ದಾವಣಗೆರೆ ; ಬೇಸಿಗೆ ಹೆಚ್ಚಾಗಿದೆ. ಈ ಬೇಸಿಗೆಯಲ್ಲಿ ಅಡಿಕೆ ಗಿಡಗಳನ್ನ ಆರೋಗ್ಯವಾಗಿ ಇರುವಂತೆ ಕಾಪಾಡಿಕೊಳ್ಳುವುದೇ ಸಾಹಸದ ಕೆಲಸವಾಗಿರುತ್ತದೆ. ನೀರನ್ನ ಒದಗಿಸಿ, ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕಾಗುತ್ತದೆ. ಇಂಥಹ ಸಮಯದಲ್ಲಿ ಅಡಿಕೆಯ ಬೆಲೆ ಏನಾದರೂ ಕಡಿಮೆಯಾಗಿ ಬಿಟ್ಟರೆ ರೈತರ ಬೇಸರವಂತು ಹೆಚ್ಚಾಗುತ್ತದೆ. ಇಂದು ದಾವಣಗೆರೆ ಅಡಿಕೆ ಧಾರಣೆಯಲ್ಲಿ ಕೊಂಚ ಏರಿಕೆಯಾಗಿದೆ. ಗರಿಷ್ಠ ಬೆಲೆ 52,300 ರೂಪಾಯಿ ಆಗಿದೆ. ಹಾಗಾದ್ರೆ ಎಷ್ಟಕ್ಕೆ ಹೋಯ್ತು ಅನ್ನೋದರ ಮಾಹಿತಿ ಇಲ್ಲಿದೆ.

ಚನ್ನಗಿರಿ ರಾಶಿ ಅಡಿಕೆಯೂ ಪ್ರತಿ ಕ್ವಿಂಟಾಲ್ ಗೆ ಗರಿಷ್ಠ ಬೆಲೆ 52,300, ಕನಿಷ್ಠ ಬೆಲೆ 32,012, ಹಾಗೇ ಸರಾಸರಿ ಬೆಲೆ 49,669
ಬೆಟ್ಟೆ ಅಡಿಕೆ ದರ ಗರಿಷ್ಠ ಬೆಲೆ 25,287, ಕನಿಷ್ಠ ಬೆಲೆ 23,786, ಸರಾಸರಿ ಬೆಲೆ 24,536 ಇದೆ. ಸದ್ಯ ಅಡಿಕೆಯ ದರ ಏರಿಕೆಯಾಗುತ್ತಿರುವುದು ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿದೆ. ಜನವರಿ ಕೊನೆಯಲ್ಲಂತು 52 ಸಾವಿರಕ್ಕೆ ಬಂದು ನಿಂತಿತ್ತು. ಇನ್ನೆಲ್ಲಿ ಅಡಿಕೆ ಹೀಗೆ ಕಡಿಮೆಯಾಗಿ ಬಿಡುತ್ತದೋ ಎಂಬ ಆತಂಕ ರೈತರನ್ನು ಕಾಡಿತ್ತು. ಸದ್ಯ ಅಡಿಕೆಯ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಈ ಮೂಲಕ ಫೆಬ್ರವರಿಯಲ್ಲಿ ಮತ್ತೆ 53 ಸಾವಿರ ರೂಪಾಯಿ ಗಡಿ ದಾಟಿತ್ತು. ಆದ್ರೆ ಕಳೆದ ವರ್ಷವೇ 55 ಸಾವಿರದ ತನಕ ಅಡಿಕೆ ಬೆಲೆ ರೀಚ್ ಆಗಿತ್ತು. 2023ರ ಜುಲೈನಲ್ಲಿ ಗರಿಷ್ಠ ಬೆಲೆ 57 ಸಾವಿರ ಗಡಿ ದಾಟಿತ್ತು. 2024ರ ಮೇ ತಿಂಗಳಲ್ಲಿ 55 ಸಾವಿರದ ಗಡಿ ದಾಟಿತ್ತು. ಮತ್ತೆ ಆ ದಿನಗಳು ಬರುತ್ತವೆ ಎಂಬ ನಿರೀಕ್ಷೆ ಎಲ್ಲಾ ರೈತರಿಗೂ ಇದೆ. ಹೀಗಾಗಿಯೇ ಅಡಿಕೆಯ ಫಸಲನ್ನ ಗಮನವಿಟ್ಟು, ಕಾಳಜಿಯಿಂದ ಕಾಪಾಡಿಕೊಳ್ಳುತ್ತಿದ್ದಾರೆ.


