೈಲೆಂಟ್ ಆಗಿದ್ದರು. ಈಗ ಬಿಗ್ ಬಾಸ್ ಮನೆಗೆ ಬರ್ತಿದ್ದಾರೆ.

ಇತ್ತೀಚೆಗೆ ವಿವಾದಾತ್ಮಕ ಆರೋಪಗಳಿಂದ ವಕೀಲ ಜಗದೀಶ್ ಭಾರೀ ಸುದ್ದಿ ಆಗುತ್ತಿದ್ದಾರೆ. ಮಾಧ್ಯಮಗಳ ಮುಂದೆ ತಮ್ಮ ಹೇಳಿಕೆಗಳಿಂದ ಗಮನ ಸೆಳೆಯುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ನಟ ದರ್ಶನ್ ಬಿಡುಗಡೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಸುದ್ದಿ ಮಾಡಿದ್ದರು. ಶಾಸಕರಾದ ಮುನಿರತ್ನ ವಿರುದ್ಧವೂ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಜಗದೀಶ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *