ಬಿಳಿ ಎಕ್ಕದ ಗಿಡವನ್ನ ದೇವರ ಸಮಾನವಾಗಿ ನೋಡುತ್ತೇವೆ. ದೇವರಿಗೆ ಪೂಜೆಗೆಂದು ಇಡುತ್ತೇವೆ. ಆದ್ರೆ ಇದರಲ್ಲೂ ಸಾಕಷ್ಟು ಔಷಧೀಯ ಗುಣಗಳು ಇದರಲ್ಲಿ ಅಡಗಿವೆ. ಆ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ನಿಮಗೂ ಆ ರೋಗ ಲಕ್ಷಣಗಳು ಕಂಡು ಬಂದ್ರೆ ಇದನ್ನ ಟ್ರೈ ಮಾಡಿ.
ಮೂಲವ್ಯಾದಿ ಸಮಸ್ಯೆ ಇರುವವರು ಎಕ್ಕದ ಹಾಲನ್ನು ಮೂಲವ್ಯಾಧಿಯ ಮೊಳಕೆಗೆ ಹಚ್ಚುವುದರಿಂದ ಮೂಲವ್ಯಾಧಿ ಪರಿಹಾರವಾಗುತ್ತದೆ ಎನ್ನಲಾಗಿದೆ.
ಚರ್ಮಕ್ಕೆ ಸಂಬಂದಿಸಿದ ಕಾಯಿಲೆ ಇದ್ದರೆ ಎಕ್ಕದ ಹಾಲು ಹಾಗೂ ಜೇನು ತುಪ್ಪವನ್ನು ಬೆರೆಸಿ ಹಚ್ಚಬೇಕು.
ಯಾವುದೇ ರೀತಿಯ ವಿಷ ಜಂತುಗಳು ಕಡಿದರೆ ಎಕ್ಕದ ಬೇರನ್ನು ಅರಿಶಿನದಿಂದ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ಕರಗುವುದು ಎಂದು ಹೇಳಲಾಗುತ್ತದೆ.
ಎಕ್ಕದ ಹಾಲನ್ನು ಕಾಲುಗಳಲ್ಲಿ ಮುಳ್ಳು ಚುಚ್ಚಿದ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬರುತ್ತದೆ.
ಎಕ್ಕೆ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಮೇಲೆ ಸೋಕಿಸಿ ಬೆನ್ನು ನೋವು, ಮಂಡಿನೋವು ಇರುವ ಕಡೆ ಶಾಕ ಕೊಟ್ಟರೆ ಕೆಲವೇ ದಿನದಲ್ಲಿ ಗುಣಮುಖರಾಗುತ್ತೇವೆ.
ಮುಖದ ಮೇಲೆ ಕಪ್ಪು ಚುಕ್ಕೆಗಳಿದ್ದರೆ, (ಬಂಗು) ಎಕ್ಕದ ಬೇರನ್ನು ನಿಂಬೇರಸದಲ್ಲಿ ತೇದು ಅದಕ್ಕೆ ಸ್ವಲ್ಪ ಅರಿಸಿನ ಸೇರಿಸಿ ಲೇಪಿಸಿ ಮೃದುವಾಗಿ ಹಚ್ಚಿಕೊಳ್ಳಬೇಕು.