ಬೆಂಗಳೂರು; ಅಡಿಕೆ ಬೆಳೆಗಾರರಿಗೆ ಬೆಲೆ ಏರಿಕೆಯಾದಷ್ಟು ಖುಷಿಯೋ ಖುಷಿ. ಇದೀಗ ಕಳೆದ ಎರಡು ತಿಂಗಳಿಗೆ ಹೋಲಿಕೆ ಮಾಡಿದರೆ ಅಡಿಕೆಧಾರಣೆ ಮಾರ್ಚ್ ನಲ್ಲಿ ತುಸು ಏರಿಕೆಯಾಗಿದೆ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ ಸೇರಿದಂತೆ ಹಲವು ಭಾಗದಲ್ಲಿ ಅಡಿಕೆಯ ಬೆಲೆ ಹೆಚ್ಚಾಗಿದೆ. ಹಬ್ಬದ ಸಂಭ್ರಮದಲ್ಲಿರೋ ಬೆಳೆಗಾರರಿಗೆ ಈಗ ಮತ್ತೆ ಅಡಿಕೆ ಬೆಲೆ ಹೆಚ್ಚಳ ಮತ್ತಷ್ಟು ಸಿಹಿಸ ತಿನ್ನುವಂತೆ ಮಾಡಿದೆ.

ದಾವಣಗೆರೆ ಜಿಲ್ಲೆಯಲ್ಲಿ ಕ್ವಿಂಟಾಲ್ ಅಡಿಕೆ ಬೆಲೆ ಗರಿಷ್ಠ ದರ 53,589 ರೂಪಾಯಿ ಆಗಿದೆ. ಚನ್ನಗಿರಿ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್ ಗೆ ಗರಿಷ್ಠ ದರ 53,589 ರೂಪಾಯಿ, ಕನಿಷ್ಠ ದರ 49,212 ರೂಪಾಯಿ ಇದ್ದು, ಸರಾಸರಿ ಬೆಲೆ 51,810 ರೂಪಾಯಿ ಇದೆ. ಬೆಟ್ಟೆ ಅಡಿಕೆ ಗರಿಷ್ಠ ದರ 25,786 ರೂಪಾಯಿ, ಕನಿಷ್ಠ ದರ 18,387 ರೂಪಾಯಿ, ಸರಾಸರಿ ದರ 23,267 ರೂಪಾಯಿ ಆಗಿದೆ. ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಿದ್ದ ಕ್ವಿಂಟಾಲ್ ಅಡಿಕೆ ದರ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಇನ್ನು ಮಾರ್ಚ್ ಎರಡನೇ ವಾರವೂ 53,000 ಗಡಿ ದಾಟಿದ್ದು, ಬಳಿಕ ಇಳಿಕೆಯಾಗಿತ್ತು. ಆದರೆ ಇದೀಗ ಮತ್ತೆ ಮಾರ್ಚ್ ಅಂತ್ಯದಲ್ಲಿ ಏರಿಕೆಯಾಗಿದೆ.

ಈ ಬಾರಿ ಉತ್ತಮ ಮಳೆಯಾಗಿದ್ದ ಕಾರಣ ಬೆಳೆಯನ್ನ ರೈತರು ಕಾಪಾಡಿಕೊಂಡರು. ಆದರೆ ಮಳೆಯೇ ಇಲ್ಲದ ಸಮಯದಲ್ಲಿ ಗಿಡಗಳನ್ನ ಕಾಪಾಡಿಕೊಳ್ಳುವುದಕ್ಕೆ ರೈತರು ಕೂಡ ಹರಸಾಹಸ ಸಿನಿಮಾಗಳನ್ನು ಪಟ್ಟಿದ್ದಾರೆ. ಅದರಲ್ಲೂ ತೆಂಗಿಗೆ ಕೀಟಗಳ ಸಮಸ್ಯೆಯೂ ಸಾಕಷ್ಟು ಕಾಟಕೊಟ್ಟಿದೆ. ಈ ಎಲ್ಲಾ ಸಮಸ್ಯೆಗಳನ್ನು ಪಕ್ಕಕ್ಕೆ ಸರಿಸಿ ರೈತರು ಬೆಳೆಯನ್ನು ಬೆಳೆದಿದ್ದಾರೆ.

