ನವದೆಹಲಿ: ದೇಶವನ್ನ ಹಸಿವು ಮುಕ್ತ ಮಾಡಬೇಕು ಅನ್ನೋದೆ ಎಲ್ಲರ ಆಸೆ. ಆದ್ರೆ ಅದು ಸಾಧ್ಯವಾಗಿದೆಯಾ..? ಸುಪ್ರೀಂ ಕೋರ್ಟ್ ಗೆ ಕೂಡ ಈ ಅನುಮಾನ ದಟ್ಟವಾಗಿದೆ. ಹೀಗಾಗಿಯೇ ಈ ಬಗ್ಗೆ ಸರ್ಕಾರಕ್ಕೆ ವರದಿ ಕೇಳಿದೆ.
2015-16 ರಲ್ಲಿ ಹಸಿವಿನಿಂದ ಸಾವನ್ನಪ್ಪಿರುವವರ ವರದಿಯನ್ನು ನೀಡದಿರುವ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸಿಜೆಐ ಎನ್ ವಿ ರಮಣ ಅವರ ನೇತೃತ್ವದಲ್ಲಿ, ದೇಶದಲ್ಲಿ ಹಸಿವಿನಿಂದ ಸಾವನ್ನಪ್ಪಿದವರ ಇತ್ತೀಚಿನ ದತ್ತಾಂಶವನ್ನ ಒದಗಿಸಿ ಎಂದು ಕೇಳಿದೆ.
ದೇಶದಲ್ಲಿ ಹಸಿವಿನಿಂದ ಸಾವು ಸಂಭವಿಸಿಲ್ಲ ಎಂದು ನೀವೂ ಹೇಳುತ್ತೀರಾ..? ನಾವೂ ಆ ಹೇಳಿಕೆಯನ್ನು ನಂಬಬಹುದೇ..? ಹಸಿವಿನಿಂದ ಸಾವನ್ನಪ್ಪಿರುವ ವರದಿಯನ್ನ ರಾಜ್ಯ ಸರ್ಕಾರಗಳು ಕೂಡ ಮಾಡಿಲ್ಲ. ಜನರು ಹಸಿವಿನಿಂದ ಬಳಲಬಾರದು, ಸಾಯಬಾರದು ಎಂಬುದು ನಮ್ಮ ಉದ್ದೇಶ. ನೋಡಲ್ ಯೋಜನೆಯನ್ನು ರೂಪಿಸಲು ನೀವೂ ನಿಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಪರಿಹಾರದ ಮಾರ್ಗವನ್ನ ಗುರುತಿಸಬೇಕಾಗಿದೆ ಎಂದು ಕೋರ್ಟ್ ಸಲಹೆ ನೀಡಿದೆ.
ವಿಚಾರಣೆಯ ಬಳಿಕ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಎರಡು ವಾರಗಳಿಗೆ ಮುಂದೂಡಿಕೆ ಮಾಡಿದೆ. ಅಲ್ಲಿಯವರೆಗೂ ಅಪೌಷ್ಟಿಕತೆ, ಹಸಿವು ಮತ್ತು ಇತರ ವಿಷಯಗಳು ಕುರಿತು ರಾಜ್ಯಗಳು ಹೆಚ್ಚುವರಿ ಅಫಿಡವಿಟ್‌ಗಳನ್ನು ಸಲ್ಲಿಸಬಹುದು ಎಂದು ತಿಳಿಸಿದೆ.