ಚೆನ್ನೈ: ತಮಿಳುನಾಡಿನ ಕೂನೂರು ನೀಲಗಿರಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡು, ಅಪಘಾತದಲ್ಲಿ ಈಗಾಗಲೇ 12 ಮಂದಿ ಸಾವನ್ನಪ್ಪಿದ್ದಾರೆ.ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಮುಖ್ಯಸ್ಥ ಬಿಪಿನ್ ರಾವತ್ ಕೂಡ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾವತ್ ಸಾವು ಬದುಕಿನ ನಡುವೆ ಹೋರಾಡಿ ಕೊನೆಯುಸಿರೆಳೆದಿದ್ದಾರೆ. ರಾವತ್ ಜೊತೆಗೆ ಅವರ ಪತ್ನಿ ಮಧುಲಿಕಾ ಕೂಡ ಸಾವನ್ನಪ್ಪಿದ್ದರು.
ಭಾರತೀಯ ವಾಯುಪಡೆಯು ಬಿಪಿನ್ ರಾವತ್ ಸಾವನ್ನು ದೃಢಪಡಿಸಿದೆ. ಅಪಘಾತದ ವೇಳೆ ಹೆಲಿಕಾಪ್ಟರ್ ನಲ್ಲಿ ಒಟ್ಟು 14 ಮಂದಿ ಇದ್ದರು.13 ಮಂದಿ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾವತ್ ಅವರು ತಮ್ಮ ಪತ್ನಿ ಮತ್ತು ಇತರ 12 ಮಂದಿಯೊಂದಿಗೆ ಸೇನೆಯ ಅಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಮಾರು 11.40 ಗಂಟೆಗೆ ವೆಲ್ಲಿಂಗ್ಟನ್‌ಗೆ ತೆರಳಿದರು. ವೆಲ್ಲಿಂಗ್ಟನ್ ಆರ್ಮಿ ಸೆಂಟರ್ ನಿಂದ ಹೊರಟ ಎಂಐ ಸಿರೀಸ್ ಹೆಲಿಕಾಪ್ಟರ್ ಸ್ವಲ್ಪ ಹೊತ್ತಿನಲ್ಲೇ ಕೂನೂರು ಬಳಿ ಪತನಗೊಂಡಿದೆ.