ದಾವಣಗೆರೆ: ಮೆಕ್ಕೆಜೋಳ ವಿಚಾರವಾಗಿ ನಡೆದಿರುವ ಪ್ರತಿಭಟನೆಯ ಸಂದರ್ಭದಲ್ಲಿ ರೇಣುಕಾಚಾರ್ಯ ಮತ್ತು ಶಾಂತನಗೌಡ ನಡುವೆ ಮಾತಿನ ಚಕಮಕಿ ನಡೆದು ಕಡೆಗೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಹೊನ್ನಾಳಿಯಲ್ಲಿರುವ ಟಿಬಿ ಸರ್ಕಲ್ ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಬಂದ್ ಗೆ ಕರೆ ನೀಡಿದ್ದರು. ಈ ವೇಳೆ ಎರಡು ಪಕ್ಷದ ಕಾರ್ಯಕರ್ತರು ಕೂಡ ಪ್ರತಿಭಟನೆಯ ಜಾಗದಲ್ಲಿ ಜಮೆಯಾಗಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ರೇಣುಕಾಚಾರ್ಯ ಅವರ ವಿರುದ್ಧವೂ ಘೋಷಣೆಗಳು ಕೇಳಿ ಬಂದಿತ್ತು. ಮಿಸ್ಟರ್ ರೇಣುಕಾಚಾರ್ಯ ಅವರಿಗೆ ಧಿಕ್ಕಾರ ಧಿಕ್ಕಾರ ಎಂಬ ಮಾತುಗಳ ಕೇಳಿ ಬರ್ತಾ ಇತ್ತು. ಈ ವೇಳೆ ಇಬ್ಬರು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ದೊಡ್ಡ ಜಗಳವೇ ಆಗಿದೆ.
ರಸ್ತೆಗೆ ಮೆಕ್ಕೆಜೋಳ ಸುರಿದು ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಶಾಂತನಗೌಡ ಅವರು ರೇಣುಕಾಚಾರ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿಭಟನೆಯ ವೇಳೆ ನಡೆದ ಜಗಳದಿಂದ ಪರಿಸ್ಥಿತಿಯನ್ನು ಶಾಂತಗೊಳಿಸುವುದಕ್ಕೇನೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಮೆಕ್ಕೆಜೋಳಕ್ಕಾಗಿ ಕೇಂದ್ರ ತೆರೆಯುವ ವಿಚಾರಕ್ಕೆ ರೈತರು ದೊಡ್ಡ ಮಟ್ಟಕ್ಕೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದಿದೆ.
